ಬೆಂಗಳೂರು: ಉಪಚುನಾವಣೆ ಸೋಲುವ ಭಯದಿಂದ ಬಿಜೆಪಿ-ಜೆಡಿಎಸ್ ವಕ್ಫ್ ವಿವಾದವನ್ನ ಮಾಡ್ತಿದೆ ಅಂತಾ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆರೋಪಿಸಿದ್ದಾರೆ.
ಮತ್ತೆರಡು ಜಿಲ್ಲೆ ರೈತರ ಜಮೀನು ಮತ್ತು ಸಿಂದಗಿ ಮಠದ ಜಾಗ ವಕ್ಫ್ ಆಸ್ತಿ ಅಂತಾ ನಮೂದು ಆಗಿರೋ ವಿಚಾರಕ್ಕೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇದು ಬಿಜೆಪಿ-ಜೆಡಿಎಸ್ ಮಾಡ್ತಿರೋ ರಾಜಕೀಯ ಎಂದು ಕಿಡಿಕಾರಿದರು.
Advertisement
Advertisement
ಸಚಿವ ಎಂ.ಬಿ.ಪಾಟೀಲ್ ಅವರು ಎಲ್ಲಾ ವಿವರಣೆ ಕೊಟ್ಡಿದ್ದಾರೆ. ಯಾರು ಬೇಕಾದರೂ ಇದು ನಮ್ಮ ಆಸ್ತಿ ಕ್ಲೈಮ್ ಮಾಡಬಹುದು. ಆದರೆ ಅದಕ್ಕೆ ಬೇಕಾಗಿರೋದು ದಾಖಲಾತಿ. ದಾಖಲಾತಿ ಇದ್ದರೆ ಏನು ತೊಂದರೆ ಇಲ್ಲ ಅಂತಾ ನಿನ್ನೆ ಸಚಿವರು ಹೇಳಿದ್ದಾರೆ. ವಕ್ಫ್ ಅದಾಲತ್ ಆದಾಗ ನಮ್ಮ ಜಾಗ ಅಂತಾ ಕೆಲವರು ಹೇಳಿದ್ದಾರೆ. ಆದರೆ ಅದಕ್ಕೆ ಯಾರು ಆತಂಕ ಪಡೋ ಅಗತ್ಯ ಇಲ್ಲ. ಈಗಾಗಲೇ ಸರ್ಕಾರ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ರೈತರ ಜಾಗ ಸರ್ಕಾರ ವಾಪಸ್ ಪಡೆಯೊಲ್ಲ. ಯಾರೂ ಆತಂಕ ಪಡೋ ಅಗತ್ಯ ಇಲ್ಲ ಎಂದರು.
Advertisement
ಬಿಜೆಪಿ-ಜೆಡಿಎಸ್ ಅವರು ರಾಜಕೀಯ ಮಾಡೋಕೆ ಮಾಡ್ತಿದ್ದಾರೆ. ಯಾವುದು ದಾಖಲಾತಿ ಇರುತ್ತೋ ಆ ಆಸ್ತಿ ರೈತರಿಗೆ ಇರುತ್ತೆ. ಆದರು ಬಿಜೆಪಿ-ಜೆಡಿಎಸ್ ಅವರು ವಿವಾದ ಮಾಡ್ತಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ಗೆ ಸೋಲುವ ಭೀತಿ ಇದೆ. ಹೀಗಾಗಿ ವಿವಾದ ಮಾಡ್ತಿದ್ದಾರೆ. ಹಿಂದೂ-ಮುಸ್ಲಿಂ ಅಂತಾ ಮಾಡಿದ್ರೆ ಗೆಲ್ಲಬಹುದು ಅನ್ನೋದು ಇವರ ಪ್ಲ್ಯಾನ್ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
Advertisement
ರೈತರ ಜಮೀನಿಗೆ ವಕ್ಫ್ ಬೋರ್ಡ್ ನೋಟಿಸ್ ಒಂದು ಸಮುದಾಯ ಒಲೈಕೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಪ್ರಿಯಾಂಕ್ ಖರ್ಗೆ, ಅನುಕೂಲಕ್ಕೆ ತಕ್ಕಂತೆ ಕುಮಾರಸ್ವಾಮಿ ನಡೆದುಕೊಳ್ಳುತ್ತಿದ್ದಾರೆ. ರಾಜಕೀಯ ಲಾಭ ಮಾಡೋಕೆ ಇವರು ಹೀಗೆ ಹೇಳ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ಆಗಿ ಹುಟ್ಟಬೇಕು ಅಂತಾ ಹೇಳಿದ್ದು ಯಾರು? ದೇವೇಗೌಡರು ಹಾಗೆ ಹೇಳಿದ್ರು. ಅದನ್ನ ಕುಮಾರಸ್ವಾಮಿ ಮರೆತು ಹೋಗಿದ್ರಾ? ಓಲೈಕೆ ರಾಜಕೀಯ ಮಾಡ್ತಿರೋರು ಯಾರು ಅಂತಾ ಪ್ರಶ್ನೆ ಮಾಡಿದ್ರು. ಇದೇ ಕುಮಾರಸ್ವಾಮಿ ಆರ್ಎಸ್ಎಸ್ ಬಗ್ಗೆ ಏನ್ ಮಾತಾಡಿದ್ರು ಎಲ್ಲರಿಗೂ ಗೊತ್ತಿದೆ. ಲೇಖನ ಕೂಡಾ ಬರೆದಿದ್ದರು. ಅಧಿಕಾರ ಕೊಟ್ಟಾಗ ಎಲ್ಲವೂ ಉಲ್ಟಾ ಆಗುತ್ತಾ? ನಾನು ಅವತ್ತೇ RSS ವಿರೋಧ ಮಾಡಿದ್ದೆ, ಇವತ್ತು ವಿರೋಧ ಮಾಡ್ತಿದ್ದೇನೆ. ಕುಮಾರಸ್ವಾಮಿ ಅವರು ಅಂದು ವಿರೋಧ ಮಾಡಿ ಇಂದು ಅಧಿಕಾರಕ್ಕಾಗಿ ಹೀಗೆ ಮಾತಾಡೋದು ಸರಿಯಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.