– ಕುಟುಂಬಕ್ಕೆ ಭಾವುಕ ಸಂದೇಶ
ತುಮಕೂರು: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಡೆತ್‌ನೋಟ್(Death Note) ಬರೆದಿಟ್ಟು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ(Tumakuru) ನಡೆದಿದೆ.
ಜಿ.ಇ. ವೆಂಕಟೇಶ್ ಮೃತ ವಿದ್ಯಾರ್ಥಿ. ಈತ ತುಮಕೂರಿನ ಎಸ್‌ಐಟಿ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಮೂಲತಃ ದಾವಣಗೆರೆ ಜಿಲ್ಲೆಯ ದೊಣ್ಣೆಹಳ್ಳಿ ಗ್ರಾಮದ ನಿವಾಸಿಯಾಗಿದ್ದ ವೆಂಕಟೇಶ್, ತುಮಕೂರಿನ ಉಪ್ಪಾರಹಳ್ಳಿಯಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ.
ಆತ್ಮಹತ್ಯೆಗೆ ಮುನ್ನ ವೆಂಕಟೇಶ್ ಡೆತ್‌ನೋಟ್ ಬರೆದಿದ್ದು, ನನ್ನದು ಒಂದೇ ಒಂದು ಆಸೆ, ನೀವು ಐದೂ ಜನ ಒಟ್ಟಿಗೆ ಇರಬೇಕು ಅನ್ನೋದು, ಒಬ್ಬರನೊಬ್ಬರು ಬಿಟ್ಟು ಕೊಡದೇ, ಬೇರೆಯಾಗದೇ ಹೀಗೆ ಇರಬೇಕೆಂದು ನನ್ನ ಆಸೆ. ಇಂತಿ ನಿಮ್ಮ ಪ್ರೀತಿಯ ಮಗ ಉಲ್ಲೇಖಿಸಿದ್ದಾನೆ.ಇದನ್ನೂ ಓದಿ: ಆಶೀರ್ವಾದದ ನೆಪದಲ್ಲಿ ಚಿನ್ನದ ಉಂಗುರ ಕಳವು; ನಾಗಸಾಧುಗಳ ವೇಷದಲ್ಲಿ ಬಂದ ಇಬ್ಬರಿಂದ ಕೃತ್ಯ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯ ಸಾವಿನ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.ಇದನ್ನೂ ಓದಿ: ರಾಷ್ಟ್ರಪಕ್ಷಿ ನವಿಲಿಗೆ ಹಲಾಲ್ ಮಾಡಿ ಮಾಂಸ ಮಾರಾಟ – ಆರೋಪಿ ಅರೆಸ್ಟ್
