– ಕೆಪಿಎಸ್‌ಸಿ ಕಚೇರಿ ಮೇಲೂ ದಾಳಿ ಮಾಡಿದ ಅಧಿಕಾರಿಗಳು
ಬೆಂಗಳೂರು: ಕೆಪಿಎಸ್‌ಸಿ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ ಮೇಲೆ ಇಡಿ ದಾಳಿ ನಡೆಸಿದೆ.
ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಕೋಟ್ಯಂತರ ಅವ್ಯಹಾರ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿದೆ. 13 ಕಡೆಯಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ನೇಮಕಾತಿಯಲ್ಲಿ ಇದ್ದ ಮಧ್ಯವರ್ತಿಗಳ ಮನೆಯ ಮೇಲೂ ದಾಳಿ ನಡೆದಿದೆ. ಇದನ್ನೂ ಓದಿ: ಹೋಟೆಲ್ ಆಹಾರ ಕಳಪೆಯೇ? ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ದೂರು ಕೊಡಿ
ಪಶುವೈದ್ಯಾಧಿಕಾರಿಗಳ ಹುದ್ದೆಯಲ್ಲಿ ಲಂಚಾವತಾರ ಸುದ್ದಿಯನ್ನು ‘ಪಬ್ಲಿಕ್ ಟಿವಿ’ ವರದಿ ಮಾಡಿತ್ತು. ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿತ್ತು. ಇದರ ಬೆನ್ನಲ್ಲೇ ಇಡಿ ಶಾಕ್ ಕೊಟ್ಟಿದೆ. APS ಪಶುವೈದ್ಯಾಧಿಕಾರಿಗಳ ಹುದ್ದೆಗೆ ಅಂತಿಮ ಆಯ್ಕೆ ಪಟ್ಟಿಗೆ ಮಧ್ಯವರ್ತಿಗಳು 80 ಲಕ್ಷ ಡಿಮ್ಯಾಂಡ್ ಮಾಡಿದ್ದರು. ಟಾಪ್ ಲಿಸ್ಟ್ನಲ್ಲಿ ಅಮಾನತಾಗಿದ್ದ ಶಿವಶಂಕರಪ್ಪ ಸಾಹುಕಾರ್ ಸಂಬಂಧಿಕರು ಕೂಡ ಇದ್ದರು ಅನ್ನೋದು ಕೂಡ ಎಫ್‌ಐಆರ್‌ನಲ್ಲಿ ದಾಖಲಾಗಿತ್ತು. ರೆಸಾರ್ಟ್ನಲ್ಲಿ ಪ್ರಶ್ನೆಪತ್ರಿಕೆ ನೀಡಲಾಗಿತ್ತು. Ouch ಶೀಟ್‌ಗಳನ್ನು ತಿದ್ದಲಾಗಿತ್ತು. ಅಧಿಕಾರಿಗಳ ಕಡೆಯಿಂದಲೇ ಅಭ್ಯರ್ಥಿಗಳ ನಂಬರ್ ಅನ್ನು ಮಧ್ಯವರ್ತಿಗಳಿಗೆ ಲೀಕ್ ಮಾಡಲಾಗಿತ್ತು ಎಂಬ ಆರೋಪವು ಕೇಳಿಬಂದಿತ್ತು.
ಪಶುಸAಗೋಪನೆ ಇಲಾಖೆಯಲ್ಲಿ ಖಾಲಿ ಇದ್ದ ಕೈಗಾರಿಕಾ ವಿಸ್ತರಣಾ ಅಧಿಕಾರಿಗಳ ಹುದ್ದೆಗೆ ನಕಲಿ ದಾಖಲೆ ಆರೋಪದಲ್ಲಿ ಶಿವಶಂಕರಪ್ಪ ಸಾಹುಕಾರ್ ಮಗಳು ಸುಮ ಸಾಹುಕಾರ್ ವಿರುದ್ಧ ದೂರು ದಾಖಲಾಗಿತ್ತು. ಜುಲೈ 10 ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಸುಮ ಸಾಹುಕಾರ್ ನಕಲಿ ದಾಖಲೆ ಕೊಟ್ಟಿದ್ದಾರೆಂದು ಕೆಪಿಎಸ್ಪಿ ಅಧಿಕಾರಿ ಶೋಭಾ ದೂರು ಕೊಟ್ಟಿದ್ದರು. ಸರ್ಕಾರವು ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ತನಿಖೆ ನಡೆಸುತ್ತಿದ್ದಂತೆ ಪ್ರಕರಣದಲ್ಲಿ ಇಡಿ ಎಂಟ್ರಿಯಾಗಿದೆ. ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು – ಡಿಸಿ ಕಚೇರಿ ಮುತ್ತಿಗೆಗೆ BJP ಕಾರ್ಯಕರ್ತರ ಯತ್ನ; 40 ಮಂದಿ ವಿರುದ್ಧ FIR
ಕೆಪಿಎಸ್‌ಸಿ ಕಚೇರಿ ಮೇಲೂ ಇಆ ದಾಳಿ ನಡೆಸಿ ಪರಿಶೀಲನೆ ಮಾಡಿದೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಫ್ಲಾಟ್ ಮೇಲೆ ದಾಳಿಯಾಗಿದೆ. ದಾಳಿ ಬಳಿಕ ಶಿವಶಂಕರಪ್ಪ ಅವರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ.

