– ಪ್ರಶಾಂತ್ನ 4ನೇ ಕಂಪನಿಯಿಂದ ನಕಲಿ ಔಷಧ ಸೇಲ್
ಬೆಂಗಳೂರು: ನಕಲಿ ಔಷಧಿ (Fake Medicine) ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ಪಿನ್ ಪ್ರಶಾಂತ್ ರಾಜನ್ ವಿಚಾರ ಬಗೆದಷ್ಟು ಬಯಲಾಗುತ್ತಿದೆ. ಈಗಾಗಲೇ ಮೂರು ಕಂಪನಿಗಳನ್ನು ಸ್ಥಾಪಿಸಿ ನಕಲಿ ಔಷಧ ಮಾರಾಟ ಮಾಡಿದ್ದ ಆರೋಪ ಎದುರಿಸುತ್ತಿರುವ ಪ್ರಶಾಂತ್, ನಾಲ್ಕನೇ ಕಂಪನಿಯ ಮೂಲಕವೂ ನಕಲಿ ಔಷಧ ಮಾರಾಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
14 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ಔಷಧ ಮಾರಾಟ:
ಪ್ರಶಾಂತ್ ರಾಜನ್ಗೆ ಸಂಬಂಧಿಸಿದ ನಕಲಿ ಔಷಧ ಮಾರಾಟದ ಜಾಲದಲ್ಲಿ 14 ಕೋಟಿಗೂ ಹೆಚ್ಚು ಮೌಲ್ಯದ ಔಷಧ ಮಾರಾಟವಾಗಿರುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮೂರು ಕಂಪನಿಗಳನ್ನು ಸ್ಥಾಪಿಸಿ ವ್ಯವಹಾರ ನಡೆಸಿದ್ದ ಆತ, ಬಳಿಕ ಆ ಕಂಪನಿಗಳನ್ನು ಮುಚ್ಚಿದ್ದಾನೆ. ಈ ಕಂಪನಿಗಳಿಗೆ ಸಂಬಂಧಿಸಿದ ಕೋಟಿ ಕೋಟಿ ರೂಪಾಯಿಗಳ ವ್ಯವಹಾರದ ದಾಖಲೆಗಳನ್ನೂ ನಾಶಪಡಿಸಲಾಗಿದೆ. ಇದನ್ನೂ ಓದಿ: ಸ್ಕಂದಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ವೇಳೆ ಯುವಕನಿಗೆ ವಿಷಕಾರಿ ಹಾವು ಕಡಿತ
ಒಂದೇ ಔಷಧಕ್ಕೆ ಹೊಸ ಬಾಟಲಿ, ಹೊಸ ಲೇಬಲ್:
ಕಿಂಗ್ಪಿನ್ ಪ್ರಶಾಂತ್ ನಕಲಿ ಔಷಧ ಮಾರಾಟಕ್ಕೆ ಹೊಸ ತಂತ್ರ ಬಳಸಿರುವುದು ತನಿಖಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಅದೇ ಔಷಧವನ್ನು ಹೊಸ ಬಾಟಲಿಯಲ್ಲಿ ತುಂಬಿ, ಲೇಬಲ್ ಬದಲಾಯಿಸಿ ಮಾರಾಟ ಮಾಡಿರುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಯೋಗಾಲಯದ ವರದಿಯಲ್ಲೂ ಅದೇ ಔಷಧ ಪತ್ತೆಯಾಗಿರುವುದು ಪ್ರಕರಣದ ತನಿಖೆಗೆ ಮಹತ್ವದ ಸುಳಿವು ನೀಡಿದೆ. ಇದನ್ನೂ ಓದಿ: ಕಂಬಳಕ್ಕೆ ವಿದ್ಯುಕ್ತ ಚಾಲನೆ – ಇಂದಿನಿಂದ 2 ದಿನ ದಸರೆಯಲ್ಲಿ ಕರಾವಳಿ ಸಂಸ್ಕೃತಿಯ ಸಂಭ್ರಮ
ಪ್ರಶಾಂತ್ ರಾಜನ್ನ ನೈಜ ವ್ಯವಹಾರ ಮತ್ತು ನಕಲಿ ಔಷಧ ಜಾಲದ ಸಂಪೂರ್ಣ ಮಾಹಿತಿಯನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಔಷಧದ ಲೇಬಲ್ಗಳನ್ನು ಮೂಲ ಔಷಧ ತಯಾರಿಕಾ ಕಂಪನಿಗೆ ರವಾನಿಸಿ, ಔಷಧದ ನೈಜತೆ ಹಾಗೂ ಲೇಬಲ್ಗಳ ಅಸಲಿಯತ್ತಿನ ಬಗ್ಗೆ ಮಾಹಿತಿ ಪಡೆಯಲು ತನಿಖಾಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಇದನ್ನೂ ಓದಿ: Kolkata Stampede | ದುರ್ಗಾ ಪೆಂಡಾಲ್ ಆಯೋಜಕರು ಸೇರಿದಂತೆ 7 ಮಂದಿ ಅರೆಸ್ಟ್
