ನವದೆಹಲಿ: ಭೂಮಿಯು ಬಹುತೇಕ ಕೆಂಪು ಬಣ್ಣಕ್ಕೆ ಬದಲಾಗುತ್ತಿದ್ದು, `ಸೂಪರ್-ಡೂಪರ್ ಎಲ್ ನಿನೋ’ (Super-Duper El Nino) ಬಗ್ಗೆ ಮತ್ತೆ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅಕ್ಟೋಬರ್-ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಎಲ್ ನಿನೋ (El Nino) ಕಾರಣದಿಂದಾಗಿ ತಾಪಮಾನದ ವ್ಯತ್ಯಾಸವು ಸಾಮಾನ್ಯಕ್ಕಿಂತ ಸುಮಾರು 3.7 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗುವ ಮುನ್ಸೂಚನೆ ಇದೆ. 1950 ರಿಂದೀಚೆಗೆ ಕಂಡುಬಂದ ಅತ್ಯಂತ ಪ್ರಬಲ ಹವಾಮಾನ ವಿದ್ಯಮಾನಗಳಲ್ಲಿ ಈ ವರ್ಷದ ಎಲ್ ನಿನೋ ಕೂಡ ಒಂದಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಇದನ್ನೂ ಓದಿ: ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ – ವಿಮಾನ ಹಾರಾಟ ಸ್ಥಗಿತ
ವಿಶ್ವಸಂಸ್ಥೆಯ ಹವಾಮಾನ ಮತ್ತು ವಾತಾವರಣ ಸಂಸ್ಥೆಯಾದ `ವಿಶ್ವ ಹವಾಮಾನ ಸಂಸ್ಥೆ’, ಎಲ್ ನಿನೋ ಮಾನವ-ನಿರ್ಮಿತ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಇನ್ನಷ್ಟು ಹೆಚ್ಚಿಸಲಿದೆ. ಪೆಸಿಫಿಕ್ ಸಾಗರವು ತನ್ನಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಶಾಖವನ್ನು ಹೊರಹಾಕುವುದರಿಂದ, ಭೂಮಿಯ ಬಹುಭಾಗವು ಅಸಾಮಾನ್ಯವಾಗಿ ಹೆಚ್ಚಿನ ತಾಪಮಾನವನ್ನು ಅನುಭವಿಸಲಿದೆ ಎಂದಿದೆ. ಅಲ್ಲದೆ, ಎಲ್ ನಿನೋ ಫೆಬ್ರವರಿ 2027ರವರೆಗೆ ಮುಂದುವರಿಯಲಿದೆ ಅಂತಲೂ ತಿಳಿಸಿದೆ.

