
ಹೈದರಾಬಾದ್: ನಕಲಿ ಪ್ರಮಾಣ ಪತ್ರವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಕನ್ಸಲ್ಟೆನ್ಸಿ ಮಾಲೀಕ ಸೈಯದ್ ನವೀದ್ ಅಲಿಯಾಸ್ ಫೈಸಲ್ ಹಾಗೂ ಡಿಟಿಪಿ ಆಪರೇಟರ್ ಸೈಯದ್ ಓವೈಸ್ ಅಲಿ ಬಂಧಿತ ಆರೋಪಿಗಳು.
ಹೈದರಾಬಾದ್‌ನ ಬಶೀರ್‌ಬಾಗ್‌ನ ಬಾಬುಖಾನ್ ಎಸ್ಟೇಟ್‌ನ 7ನೇ ಮಹಡಿಯಲ್ಲಿರುವ ಕನ್ಸಲ್ಟೆನ್ಸಿ ಕ್ಯೂಬೆಜ್ ಓವರ್‌ಸೀಸ್ ಎಜುಕೇಶನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮೇಲೆ ದಾಳಿ ನಡೆಸಿದ ಪೊಲೀಸರು, ನಕಲಿ ಶೈಕ್ಷಣಿಕ ಪ್ರಮಾಣಪತ್ರ ಹಾಗೂ ದಾಖಲೆಗಳ ದಂಧೆಯನ್ನು ಭೆದಿಸಿದ್ದಾರೆ. ಆರೋಪಿಗಳು ವಿದ್ಯಾರ್ಥಿಗಳಿಗೆ ಪದವಿ, ಬಿ.ಟೆಕ್ ಮತ್ತು ಇತರ ನಕಲಿ ದಾಖಲೆಗಳ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡುತ್ತಿದ್ದರು.
ಆರೋಪಿಗಳಿಂದ 220 ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳು, 63 ತೆಲಂಗಾಣ ವಿಶ್ವವಿದ್ಯಾಲಯ ಬಿ.ಕಾಮ್ ಪದವಿ ಪ್ರಮಾಣಪತ್ರಗಳು, 130 ಆಂಧ್ರ ವಿಶ್ವವಿದ್ಯಾಲಯ ಬಿ.ಟೆಕ್ ಪ್ರಮಾಣಪತ್ರಗಳು, 27 ಮಹಾರಾಷ್ಟ್ರದ ಶಾಲೆಯ ಪ್ರಮಾಣಪತ್ರದ ಜೊತೆಗೆ ಆರು ಕಂಪ್ಯೂಟರ್‌ಗಳು, ಎರಡು ಸ್ಕ್ಯಾನಿಂಗ್ ಮಷಿನ್, ನಾಲ್ಕು ಲ್ಯಾಪ್‌ಟಾಪ್‌ಗಳು, ಒಂದು ಪ್ರವೇಶ ರಿಜಿಸ್ಟರ್ ಹಾಗೂ ಮೂರು ಖಾಲಿ ಪ್ರಮಾಣ ಪತ್ರಗಳ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಶಂಕೆ- ಮಗ ಸಾವು
ಆರೋಪಿಯು ಪ್ರಮಾಣ ಪತ್ರ ಪಡೆಯುತ್ತಿದ್ದ ಅಭ್ಯರ್ಥಿಯಿಂದ 50,000 ರೂ. ದಿಂದ 75,000 ರೂ.ಗಳವರೆಗೂ ಹಣ ವಸೂಲಿ ಮಾಡುತ್ತಿದ್ದರು. ಓವೈಸ್ ಅಲಿ ಸೈಯದ್ ನವೀದ್‌ಗೆ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂದು ಹೈದರಾಬಾದ್ ಹಿರಿಯ ಪೊಲೀಸ್ ಅಧಿಕಾರಿ ಅಂಜನಿ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ