ಬೆಂಗಳೂರು: ರಾಜ್ಯದಲ್ಲಿ ಉದ್ಬವವಾಗಿದ್ದ ಬರ ಸದ್ಯಕ್ಕೆ ಆತಂಕವನ್ನ ದೂರ ಮಾಡಿದೆ. ಆದರೆ ಈ ಬಾರಿ ಮಳೆ ಕೊರತೆಗೆ ಕಾರಣವಾಗಿದ್ದ ಎಲ್ ನೀನೋ (El Nino) ಮತ್ತೆ ಆತಂಕವನ್ನ ಸೃಷ್ಠಿ ಮಾಡಿದೆ.
ಫೆಸಿಫಿಕ್ ಸಾಗರದಲ್ಲಿ ಉಂಟಾಗಿದ್ದ ಎಲ್ ನೀನೋ ಮತ್ತೆ ಪ್ರಬಲವಾಗುತ್ತಿರೋ ಬಗ್ಗೆ ವಿಶ್ವಸಂಸ್ಥೆ ಕೂಡ ಎಚ್ಚರಿಕೆಯನ್ನ ನೀಡಿದೆ. ಜೂನ್, ಜುಲೈನಲ್ಲಿ ಎಲ್ ನೀನೋ ಪರಿಣಾಮದಿಂದಲೇ ರಾಜ್ಯ ಬಹಳ ದೊಡ್ಡ ಮಟ್ಟದಲ್ಲಿ ಮಳೆ ಕೊರತೆ ಎದುರಿಸಿತ್ತು. ಈಗ ಮತ್ತೆ ಎಲ್ ನಿನೋ ಪ್ರಬಲದ ಪರಿಣಾಮ ಮತ್ತೆ ಮುಂದಿನ ತಿಂಗಳಿನಿಂದ ಮಳೆ ಕೊರತೆ ಕಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ʻಪಬ್ಲಿಕ್ ಟಿವಿ ವಿದ್ಯಾಮಂದಿರʼ – ಶಿಕ್ಷಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆಯಲು ಸುವರ್ಣಾವಕಾಶ
ಆಗಸ್ಟ್ ಮಧ್ಯದಿಂದಲೇ ಮತ್ತೆ ಮಳೆ ಇಳಿಮುಖವಾಗುವ ಸಾಧ್ಯತೆ ಇದೆ. ಇದು ಸೆಪ್ಟೆಂಬರ್, ಅಕ್ಟೋಬರ್‌ವರೆಗೂ ಮುಂದುವರೆಯುವ ಸಾಧ್ಯತೆ ಜೊತೆಗೆ, ಹಿಂಗಾರಿನ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ.
ಇದೀಗ ರಾಜ್ಯದ ಜಲಾಶಯಗಳಲ್ಲಿ ನೀರಿದ್ದರೂ, ಮುಂದಿನ ದಿನಗಳಲ್ಲಿ ಕೃಷಿ, ಕುಡಿಯುವ ನೀರಿನ ಕಾರಣಕ್ಕಾಗಿ ಜಲಾಶಯದ ನೀರು ಬಳಕೆಯಾಗಲಿದೆ. ಒಳ ಹರಿವು ಇಳಿಕೆಯಾದ್ರೆ, ಕ್ರಮೇಣ ಜಲಾಶಯದ ನೀರಿನ ಮಟ್ಟ ಕೂಡ ಇಳಿಕೆಯಾಗುವ ಸಾಧ್ಯತೆ ಇದೆ. ಜೊತೆಗೆ ಮುಂದಿನ ಬೇಸಿಗೆ ಆರಂಭಕ್ಕೂ ಮುನ್ನವೇ ದೊಡ್ಡಮಟ್ಟದ ಅಭಾವ ಎದುರಿಸಬೇಕಾದ ಆತಂಕ ಕೂಡ ಇದೆ. ಅಲ್ಲದೇ ಇದು ಸರ್ಕಾರಕ್ಕೂ ತಲೆ ನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.
ಸದ್ಯ ಮಳೆಯಾಗಿ ಒಳಹರಿವು ಹೆಚ್ಚಾದ ಹಿನ್ನೆಲೆ, ಬರದ ನಡುವೆ ಕ್ಯಾತೆ ತೆಗೆದಿದ್ದ ತಮಿಳುನಾಡಿಗೆ (Tamilnadu) ನೀರು ಹರಿಸಿ, ಸಂಕಷ್ಟದಿಂದ ಪಾರಾಗಿತ್ತು. ಆದರೆ ಮುಂದೆ ಮತ್ತೆ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಮಳೆ ಕಡಿಮೆಯಾದ್ರೆ, ಸುಪ್ರೀಂ ಆದೇಶದಂತೆ ಈ ತಿಂಗಳಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿಗೆ ಮತ್ತೆ ಕೊರತೆ ಉಂಟಾಗಲಿದೆ. ಆಗ ಮತ್ತೆ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆಯುವ ಸಾಧ್ಯತೆ ಇದ್ದು, ಮತ್ತೆ ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ಒಂದೊಮ್ಮೆ ಮಳೆ ಮತ್ತೆ ಕೈ ಕೊಟ್ಟಲ್ಲಿ ಇನ್ನಷ್ಟು ಸಂಕಷ್ಟದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಇದನ್ನೂ ಓದಿ: ಸೆಪ್ಟೆಂಬರ್‌ನಲ್ಲಿ ಜನ ಏನ್ ಹೇಳ್ತಾರೆ? – `ಕ್ಯಾ ಬೋಲ್ತಿ ಪಬ್ಲಿಕ್’ ರಾಷ್ಟ್ರವ್ಯಾಪಿ ಅಭಿಯಾನಕ್ಕೆ CJP ನಿರ್ಧಾರ: ದೀಪ್ಕೆ



