ಕೋಲ್ಕತ್ತಾ: ಕೋಲ್ಕತ್ತಾ (Kolkata) ತೊರೆದ 20 ವರ್ಷಗಳ ಬಳಿಕ ಬಾಂಗ್ಲಾದಿಂದ ಗಡೀಪಾರಾಗಿದ್ದ ಸ್ತ್ರೀವಾದಿ, ಲೇಖಕಿ, ವೈದ್ಯೆ, ಮಾನವ ಹಕ್ಕುಗಳ ಹೋರಾಟಗಾರ್ತಿ ತಸ್ಲೀಮಾ ನಸ್ರೀನ್ (Taslima Nasrin) ವಾಪಸ್ ಮತ್ತೆ ಕೋಲ್ಕತ್ತಾಗೆ ಆಗಮಿಸಿದ್ದಾರೆ.
ಪಶ್ಚಿಮ ಬಂಗಾಳದ ರಾಜಧಾನಿಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಸ್ರೀನ್ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಕೋಲ್ಕತ್ತಾ ತುಂಬಾ ಇಷ್ಟ. ಮತ್ತೆ ಇಲ್ಲಿಗೆ ಬಂದಿರುವುದು ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
2007ರಲ್ಲಿ ತಮ್ಮ ಆತ್ಮಚರಿತ್ರೆ ‘ದ್ವಿಖಂಡಿತೋ’ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದವು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಆಗಿನ ಪಶ್ಚಿಮ ಬಂಗಾಳ ಸರ್ಕಾರ ಸಿಪಿಎಂ ಅವರನ್ನು 63 ವರ್ಷಗಳ ಕಾಲ ರಾಜ್ಯ ತೊರೆಯಲು ಆದೇಶಿಸಿತ್ತು. ಆ ಘಟನೆಯ ಬಳಿಕ ಅವರು ಕಳೆದ 20 ವರ್ಷಗಳಿಂದ ಕೋಲ್ಕತ್ತಾದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.
ಪ್ರಸ್ತುತ ತಸ್ಲೀಮಾ ನಸ್ರೀನ್ ದೀರ್ಘಾವಧಿಯ ನಿವಾಸ ಪರವಾನಗಿಯೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಈ ಬಾರಿ ಕೋಲ್ಕತ್ತಾದಲ್ಲಿ ನಡೆಯಲಿರುವ ಮೂಲಭೂತವಾದ ವಿರೋಧಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದು, ತಮ್ಮ ಕವಿತೆಗಳನ್ನು ವಾಚಿಸಿ ಚರ್ಚೆಯಲ್ಲೂ ಪಾಲ್ಗೊಳ್ಳಲಿದ್ದಾರೆ.ಇದನ್ನೂ ಓದಿ: ಸರ್ಕಾರ ಪರೀಕ್ಷೆ ಇಲ್ಲದೆ ಪಶು ವೈದ್ಯರನ್ನ ನೇಮಕಾತಿ ಮಾಡಿಕೊಳ್ಳಬೇಕು: ಎ.ಮಂಜು
ಈ ಕುರಿತು ಮಾತನಾಡಿದ ತಸ್ಲೀಮಾ, ನಾನು ಕೋಲ್ಕತ್ತಾವನ್ನು ಸ್ವಇಚ್ಛೆಯಿಂದ ಬಿಟ್ಟು ಹೋಗಿರಲಿಲ್ಲ. ಆಗಿನ ಸರ್ಕಾರವೇ ನನ್ನನ್ನು ರಾಜ್ಯ ತೊರೆಯುವಂತೆ ಮಾಡಿತ್ತು. ಆದರೆ, ಒಂದು ದಿನ ಮತ್ತೆ ಹಿಂತಿರುಗುತ್ತೇನೆ ಎಂಬ ನಂಬಿಕೆಯನ್ನ ನಾನು ಎಂದಿಗೂ ಕಳೆದುಕೊಂಡಿರಲಿಲ್ಲ ಎಂದು ಹೇಳಿದರು.
ತಸ್ಲೀಮಾ ನಸ್ರೀನ್ ಅವರ ಕೋಲ್ಕತ್ತಾ ಭೇಟಿ ರಾಜಕೀಯ ಚರ್ಚೆಗೂ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ ಶಾಸಕ ಅಖ್ರುಝಮಾನ್, ತಸ್ಲೀಮಾ ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ ಎಂದು ಆರೋಪಿಸಿ, ಅವರ ಭೇಟಿಯನ್ನು ಟೀಕಿಸಿದ್ದಾರೆ. ಇನ್ನೊಂದೆಡೆ, ಬಿಜೆಪಿ ನಾಯಕಿ ಹಾಗೂ ರಾಜ್ಯ ಸಚಿವೆ ಅಗ್ನಿಮಿತ್ರ ಪಾಲ್ ಅವರ ಆಗಮನವನ್ನು ಸ್ವಾಗತಿಸಿದ್ದಾರೆ. ಹಿಂದಿನ ಸರ್ಕಾರ ಅವರಿಗೆ ಮರಳಲು ಅವಕಾಶ ನೀಡಿರಲಿಲ್ಲ. ಈಗ ಅವರು ಮತ್ತೆ ಕೋಲ್ಕತ್ತಾಗೆ ಬಂದಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ.ಇದನ್ನೂ ಓದಿ: ನಿಮ್ಮ ವಿರುದ್ಧ ಯಾವುದೇ ಕೆಲಸ ಮಾಡಲ್ಲ, ದಯವಿಟ್ಟು ಬಂದ್ ಕೈಬಿಡಿ: ಸಿಎಂ ಡಿಕೆಶಿ ನಮ್ರತೆಯ ಮನವಿ
