ರಾಮನಗರ: ಬಿಗ್ ಬಾಸ್ ಸೀಸನ್- 5ರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಿಗ್ ಬಾಸ್ ಸೆಟ್ ಸುಟ್ಟು ಕರಕಲಾದ ಘಟನೆ ರಾಮನಗರದ ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದಿದೆ.
ಸುಮಾರು 3 ಗಂಟೆಗೆ ಬಿಗ್ ಬಾಸ್ ಮನೆಯಲ್ಲಿರುವ ಸ್ವಾಗತ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅಗ್ನಿ ದುರಂತ ಸಂಭವಿಸಿದೆ. ಸುಮಾರು 13 ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಹಾಸ ಪಡುತ್ತಿದ್ದಾರೆ.
Advertisement
Advertisement
ಇಡೀ ಬಿಗ್ ಬಾಸ್ ಸೆಟ್‍ಗೆ ಬೆಂಕಿ ಆವರಸಿಕೊಂಡಿದ್ದು, ಮೇಣದ ಮ್ಯೂಸಿಯಂನಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹಲವು ಮೇಣದ ಪ್ರತಿಮೆಗಳು ಬೆಂಕಿಗೆ ಆಹುತಿಯಾಗಿದೆ. ವೀಡಿಯೋ ಎಡಿಟಿಂಗ್ ಹಾಗೂ ಬಿಗ್ ಬಾಸ್ ಮನೆಯ ರೆಸ್ಟ್ ಆವರಣದವರೆಗೂ ಹಾಗೂ ಸ್ಪರ್ಧಿಗಳು ಕೂತು ಹರಟೆ ಹೊಡೆಯುತ್ತಿದ್ದ ಅಂಗಳದವರೆಗೂ ಬೆಂಕಿ ವ್ಯಾಪಿಸಿದೆ.
Advertisement
Advertisement
ಹೆಚ್ಚಿನದ್ದಾಗಿ ಮರದ ಹಲಗೆಗಳಿಂದ ಈ ಮನೆ ನಿರ್ಮಿಸಿದ್ದು, ಬಿಗ್ ಬಾಸ್ ಮನೆಯ ಒಳಗೆಲ್ಲ ಬೆಂಕಿ ಆವರಿಸಿಕೊಂಡಿದೆ. ಈಗಾಗಲೇ ಒಟ್ಟು 13 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಈಗ ಬೆಂಕಿ ನಂದಿಸಲು ಮತ್ತೆರಡು ವಾಹನಗಳ ಆಗಮಿಸಿದೆ. ರಾಮನಗರ, ಕನಕಪುರದಿಂದ 9 ಅಗ್ನಿಶಾಮಕ ವಾಹನ, ಬಾಷ್ ಮತ್ತು ಟೊಯೋಟಾ ಕಂಪನಿಗಳ 3 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ನಿಯಂತ್ರಣಕ್ಕೆ ಬಾರದ ಬೆಂಕಿ ನಂದಿಸಲು ಅಗ್ನಿಶಾಮಕ ಪಡೆ ಹರಸಾಹಸ ಪಡುತ್ತಿದ್ದಾರೆ.
ಈ ಅಗ್ನಿ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.