ಪಂಚಾಂಗ
ಶ್ರೀ ಪರಾಭವನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಅಧಿಕ ಜೇಷ್ಠ ಮಾಸ,
ಶುಕ್ಲ ಪಕ್ಷ, ‘ಪಂಚಮಿ (ಬೆಳಗ್ಗೆ 8:30) ನಂತರ ಷಷ್ಟಿ’,
ಗುರುವಾರ, ‘ಪುಷ್ಯ ನಕ್ಷತ್ರ’
ರಾಹುಕಾಲ: 01:55 ರಿಂದ 03:31
ಗುಳಿಕಕಾಲ: 09:08 ರಿಂದ 10:44
ಯಮಗಂಡಕಾಲ: 05:57 ರಿಂದ 07:32
ಮೇಷ: ಮಾನಸಿಕ ಕಿರಿಕಿರಿ ಮತ್ತು ಮನಸ್ತಾಪ ಕೆಲಸಕಾರ್ಯಗಳಲ್ಲಿ ಹಿನ್ನಡೆ, ಅಸಮಾಧಾನ ಆಸ್ತಿ ಮತ್ತು ಭೂಮಿ ವಿಷಯದಲ್ಲಿ ತಂತ್ರದ ಆತಂಕ, ನೀರು ಮತ್ತು ವಾಹನಗಳಿಂದ ಎಚ್ಚರಿಕೆ.
ವೃಷಭ: ಬಂಧು ಬಾಂಧವರಿಂದ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಂಭವ, ಪ್ರಯಾಣದಲ್ಲಿ ಎಚ್ಚರಿಕೆ, ಉದ್ಯೋಗ ಮತ್ತು ಗೃಹ ಬದಲಾವಣೆಯಿಂದ ಸಮಸ್ಯೆ, ಮಾನಸಿಕವಾಗಿ ಬೇಸರ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.
ಮಿಥುನ: ಆರ್ಥಿಕ ಸಂಕಷ್ಟ, ಮಾನಸಿಕ ನೋವು, ಕುಟುಂಬದಲ್ಲಿ ಕಲಹ, ಸ್ತ್ರೀಯರಿಂದ ಅನುಕೂಲ, ಮೋಜು-ಮಸ್ತಿ ಮತ್ತು ಪ್ರೀತಿ-ಪ್ರೇಮ ವಿಷಯಗಳಿಂದ ತೊಂದರೆ.
ಕಟಕ: ಪಾಲುದಾರಿಕೆಯಲ್ಲಿ ಅನುಕೂಲ ಆದರೂ ಅವಕಾಶ ಕೈತಪ್ಪುವ ಸಂಭವ, ದೃಷ್ಟಿದೋಷ ಸಂಶಯಾತ್ಮಕ ಸುಳಿದಾಡುವುದು ಆತಂಕ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಸಿಂಹ: ಅಧಿಕ ಖರ್ಚು ಮತ್ತು ನಷ್ಟ, ಅನಾರೋಗ್ಯ ಸಮಸ್ಯೆ, ಆತಂಕ ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ.
ಕನ್ಯಾ: ಮಕ್ಕಳಿಂದ ಲಾಭ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸ್ವಯಂಕೃತಾಪರಾಧದಿಂದ ತೊಂದರೆ, ಮಿತ್ರರಿಂದ ಹಿನ್ನಡೆ, ರಾಜಕಾರಣಿಗಳಿಂದ ಅಧಿಕಾರಿಗಳಿಂದ ನಷ್ಟ ಮತ್ತು ಅವಮಾನ.
ತುಲಾ: ಉದ್ಯೋಗದಲ್ಲಿ ನಿರಾಸಕ್ತಿ, ತಂತ್ರದ ಭೀತಿ ಮತ್ತು ಸಮಸ್ಯೆ, ನೀರಿನಿಂದ ಸಮಸ್ಯೆ, ಎಚ್ಚರಿಕೆ ಅಪವಾದಗಳು, ಅಧಿಕಾರಿಗಳಿಂದ ನೋವು ಮತ್ತು ನಿರಾಸೆ.
ವೃಶ್ಚಿಕ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕೈಕಾಲುಗಳಿಗೆ ಪೆಟ್ಟು, ಅವಕಾಶಗಳು ಕೈತಪ್ಪುವ ಸನ್ನಿವೇಶ.
ಧನಸು: ಧನಾಗಮನ, ಉತ್ತಮ ಅವಕಾಶಗಳ ಸೂಚನೆ, ಸೋಲು ನಷ್ಟ, ನಿರಾಸೆ ಅಪಕೀರ್ತಿ, ಕುಟುಂಬದಲ್ಲಿ ಆತಂಕ ಸೃಷ್ಟಿ, ಆಹಾರ ವ್ಯತ್ಯಾಸದಿಂದ ಸಮಸ್ಯೆ, ಪುಣ್ಯಕ್ಷೇತ್ರಗಳಿಗೆ ತೆರಳುವ ಆಲೋಚನೆ.
ಮಕರ: ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳಿಂದ ಬೇಸರ, ಪ್ರೀತಿ ವಿಷಯಗಳು ಬಯಲು, ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಕರ್ತವ್ಯದಲ್ಲಿ ಹಿನ್ನಡೆ, ದುಷ್ಟ ಮತ್ತು ತಂತ್ರ ಕಾಟ.
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರುಗಳಿಂದ ಕೆಲಸಗಾರರಿಂದ ಸೇವಕರಿಂದ ಮೋಸ ಮತ್ತು ವಂಚನೆ ಅಪವಾದಗಳು, ಆರೋಗ್ಯದಲ್ಲಿ ವ್ಯತ್ಯಾಸ.
ಮೀನ: ಮಕ್ಕಳ ಜೀವನದಲ್ಲಿ ಏರುಪೇರು, ಸಂತಾನ ಸಮಸ್ಯೆ, ದುಶ್ಚಟಗಳಿಂದ ತೊಂದರೆ, ಸ್ತ್ರೀಯರಿಂದ ಮತ್ತು ಅಪವಾದಗಳಿಂದ ಗೌರವಕ್ಕೆ ಧಕ್ಕೆ.

