ಬೆಂಗಳೂರು: ಎಸ್‌ಬಿಐ ಬ್ಯಾಂಕ್ (SBI) ಒಕ್ಕೂಟಕ್ಕೆ 899.35 ಕೋಟಿ ರೂ. ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದೀಪಕ್ ಕೇಬಲ್ ಲಿ. ನಿರ್ದೇಶಕರ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.
ಮಾರುಕಟ್ಟೆ ಮೌಲ್ಯದ ಸುಮಾರು 150 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ವೆಂಕಟೇಶ್ವರ ರಾವ್, ನಿರ್ದೇಶಕಿ ಸತ್ಯವತಿ ಬಾಲ್ ಹಾಗೂ ಸಹವರ್ತಿ ಸಂಸ್ಥೆಗಳ ಹೆಸರಿನಲ್ಲಿರುವ ಸ್ಥಿರಾಸ್ತಿಯನ್ನು ಜಪ್ತಿ ಮಾಡಲಾಗಿದೆ. ಕಂಪನಿ ವಿರುದ್ಧ ಬ್ಯಾಂಕ್ ಸಾಲ ಪಡೆದು ಆ ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿ, ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿ ಬಂದಿತ್ತು. ಇದನ್ನೂ ಓದಿ: ಹೈದ್ರಾಬಾದ್ ಡ್ರಗ್ಸ್ ಕೇಸ್‌ಗೂ ಬೆಂಗಳೂರಿಗೂ ಲಿಂಕ್ – ನಗರದ 2 ಕಡೆ ಇಡಿ ದಾಳಿ
ಈ ಆರೋದ ಮೇಲೆ ಈ ವರ್ಷ ಮೇ ತಿಂಗಳಲ್ಲಿ ದೀಪಕ್ ಕೇಬಲ್ಸ್ ಮೇಲೆ ಇಡಿ (ED Raid) ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು.ಅಲ್ಲದೇ ಕೋಟ್ಯಂತರ ರೂ. ಹಣ, ಆಸ್ತಿ ಜಪ್ತಿ ಮಾಡಲಾಗಿತ್ತು. ಇದೇ ವೇಳೆ ಕಂಪನಿ ಎಂಡಿ ವೆಂಕಟೇಶ್ವರ ರಾವ್ ಅವರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಐಸಿಸ್‌ಗೆ ಯುವಕರನ್ನು ಸೇರಿಸಲು ಹಣ ಸಂದಾಯ ಆರೋಪ – ಬೆಂಗ್ಳೂರಲ್ಲಿ ಮುಸ್ಲಿಂ ಸಂಘಟನೆ ಮೇಲೆ ಇಡಿ ದಾಳಿ



