ಮಂಗಳೂರು: ಮೀನುಗಾರಿಕಾ ಬೋಟ್‌ನ (Fishing Boat) ತಳಭಾಗ ಕಲ್ಲಿಗೆ ಬಡಿದು ಮುಳುಗಡೆಯಾದ ಘಟನೆ ಅಳಿವೆಬಾಗಿನಲ್ಲಿ ನಡೆದಿದೆ.
ಆಯಾನ್ ಹೆಸರಿನ ಬೋಟ್ ಕಲ್ಲಿಗೆ ಬಡಿದಿದೆ. ಇದರಿಂದ ನೀರು ಒಳನುಗ್ಗಿ ಬೋಟ್ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಇತರೆ ಬೋಟ್‌ನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ಇದನ್ನೂ ಓದಿ: ಕಾರವಾರ | ಬೋಟ್‌ಗೆ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂ. ನಷ್ಟ
ಆಳ ಸಮುದ್ರ ಮೀನುಗಾರಿಕೆಗೆ ಪರ್ಸಿನ್ ಬೋಟ್ ತೆರಳಿತ್ತು. ಮೀನುಗಾರಿಕೆ ಮುಗಿಸಿ ಮುಳುತ್ತಿದ್ದಾಗ ಅಳಿವೆ ಬಾಗಿಲಿನಲ್ಲಿ ಈ ದುರಂತ ನಡೆದಿದೆ. ಇಬ್ರಾಹಿಂ ಖಲೀಲ್ ಎಂಬವರಿಗೆ ಈ ಬೋಟ್ ಸೇರಿದ್ದು, ಮುಳುಗಡೆಯಿಂದಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಇದನ್ನೂ ಓದಿ: ವಿಯೆಟ್ನಾಂ ದ್ವೀಪದಲ್ಲಿ 32 ಭಾರತೀಯ ಪ್ರವಾಸಿಗರಿದ್ದ ಬೋಟ್ ಮುಳುಗಡೆ – 15 ಮಂದಿ ದುರ್ಮರಣ

