ಕೋಲ್ಕತ್ತಾ: ಬೌಲರ್‌ಗಳ ಶಿಸ್ತುಬದ್ಧ ದಾಳಿ ಹಾಗೂ ಕನ್ನಡಿಗ ಮನೀಶ್ ಪಾಂಡೆ(Manish Pandey) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್(Kolkata Knight Riders) ತಂಡವು ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ ತಂಡವು ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ತನ್ನ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಮಳೆಯಿಂದಾಗಿ ಅಡಚಣೆಗೊಳಗಾದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್, ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಸುಲಭದ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾ ಇನ್ನೂ 7 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 148 ರನ್ ಹೊಡೆದು ಟೂರ್ನಿಯಲ್ಲಿ 6ನೇ ಜಯ ಸಾಧಿಸಿತು.
148 ರನ್‌ಗಳ ಸುಲಭದ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡ 54 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಮನೀಶ್ ಪಾಂಡೆ ಮತ್ತು ಪೊವೆಲ್ ಜೋಡಿ ಉತ್ತಮ ಪ್ರದರ್ಶನ ನೀಡಿತು. ಈ ಜೋಡಿ 4ನೇ ವಿಕೆಟ್‌ಗೆ 48 ಎಸೆತಗಳಲ್ಲಿ ಮಹತ್ವದ 64 ರನ್‌ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹಳಿಗೆ ತಂದಿತು.
Power and placement combining brilliantly for @KKRiders 💪
🎥 Glimpses of Rovman Powell and Manish Pandey’s match-defining stand of 6️⃣4️⃣ 👌
Updates ▶️ https://t.co/Aw11jLoww5#TATAIPL | #KhelBindaas | #KKRvMI pic.twitter.com/J3VjAKO8WY
— IndianPremierLeague (@IPL) May 20, 2026
ಜವಾಬ್ದಾರಿಯುತವಾಗಿ ಆಡಿದ ಮನೀಶ್ ಪಾಂಡೆ 33 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡ 45 ರನ್ ಗಳಿಸಿದ್ದಾಗ ಜಸ್ಪ್ರಿತ್ ಬುಮ್ರಾ ಎಸೆತದಲ್ಲಿ ಬೌಲ್ಡ್ ಆದರು. ಉತ್ತಮವಾಗಿ ಆಡುತ್ತಿದ್ದ ಪೊವೆಲ್ 40 ರನ್(30 ಎಸೆತ, 4 ಬೌಂಡರಿ, 2 ಸಿಕ್ಸ್) ಹೊಡೆದು ಕಾರ್ಬಿನ್ ಬಾಷ್ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಔಟಾದರು. ಕೊನೆಯಲ್ಲಿ ತೇಜಸ್ವಿ ದಹಿಯಾ 11 ರನ್, ರಿಂಕು ಸಿಂಗ್ ಔಟಾಗದೇ 9 ರನ್, ಅನುಕುಲ್ ರಾಯ್ ಔಟಾಗದೇ 4 ರನ್ ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.
ಆರಂಭಿಕ ಆಟಗಾರ ರೋಹಿತ್ ಶರ್ಮಾ 15 ರನ್ ಹಾಗೂ ಸೂರ್ಯಕುಮಾರ್ ಯಾದವ್ 15 ರನ್ ಗಳಿಸಿ ಬೇಗನೇ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ 20 ರನ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ 26 ರನ್ ಹೊಡೆದು ಕೆಲಕಾಲ ಕ್ರೀಸ್‌ನಲ್ಲಿ ನಿಂತರೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಕೊನೆಯಲ್ಲಿ ಅಬ್ಬರಿಸಿದ ಕಾರ್ಬಿನ್ ಬಾಷ್ ಕೇವಲ 18 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 32 ರನ್ ಚಚ್ಚಿ ತಂಡದ ಮೊತ್ತ 140ರ ಗಡಿ ದಾಟಲು ನೆರವಾದರು.
ಸೌರಬ್ ದುಬೆ, ಕ್ಯಾಮರೂನ್ ಗ್ರೀನ್ ಮತ್ತು ಕಾರ್ತಿಕ್ ತ್ಯಾಗಿ ತಲಾ 2 ವಿಕೆಟ್ ಪಡೆದು ಮುಂಬೈಗೆ ಕಡಿವಾಣ ಹಾಕಿದರೆ, ಸುನಿಲ್ ನರೈನ್ 1 ವಿಕೆಟ್ ಪಡೆದು ಸಾಥ್ ನೀಡಿದರು.
#MI fielders in two minds 🤯
Rovman Powell survives 😮
Updates ▶️ https://t.co/Aw11jLoww5#TATAIPL | #KhelBindaas | #KKRvMI pic.twitter.com/R3iLDNC9Iq
— IndianPremierLeague (@IPL) May 20, 2026
ಕೋಲ್ಕತ್ತಾ ಪ್ಲೇಆಫ್ ಹಾದಿ ಹೇಗೆ?
ಮುಂಬೈ ವಿರುದ್ಧದ ಈ ಗೆಲುವಿನ ನಂತರ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡದ ಪ್ಲೇಆಫ್ ಲೆಕ್ಕಾಚಾರಗಳು ಕುತೂಹಲ ಮೂಡಿಸಿವೆ. 13 ಅಂಕ ಪಡೆದಿರುವ ಕೋಲ್ಕತ್ತಾ ಡೆಲ್ಲಿ ವಿರುದ್ಧ ಕೊನೆಯ ಪಂದ್ಯದಲ್ಲಿ ಗೆಲ್ಲಬೇಕು. ಜೊತೆಗೆ ರಾಜಸ್ಥಾನ ಮತ್ತು ಪಂಜಾಬ್ ಕಿಂಗ್ಸ್ ತಮ್ಮ ಮುಂದಿನ ಪಂದ್ಯಗಳಲ್ಲಿ ಸೋಲಬೇಕು. ಕೆಕೆಆರ್ ತನ್ನ ಮುಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅತಿ ಹೆಚ್ಚು ನೆಟ್ ರನ್‌ರೇಟ್ ಕಾಯ್ದುಕೊಂಡು ಗೆದ್ದು, ಉಳಿದ ಪಂದ್ಯಗಳ ಫಲಿತಾಂಶ ತನಗೆ ಪೂರಕವಾಗಿ ಬಂದರೆ ಮಾತ್ರ ಪ್ಲೇಆಫ್‌ಗೆ ಅಧಿಕೃತವಾಗಿ ಲಗ್ಗೆ ಇಡಲಿದೆ.

