LatestLeading NewsMain PostNational

ಹರ್‌ ಘರ್‌ ತಿರಂಗ – ಭಯೋತ್ಪಾದಕರ ಕುಟುಂಬ ಸದಸ್ಯರಿಂದ ತ್ರಿವರ್ಣ ಧ್ವಜ ಹಾರಾಟ

ಶ್ರೀನಗರ: ಪರಾರಿಯಾಗಿರುವ ಭಯೋತ್ಪಾದಕರ ಕುಟುಂಬದ ಸದಸ್ಯರು, 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ʼಹರ್‌ ಘರ್‌ ತಿರಂಗʼ ಅಭಿಯಾನ ಕೈಗೊಂಡಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ಗೌರವ ಸಲ್ಲಿಸುವಂತೆ ಕೇಂದ್ರ ಸರ್ಕಾರ ಕರೆ ನೀಡಿದೆ. ಇದನ್ನೂ ಓದಿ: ತ್ರಿವರ್ಣ ಧ್ವಜ ಭಾರತೀಯರಿಗಷ್ಟೇ ಅಲ್ಲ, ವಿದೇಶದಲ್ಲಿರುವ ಪ್ರಜೆಗಳಿಗೂ ರಕ್ಷಣಾತ್ಮಕ ಗುರಾಣಿ: ಮೋದಿ ಬಣ್ಣನೆ

ಹರ್‌ ಘರ್‌ ತಿರಂಗ ಅಭಿಯಾನದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಧ್ವಜವನ್ನು ಹಾರಿಸಲಾಗುತ್ತಿದೆ. ಹೀಗಾಗಿ ಪರಾರಿಯಾಗಿರುವ ಇಬ್ಬರು ಭಯೋತ್ಪಾದಕರ ಕುಟುಂಬದವರು ದೋಡಾದಲ್ಲಿರುವ ತಮ್ಮ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾವು ಪ್ರತಿವರ್ಷವೂ ಸ್ವಾತಂತ್ರ್ಯ ದಿನದಂದು ತಿರಂಗವನ್ನು ಹಾರಿಸುತ್ತೇವೆ. ನನ್ನ ಸಹೋದರ ಪಾಕಿಸ್ತಾನದಲ್ಲಿ ಭಯೋತ್ಪಾದಕ. ಅವನು ಅಪ್ರಾಪ್ತನಾಗಿದ್ದಾಗಲೇ ಅಲ್ಲಿಗೆ ಹೋಗಿ ಸೇರಿಕೊಂಡಿದ್ದಾನೆ. ಅವನು ಅದೆಲ್ಲವನ್ನು ಬಿಟ್ಟು ಹಿಂತಿರುಗಬೇಕೆಂದು ನಾವು ಬಯಸುತ್ತೇವೆ ಎಂದು ಕುಟುಂಬ ಸದಸ್ಯರು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಹರ್ ಘರ್ ತಿರಂಗ’ ರ‍್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್‍ಗೆ ತಿವಿದ ಹಸು

Live Tv

Leave a Reply

Your email address will not be published.

Back to top button