ವಾಷಿಂಗ್ಟನ್: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ಆಫ್ ಇನ್‌ವೆಸ್ಟಿಗೇಷನ್ (FBI) ನಿರ್ದೇಶಕರಾಗಿರುವ ಭಾರತ ಮೂಲದ ಕಾಶ್ ಪಟೇಲ್ (Kash Patel) ಇದೀಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.
ಅಧಿಕೃತ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಎಫ್‌ಬಿಐ ನಿರ್ದೇಶಕರು ತಮ್ಮ ಗೆಳತಿ ಅಲೆಕ್ಸಿಸ್ ವಿಲ್ಕಿನ್ಸ್ (Alexis Wilkins) ಅವರೊಂದಿಗೆ ಖಾಸಗಿ ಕ್ಷಣಗಳನ್ನ ಕಳೆದಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಅಮೆರಿಕದ ಎಫ್‌ಬಿಐಗೆ ಗುಜರಾತ್ ಮೂಲದ ಕಾಶ್ ಪಟೇಲ್ ಬಾಸ್ – ನೇಮಕವಾದ ಬೆನ್ನಲ್ಲೇ ಬಿಗ್ ವಾರ್ನಿಂಗ್

ಏನಿದು ಡೇಟಿಂಗ್ ವಿವಾದ?
2025 ರ ಮೇ 10 ರಂದು ಕಾಶ್ ಪಟೇಲ್ ತಮ್ಮ 27 ವರ್ಷದ ಗೆಳತಿ ಅಲೆಕ್ಸಿಸ್ ವಿಲ್ಕಿನ್ಸ್ ಜೊತೆಗೆ ಎಫ್‌ಬಿಐ ಗಲ್ಫ್‌ಸ್ಟ್ರೀಮ್-ವಿ ಜೆಟ್ ನಲ್ಲಿ ವಾಷಿಂಗ್ಟನ್‌ನಿಂದ ಫಿಲಡೆಲ್ಫಿಯಾಕ್ಕೆ ಪ್ರಯಾಣಿಸಿದ್ದರು. ಅಲ್ಲಿ ಪ್ರಸಿದ್ಧ ತಾರೆಗಳಾದ ಜಾರ್ಜ್ ಸ್ಟ್ರೈಟ್ ಮತ್ತು ಕ್ರಿಸ್ ಸ್ಟ್ಯಾಪಲ್ಟನ್ ಅವರ ಸಂಗೀತ ಕಚೇರಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕಾಶ್ ಪಟೇಲ್ ಸುಮಾರು 50,000 ಡಾಲರ್ ಅಂದ್ರೆ 47.98 ಲಕ್ಷ ರೂ. ಮೌಲ್ಯದ ಸೂಟ್ ಧರಿಸಿದ್ದರು ಎಂದು ಹೇಳಲಾಗಿದೆ.
ಈ ಕಾರ್ಯಕ್ರಮಕ್ಕಾಗಿ ಎಫ್‌ಬಿಐ ವಿಮಾನ ಸಿಬ್ಬಂದಿ ಹಾಗೂ ಭದ್ರತಾ ಅಧಿಕಾರಿಗಳು ರಾತ್ರಿ 11 ಗಂಟೆವರೆಗೆ ಕಾಶ್ ಪಟೇಲ್ ಅವರಿಗೆ ಭದ್ರತೆ ನೀಡಿದ್ದರು. ಆ ಸಮಯದಲ್ಲಿ ಕಾಶ್ ಪಟೇಲ್ ಸಂಗೀತ ಕಚೇರಿ ಮುಗಿದ ಬಳಿಕ ತಮ್ಮ ಗೆಳತಿ ಜೊತೆಗೆ ಡೇಟಿಂಗ್ ಮಾಡಿದ್ದರು. ಹೀಗಾಗಿ ಸರ್ಕಾರಿ ಭದ್ರತಾ ವ್ಯವಸ್ಥೆಯನ್ನ ದುರುಪಯೋಗಪಡಿಸಿಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿಬಂದಿವೆ. ಇದನ್ನೂ ಓದಿ: PUBLiC TV Explained | ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬಿಕ್ಕಟ್ಟು – ಭಾರತದಿಂದ ರಫ್ತು ಬಂದ್, ದಿಢೀರ್ ಸಮಸ್ಯೆ ಶುರುವಾಗಿದ್ದೇಕೆ?

ಆರೋಪ ನಿರಾಕರಿಸಿದ ಎಫ್‌ಬಿಐ
ಸಾಲು ಸಾಲು ಟೀಕೆಗಳ ಹೊರತಾಗಿಯೂ ಎಫ್‌ಬಿಐ ಕಾಶ್ ಪಟೇಲ್ ಅವರ ವಿರುದ್ಧ ಆರೋಪಗಳನ್ನ ತಳ್ಳಿಹಾಕಿದೆ. ಅಲೆಕ್ಸಿಸ್ ವಿಲ್ಕಿನ್ಸ್ ಕಾರ್ಯಕ್ರಮದ ಅಧಿಕೃತ ಆಹ್ವಾನಿತ ಅತಿಥಿಯಾಗಿದ್ದರು, ಜೊತೆಗೆ ಈ ಪ್ರವಾಸ ಅಧಿಕೃತ ಕಾರ್ಯಕ್ರಮದ ಭಾಗವಾಗಿತ್ತು ಎಂದು ಎಫ್‌ಬಿಐ ವಕ್ತಾರ ಬೆನ್ ವಿಲಿಯಮ್ಸನ್ ಹೇಳಿದ್ದಾರೆ.
ಕಾಶ್ ಪಟೇಲ್ ಅವರ ಪ್ರಯಾಣ ವಿವಾದಕ್ಕೆ ಗುರಿಯಾಗಿರುವುದು ಇದೇ ಮೊದಲೇನಲ್ಲ. ಹವಾಯಿ ಪರ್ಲ್ ಹಾರ್ಬರ್‌ನಲ್ಲಿರುವ ಯುಎಸ್‌ಎಸ್ ಅರಿಜೋನಾ ಸ್ಮಾರಕದ ಬಳಿ ʻವಿಐಪಿ ಸ್ನಾರ್ಕೆಲ್ ಪ್ರವಾಸʼಕ್ಕಾಗಿ ಹೋದಾಗ ಟೀಕೆಗೆ ಗುರಿಯಾಗಿದ್ದರು. ಅಲ್ಲದೇ, ಮಿಲನ್ ಚಳಿಗಾಲದ ಒಲಿಂಪಿಕ್ಸ್ ಸಮಯದಲ್ಲಿ, ಪಟೇಲ್ ಅವರ ವೀಡಿಯೊ ವೈರಲ್ ಆಗಿತ್ತು. ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು ಪರಿಹಾರಕ್ಕೆ ಭಾರತವೇ ಸೂಕ್ತ: ರಷ್ಯಾ ವಿದೇಶಾಂಗ ಸಚಿವ

