ಧಾರವಾಡ: ಮುಸ್ಲಿಮರಿಗೆ ಜಾತ್ರೆಗಳಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ನಾನು ಹೇಳುತ್ತಲೇ ಬಂದಿದ್ದೇನೆ ಎಂದು ಶ್ರೀರಾಮ ಸೇನೆ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ಕುರಿತು ಮಾತನಾಡಿದ ಅವರು, ಮುಸ್ಲಿಮರ ಮಾನಸಿಕತೆ ತಿದ್ದಬೇಕಾದರೆ ಅವರಿಗೆ ಆರ್ಥಿಕ ಬಹಿಷ್ಕಾರ ಹಾಕಿದರೆ ಮಾತ್ರ ಸಾಧ್ಯ. ನಮಗೆ ದೇಶ ಹಾಗೂ ಹಿಂದುತ್ವ ಉಳಿಸಬೇಕಾಗಿದೆ, ನಾವು ಈ ದೇಶ ಕಳೆದುಕೊಳ್ಳಲು ತಯಾರಿಲ್ಲ. ನಮ್ಮ ಸಂವಿಧಾನದ ಮೇಲೆ ಮುಸ್ಲಿಮರು ಬೆಲೆ ಕೊಡ್ತಿಲ್ಲ, ಕಾನೂನಿಗೆ ಬೆಲೆ ಕೊಡ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಆಂಡ್ರಾಯ್ಡ್ ಬಳಕೆದಾರಿಗೆ ಮೋಸ ಮಾಡಿ ಸಿಕ್ಕಿಬಿದ್ದ ಗೂಗಲ್
Advertisement
Advertisement
ವ್ಯಾಪಾರದ ಬಹಿಷ್ಕಾರ ಅಹಿಂಸಾತ್ಮಕ ಶಸ್ತ್ರವು ಉಡುಪಿ ದೇವಸ್ಥಾನ ಮಂಡಳಿಯ ಒಳ್ಳೆಯ ನಿರ್ಣಯವಾಗಿದೆ. ಅದನ್ನ ನಾನು ಸ್ವಾಗತ ಮಾಡುತ್ತೇನೆ, ಅಭಿನಂದನೆ ಮಾಡುತ್ತೇನೆ. ಚುನಾವಣೆಗೆ ಹಾಗೂ ಈ ವಿವಾದಕ್ಕೆ ಸಂಬಂಧವಿಲ್ಲ. ಇದು ಬಹಳ ದಿನದಿಂದ ನಡೆದು ಬಂದಿರುವ ರೀತಿ ಎಂದ ಅವರು, ಮಸೀದಿಯ ಕಾಂಪ್ಲೆಕ್ಸ್‍ಗಳಲ್ಲಿ ಹಿಂದೂಗಳಿಗೆ ವ್ಯಾಪಾರಕ್ಕೆ ಬಾಡಿಗೆ ಕೊಡಲ್ಲ. ಈ ರೀತಿ ಬಹಳ ಉದಾಹರಣೆ ಇವೆ ಎಂದು ವಿವರಿಸಿದರು.
Advertisement
ಬಾಂಗ್ಲಾದಲ್ಲಿ ದೇವಸ್ಥಾನ ಒಡೆದು ಹಾಕಿದ್ದಾರೆ. ನಾವು ಆ ರೀತಿ ಮಸೀದಿ ಹಾಗೂ ಚರ್ಚ್ ಒಡೆದಿಲ್ಲ. ನಮ್ಮ ಹಿಂದೂ ಸಮಾಜ ಉಳಿಯಬೇಕು. ಸಂವಿಧಾನ ಉಳಿಯಬೇಕು ಎಂಬ ಉದ್ದೇಶದಿಂದ ಈ ನಿರ್ಣಯ ಕೈಗೊಂಡಿದೆ. 32 ವರ್ಷದ ಹಿಂದೆ ನೀಲಕಂಠ ನ್ಯಾಯಮೂರ್ತಿಗೆ ಕಾಶ್ಮೀರದಲ್ಲಿ ಹೊಡೆದು ಹಾಕಿದರು. ಈಗ ಮತ್ತೇ ಮಧುರೈನ ಒಬ್ಬ ಮುಸ್ಲಿಂ ಸಂಘಟನೆಯವನು ನ್ಯಾಯಾಧೀಶರನ್ನ ಕೊಲ್ತೆವೆ ಎಂದು ಹೇಳ್ತಾನೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಜ್ಯಾದ್ಯಂತ ಎಎಪಿ ಸದಸ್ಯತ್ವ ಅಭಿಯಾನಕ್ಕೆ ಪೃಥ್ವಿ ರೆಡ್ಡಿ ಚಾಲನೆ
Advertisement
32 ವರ್ಷದ ಹಿಂದಿನ ಮಾನಸಿಕತೆ, ಈಗಿನ ಮಾನಸಿಕತೆ ಒಂದೇ ಇದೆ. ನಾವು ಎಲ್ಲರೂ ಈ ಹಿಡಿತವನ್ನು ದೇಶ ಉಳಿಸುವುದಕ್ಕೆ ಮಾಡಬೇಕಿದೆ. ಇದು ಬರಿ ಮಂಗಳೂರು ಶಿವಮೊಗ್ಗ ಅಲ್ಲಾ, ಇಡೀ ದೇಶಾದ್ಯಂತ ನಡೆಸಬೇಕು ಎಂದು ಶಾಪತ ಮಾಡಿದರು.