ಬೆಂಗಳೂರು: ಬಿಟ್ ಕಾಯಿನ್ ಕೆಸರೆರಚಾಟದಲ್ಲಿ ಪುತ್ರನನ್ನು ಎಳೆದು ತಂದ ಬಿಜೆಪಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ತಮ್ಮ ನಾಯಕತ್ವ ದುರ್ಬಲವಾಗುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ #Bitcoin ಆಸರೆಯಾಗಿದೆ.
ಆದರೆ, ಒಂದು ಚಿತ್ರ ಸಾವಿರ ಕತೆ ಹೇಳುತ್ತದೆ. ಮತ್ತೊಮ್ಮೆ ಆಗ್ರಹ ಈ ಚಿತ್ರದಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ.
8/n#Bitcoinಬುರುಡೆರಾಮಯ್ಯ pic.twitter.com/Rieraf3yhP
— BJP Karnataka (@BJP4Karnataka) November 18, 2021
Advertisement
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ರಾಕೇಶ್ ಈಗ ಬದುಕಿಲ್ಲ, ಅದರ ಬಗ್ಗೆ ಮಾತನಾಡಲ್ಲ. ಸತ್ತವರ ಬಗ್ಗೆ ಮಾತನಾಡುವವರಿಗೆ ಮಾನ ಮರ್ಯಾದೆ ಇಲ್ಲಾ. ಬಿಜೆಪಿಯವರು ಸುಮ್ಮನೆ ಬಿಟ್ ಕಾಯಿನ್ ಬಗ್ಗೆ ಮಾತಾಡ್ತಿದ್ದಾರಾ..? ಯಾಕೆ ಎಲ್ಲರೂ ರಿಯಾಕ್ಟ್ ಮಾಡ್ತಿದ್ದಾರೆ. ಅಲ್ಲಿಗೆ ಏನೋ ಇದೆ ಅಂತ ಆಯ್ತಲ್ಲ. ಬೆಂಕಿ ಇಲ್ಲದೆ ಹೊಗೆಯಾಡುತ್ತಾ…?. ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುತ್ತಿರುವುದು ಯಾಕೆ…?. ಸುಪ್ರಿಂ ಕೋರ್ಟ್ ಹಾಲಿ ನ್ಯಾಯ ಮೂರ್ತಿಗಳಿಂದ ನ್ಯಾಯಾಂಗ ತನಿಖೆ ಆಗಲಿ. ಎಲ್ಲವೂ ತನಿಖೆ ಆಗಲಿ 2013 ರಿಂದಲೂ ತನಿಖೆ ನಡೆಸಲಿ ಆದರೆ ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.
Advertisement
ಮಾನ್ಯ #Bitcoinಬುರುಡೆರಾಮಯ್ಯ,
ನಿಮ್ಮ ಅವಧಿಯಲ್ಲಿ ನಡೆದ ಈ ಹಗರಣವನ್ನು ಮುಚ್ಚಿ ಹಾಕುವುದು ನಿಮಗೆ ತೀರಾ ಅನಿವಾರ್ಯವಾಗಿತ್ತು.
ಅಪ್ರಿಯವಾದ ಸತ್ಯ ಹೇಳುತ್ತೇವೆ, ಇಲ್ಲಿ ನಿಮ್ಮ ಅತ್ಯಾಪ್ತರೇ ಇದ್ದರು ಎಂಬ ಅನುಮಾನಕ್ಕೆ ಈ ಚಿತ್ರ ಪುಷ್ಠಿ ನೀಡುತ್ತಿದೆ.
ಸತ್ಯ ಅನಾವರಣವಾಗುವ ಭಯಕ್ಕೆ ನೀವು #UTurn ತೆಗೆದುಕೊಳ್ಳುತ್ತಿದ್ದೀರಿ ಅಲ್ಲವೇ?
6/n pic.twitter.com/R6QBNqgrJj
— BJP Karnataka (@BJP4Karnataka) November 18, 2021
Advertisement
ಬಿಟ್ ಕಾಯಿನ್ ಹಗರಣ ಯಾರ ಕಾಲದಲ್ಲೇ ನಡೆದಿರಲಿ. ಒಂದು ನ್ಯಾಯಾಂಗ ತನಿಖೆ ಮಾಡಿಸಿ. ನಮ್ಮ ಕಾಲದ ಅವಧಿಯನ್ನೂ ಸೇರಿಸಿಯೇ ನ್ಯಾಯಾಂಗ ತನಿಖೆಗೆ ಕೊಡಿ. ಯಾರು ತಪ್ಪು ಮಾಡಿದ್ದಾರೆ ಗೊತ್ತಾಗುತ್ತಲ್ಲ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್.ಐ.ಟಿ ರಚನೆ ಮಾಡಿ ತನಿಖೆಗೆ ಕೊಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಟ್‍ಕಾಯಿನ್ ಹಗರಣ – ರಾಕೇಶ್ ಸಿದ್ದರಾಮಯ್ಯ ಹೆಸರು ಎಳೆದು ತಂದ ಬಿಜೆಪಿ
Advertisement
ಮಾನ್ಯ #Bitcoinಬುರುಡೆರಾಮಯ್ಯ ಅವರೇ,
ಈ ಚಿತ್ರದಲ್ಲಿರುವ ಸುನೀಶ್ ಹೆಗ್ಡೆ & ಹೇಮಂತ್ ಜೊತೆಗಿರುವ ಎಲ್ಲರನ್ನು ನೀವು ಗುರುತಿಸಬಲ್ಲಿರಿ ಎಂಬುದು ನಮ್ಮ ನಂಬಿಕೆ.
ಆ ನಂಬಿಕೆ ನಿಜವೇ ಆದರೆ #Bitcoin ಹ್ಯಾಕಿಂಗ್ ದಂಧೆ ನಿಮ್ಮ ಕಾಲದಲ್ಲೇ ಆರಂಭವಾಗಿತ್ತು.
ಸಿದ್ದರಾಮಯ್ಯನವರೇ, ಆ ಬಗ್ಗೆ ನೀವು ಸ್ಪಷ್ಟ ಮಾಹಿತಿ ಹೊಂದಿದ್ದೀರಿ ಅಲ್ಲವೇ?
3/n pic.twitter.com/4VzMouJx5E
— BJP Karnataka (@BJP4Karnataka) November 18, 2021
ಶ್ರೀಕಿ ಬಂಧಿಸಿದಾಗ ಗೃಹ ಸಚಿವರಾಗಿದ್ದವರು ಬೊಮ್ಮಾಯಿ ಅವರಲ್ಲವೇ..? ಶ್ರೀಕಿಯಿಂದ ಬಿಟ್ ಕಾಯಿನ್ ವರ್ಗಾವಣೆಗೆ ಪೊಲೀಸರು wallet ಮಾಡಿಕೊಂಡಿದ್ರು. wallet ಗೆ ವರ್ಗಾವಣೆಯಾದ 0.8 ಬಿಟ್ ಕಾಯಿನ್ ಏನಾಯ್ತು..?ಇದಕ್ಕೆ ಉತ್ತರ ಕೊಡಬೇಕು ಅವರು. ಅಧಿವೇಶನ ಬರಲಿ, ಪಕ್ಷದಲ್ಲಿ ಚರ್ಚಿಸಿ ಬಿಟ್ ಕಾಯಿನ್ ಹಗರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಸಿಎಂ ಬೊಮ್ಮಾಯಿ ಅವರ ಪಾತ್ರವಿದೆ ಅಂತ ನಾನು ನೇರವಾಗಿ ಹೇಳಲ್ಲ. ತನಿಖೆ ನಡೆಯಬೇಕು ಆಗಲೇ ಸತ್ಯ ಬಹಿರಂಗಗೊಳ್ಳಲಿದೆ. ನನ್ನ ಬಳಿ ದಾಖಲೆಗಳಿಲ್ಲ ಆಧಾರ ಇಲ್ಲದೆ ನಾನು ಮಾತಾಡಲ್ಲ ಎಂದರು.