ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026 ಹಿನ್ನೆಲೆ ಪ್ರತಿಯೊಬ್ಬ ಮತದಾರರಿಗೂ ನೆರವು ಕಲ್ಪಿಸುವ ʻಮತದಾರರ ಸೌಲಭ್ಯ ಕೇಂದ್ರ ಹಾಗೂ ಬಿ.ಎಲ್.ಓ ಸೌಲಭ್ಯ ಕೇಂದ್ರʼಗಳನ್ನ ಸ್ಥಾಪನೆ ಮಾಡಿರುವುದಾಗಿಸಲುವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ. ಈ ಕುರಿತಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಜಿಬಿಎ ಪ್ರಕಟಣೆಯಲ್ಲಿ ಏನಿದೆ?
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026 ಆರಂಭವಾಗಿದೆ. ಇದರ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳು (BLO) ಜೂನ್ 30 ರಿಂದ ಜುಲೈ 29 ರ ವರೆಗೆ ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನ (SIR ಅರ್ಜಿ) ವಿತರಿಸುತ್ತಿದ್ದಾರೆ.

ಗಣತಿ ನಮೂನೆಗಳನ್ನು ಭರ್ತಿ ಮಾಡುವ ವೇಳೆ ಮತದಾರರು ತಮ್ಮ ಹೆಸರು ಅಥವಾ ಕುಟುಂಬ ಸದಸ್ಯರ ವಿವರಗಳನ್ನು ದಾಖಲಿಸುವ ಸಂದರ್ಭದಲ್ಲಿ ಯಾವುದೇ ಗೊಂದಲ ಅಥವಾ ಸಂದೇಹಗಳಿದ್ದಲ್ಲಿ, ಅವುಗಳಿಗೆ ಅಗತ್ಯ ಮಾರ್ಗದರ್ಶನ ಹಾಗೂ ಸಲಹೆ ನೀಡಲು ಭಾರತೀ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಸೌಲಭ್ಯ ಕೇಂದ್ರಗಳು (Voter Facilitation Centres–VFC) ಹಾಗೂ ಬಿ.ಎಲ್.ಓ ಸೌಲಭ್ಯ ಕೇಂದ್ರಗಳು (BLO Facilitation Centres–BFC) ಕಾರ್ಯನಿರ್ವಹಿಸುತ್ತಿವೆ.
ಮತದಾರರ ಸೌಲಭ್ಯ ಕೇಂದ್ರಗಳು ಹಾಗೂ ಬಿ.ಎಲ್.ಓ ಸೌಲಭ್ಯ ಕೇಂದ್ರಗಳ ವಿವರಗಳನ್ನ https://ceo.karnataka.gov.in/vfc/details/ ಲಿಂಕ್‌ನಲ್ಲಿ ಪ್ರಕಟಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಚುನಾವಣಾ ಆಯುಕ್ತರು, ಎಲ್ಲಾ ಮತದಾರರು ಈ ಸೌಲಭ್ಯ ಕೇಂದ್ರಗಳ ಪ್ರಯೋಜನ ಪಡೆದು, ಗಣತಿ ನಮೂನೆಗಳನ್ನ ಸರಿಯಾಗಿ ಭರ್ತಿ ಮಾಡಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
