– ಮೈಸೂರು ದಸರಾ ಸಂಭ್ರಮಕ್ಕೆ ಕರಾವಳಿಯ ಕ್ರೀಡಾ ಪರಂಪರೆಯ ಮೆರುಗು
ಮೈಸೂರು: ವಿಶ್ವವಿಖ್ಯಾತ ದಸರಾ ಕಂಬಳಕ್ಕೆ (Kambala) ಇಂದು ವಿದ್ಯುಕ್ತ ಚಾಲನೆ ದೊರೆತಿದ್ದು, ದಸರಾ ಮಹೋತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಕಂಬಳದ ಸಂಭ್ರಮ ಮನೆಮಾಡಿದೆ.
ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಮೈಸೂರಿನ (Mysuru) ಸಾತಗಳ್ಳಿಯ ವಿ.ಟಿ.ಯು ಕಾಲೇಜು ಸಮೀಪ ಕಂಬಳಕ್ಕೆ ವೇದಿಕೆ ಸಿದ್ಧವಾಗಿದೆ. ಸುಮಾರು 20 ಎಕರೆ ಪ್ರದೇಶದಲ್ಲಿ ಕಂಬಳಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಕೋಣಗಳ ಓಟಕ್ಕಾಗಿ ಸುಮಾರು 147 ಮೀಟರ್ ಉದ್ದದ ಎರಡು ಸಮಾನಾಂತರ ಟ್ರ್ಯಾಕ್ಗಳ ನಿರ್ಮಾಣ ಮಾಡಲಾಗಿದೆ.
ಕೋಣಗಳ ವೇಗ, ಜಾಕಿಗಳ ಕೌಶಲ್ಯ ಮತ್ತು ರೋಚಕ ಸ್ಪರ್ಧೆ ಕಂಬಳದ ಪ್ರಮುಖ ಆಕರ್ಷಣೆ ಆಗಿದ್ದು, ಕಂಬಳ ಕರೆಗೆ ಪೂಜೆ ಸಲ್ಲಿಸುವ ಮೂಲಕ ಕಂಬಳವನ್ನ ಪುತ್ತೂರು ಶಾಸಕ ಅಶೋಕ್ ರೈ ಉದ್ಘಾಟಿಸಿದ್ದಾರೆ.
ಸಂಜೆ 6 ಗಂಟೆಯಿಂದ ಕಂಬಳ ಓಟ ನಡೆಯಲಿದ್ದು, ನಾಳೆ ಸಂಜೆ 7 ಗಂಟೆಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಭಾಗಿಯಾಗಲಿರುವ ಸಿಎಂ ಡಿಕೆ ಶಿವಕುಮಾರ್ ಅವರು ನಾಳೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ.


