ಅಮರಾವತಿ (ನಂದ್ಯಾಳ): ಒಂದೇ ಕುಟುಂಬದ ಐವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀಶೈಲದ (Srisailam) ವಡ್ಡೇರಾದ ಖಾಸಗಿ ಹೋಟೆಲ್‌ನಲ್ಲಿ ನಡೆದಿದೆ.
ಮೃತರನ್ನು ಸುಧಾಕರ್ (36), ಗೋಗುಳ ಆದಿಲಕ್ಷ್ಮಿ (50), ಮಲ್ಲೇಶ್ವರಿ (45), ಶ್ರೀದೇವಿ (33) ಮತ್ತು ಮಣಿಕಂಠ (15) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಬಟ್ಟಲಪಲ್ಲಿ ಗ್ರಾಮಕ್ಕೆ (Battalapalli Village) ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.
శ్రీశైలంలోని వడ్డెర సత్రంలో విషాదం
ఒకే కుటుంబానికి చెందిన ఐదుగురు ఆత్మహత్య
గదిలోని హాలులో ఫ్యాన్ కు ఉరేసుకుని ఇద్దరు ఆత్మహత్య
స్నానాల గదిలో ముగ్గురు మహిళలు ఆత్మహత్య
ఆర్దిక ఇబ్బందులే ఆత్మహత్యకు కారణమని అనుమానం
ఘటనా స్థలాన్ని పరిశీలించిన ఆత్మకూరు డీఎస్పీ రామాంజనేయులు pic.twitter.com/cGmIlBH6IR
— Telugu Feed (@Telugufeedsite) August 25, 2026
ಏನಾಗಿತ್ತು?
ಜುಲೈ 28 ರಂದು (ಕಳೆದ ತಿಂಗಳು) ಮೃತ ಕುಟುಂಬದವರು ಆಟೋದಲ್ಲಿ (Auto) ಬಂದಿದ್ದಾರೆ. ವಡ್ಡೇರಾದ ಖಾಸಗಿ ಹೋಟೆಲ್‌ನಲ್ಲಿ ರೂಮ್ ವೊಂದನ್ನ ಪಡೆದುಕೊಂಡಿದ್ದಾರೆ (ರೂಮ್ ಸಂಖ್ಯೆ 11). ರೂಮ್ ಪಡೆದುಕೊಂಡು ಮೂರು ದಿನ ಕಳೆದ್ರೂ ಹೊರಗೆ ಬಾರದಿದ್ದರಿಂದ ಹೋಟೆಲ್ ವ್ಯವಸ್ಥಾಪಕರು ಅನುಮಾನಗೊಂಡಿದ್ದಾರೆ, ರೂಮ್ ಬಳಿ ಹೋದಾಗ ಕೆಟ್ಟ ವಾಸನೆ ಬರುತ್ತಿದ್ದುದ್ದನ್ನೂ ಗಮನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಾಗಿಲು ತೆಗೆದು ಕೊಠಡಿಯೊಳಗೆ ಹೋಗಿ ಪರಿಶೀಲಿಸಿದ್ದಾರೆ. ಅಲ್ಲಿ ಸ್ನಾನ ಗೃಹದಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಪತ್ತೆಯಾಗಿದ್ದಾರೆ.
ಮೇಲ್ನೋಟಕ್ಕೆ ಆರ್ಥಿಕ ಸಮಸ್ಯೆ ಕಾರಣ ಎಂದು ಹೇಳಲಾಗಿದೆ, ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
