ಬೆಂಗಳೂರು: ರೈಲಿನ ಎಂಜಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಮೂಡಿಸಿದ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತಿದ್ದ ಪ್ಯಾಸೆಂಜರ್ ಟ್ರೇನ್ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೊಡ್ಡಬೆಲೆ ರೈಲು ನಿಲ್ದಾಣದ ಬಳಿ ನಡೆದಿದೆ. ಹುಬ್ಬಳ್ಳಿ ಪ್ಯಾಸೆಂಜರ್ ಕೆಜೆಎಂ14025 ಸಂಖ್ಯೆಯ ರೈಲಿನ ಎಂಜಿನ್ ಇದಾಗಿದೆ.
Advertisement
Advertisement
ತಕ್ಷಣ ರೈಲ್ವೆ ಸಿಬ್ಬಂದಿ ರೈಲಿನ ಬೋಗಿಗಳಿಂದ ಎಂಜಿನ್ ಬೇರ್ಪಡಿಸಿದ್ದಾರೆ. ಸ್ಥಳಕ್ಕೆ ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ.
Advertisement
ಎಂಜಿನ್ ಹೀಟಾಗಿ ಬೆಂಕಿ ಹೊತ್ತಿಕೊಂಡಿರೋ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ನಂತರ ಬೇರೆ ಎಂಜಿನ್ ಮೂಲಕ ಪ್ರಯಾಣಿಕರನ್ನ ರವಾನಿಸಲಾಗಿದೆ.
Advertisement
https://www.youtube.com/watch?v=Dx1wNxoHSEk