ಬೆಂಗಳೂರು : ಬರ ಪರಿಹಾರ ವಿಚಾರದಲ್ಲಿ ವಿಪಕ್ಷಗಳು (BJP) ರಾಜಕೀಯ ಮಾಡ್ತಾ ಇವೆ ಅಂತ ಡಿಸಿಎಂ ಪರಮೇಶ್ವರ್ (DCM Parmeshwar) ವಿಪಕ್ಷಗಳ ವಿರುದ್ದ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಕೊಟ್ಟಿರುವ ಬರ ಪರಿಹಾರ ಕಡಿಮೆ ಆಯ್ತು ಎಂಬ ವಿಪಕ್ಷಗಳ ಆರೋಪ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿಪಕ್ಷಗಳು ಹೇಳೋದು ಹೇಳ್ತಾರೆ ಅವರಿಗೆ ರಾಜಕೀಯ ಬೇಕು.ಅವರಿಗೆ ಜನರು, ರೈತರಿಗೆ ಸಹಾಯ ಮಾಡೋದು ಬೇಕಿಲ್ಲ. 1250 ಕೋಟಿ ಸಣ್ಣ ಹಣನಾ? ಸ್ವಾಭಾವಿಕವಾಗಿ ಅದು ಕಡಿಮೆ ಅನ್ನಿಸುತ್ತದೆ. ನಾವು ತಕ್ಷಣ ಮೊದಲ ಹಂತ ಅಂತ ಇಷ್ಟು ಪರಿಹಾರ ಅಂತ ಕೊಡ್ತಾ ಇದ್ದೀವಿ ಅಂತ ತಿಳಿಸಿದರು.
ಪರಿಹಾರ ಅಲ್ಲದೆ ಬೇರೆ ಬೇರೆ ಬೆನಿಫಿಟ್‌ಗಳನ್ನ ರೈತರಿಗೆ ಕೊಟ್ಟಿದ್ದೇವೆ. ಪವರ್ ಸಬ್ಸಿಡಿ 22 ಸಾವಿರ ಕೋಟಿ ಕೊಡ್ತಾ ಇದ್ದೇವೆ. ರೈತರಿಗೆ ಫ್ರೀ ಪವರ್ ಕೊಡ್ತಾ ಇದ್ದೀವಿ. ಅದು ಸಹಾಯ ಅಲ್ಲವಾ? ಅಕ್ಕಿ ಕೊಡ್ತಾ ಇದ್ದೇವೆ ಸಹಾಯ ಅಲ್ಲವಾ. 2 ಸಾವಿರ ಹಣ ರೈತರ ಹೆಣ್ಣುಮಕ್ಕಳು ಅಲ್ಲವಾ ತಗೊಳ್ಳೋದು. ಎಲ್ಲಾ ಕೊಡುವ ಬೆನಿಫಿಟ್ ಅವರಿಗೆ ಸಹಾಯ ಆಗುತ್ತದೆ. ಇದೂ ಸಣ್ಣ ಸಹಾಯ. ಮುಂದೆ ಕೇಂದ್ರ ಸರ್ಕಾರ ಪರಿಹಾರ ಕೊಟ್ಟಾಗ ನೋಡೋಣ ಎಂದರು.
ಪರಿಹಾರದ ಮೊತ್ತ ಜಾಸ್ತಿ ಆಗುತ್ತೆ ಅಂತ ನಾನು ಈಗ ಏನು ಹೇಳೋಕೆ ಆಗೊಲ್ಲ. ಕೇಂದ್ರ ಸರ್ಕಾರ ನಮಗೆ ಯಾವ ರೀತಿ ಸಹಾಯ ಕೊಡುತ್ತದೆ ಅದರ ಮೇಲೆ ನಿರ್ಧಾರ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: 650 ವರ್ಷಗಳ ಹಿಂದಿನ ಶಿವಲಿಂಗ ಪತ್ತೆ; ಕಾಡುಪಾಲಾಗಿದ್ದ ಮಹದೇವ ದೇಗುಲ ಪುನರುಜ್ಜೀವನಕ್ಕೆ ಗ್ರಾಮಸ್ಥರ ಸಂಕಲ್ಪ
ಈಗಾಗಲೇ ಕೇಂದ್ರಕ್ಕೆ ಒಂದು ಮನವಿ ಪತ್ರ ಕೊಟ್ಟಿದ್ದೇವೆ. ಇನ್ನು ಎರಡು ಪತ್ರ ಕೊಡ್ತೀವಿ. ಅಂತಿಮವಾಗಿ ಫೈನಲ್ ಮನವಿ ಕೊಟ್ಟಾಗ ಎಷ್ಟು ನಷ್ಟವಾಗಿದೆ ಅಂತ ಗೊತ್ತಾಗುತ್ತದೆ. 40 ಸಾವಿರ ಕೋಟಿ ಮೇಲೆ ನಷ್ಟ ಆಗಿದೆ ಅಂತ ನಾನು ಅಂದಾಜು ಮಾಡಿದ್ದೇನೆ. ಅದನ್ನ ಗೈಡ್‌ಲೈನ್ಸ್ ಪ್ರಕಾರ ಮಾಡಿದ್ರೆ ಎಷ್ಟು ಆಗಬಹುದು ನೋಡಬೇಕು. ಕಳೆದ ಬಾರಿ 18 ಸಾವಿರ ಕೋಟಿ ಬಂದಿತ್ತು. ಈ ಬಾರಿ ಎಷ್ಟು ಬರುತ್ತೆ ಗೊತ್ತಿಲ್ಲ. ನಿಯಮದ ಪ್ರಕಾರ ಎಷ್ಟು ನಷ್ಟ ಆಗುತ್ತೋ ಅಷ್ಟು ಕೇಂದ್ರಕ್ಕೆ ಕೇಳ್ತೀವಿ ಎಂದರು.
ಬರ ನಷ್ಟ ಲೆಕ್ಕಾಚಾರ ಮಾಡಲು ಕೇಂದ್ರ ಸರ್ಕಾರ ಒಬ್ಬ ಐಎಎಸ್ ಅಧಿಕಾರಿಯನ್ನ ನೇಮಕ ಮಾಡಿದ್ದಾರೆ. ನಮಗೆ ಲೆಟರ್ ಬರೆದಿದ್ದಾರೆ ಇಂತಹವರನ್ನು ಕಳಿಸ್ತಾ ಇದ್ದೀವಿ ಅಂತ. ಯಾವಾಗ ಕಳಿಸ್ತಾರೆ ಅಂತ ಡೇಟ್ ಫಿಕ್ಸ್ ಆಗಿಲ್ಲ. ಟೀಂ ಬಂದು ಹೇಗೆ ಅಸೆಸ್ ಮಾಡ್ತಾರೆ, ಅವರ ಗೈಡ್ ಲೈನ್ಸ್ ಪ್ರಕಾರ ಮಾಡಿದಾಗ ಎಷ್ಟು ಅಂತ ಗೊತ್ತಾಗುತ್ತದೆ ಅಂತ ತಿಳಿಸಿದರು.
ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುವ ವಿಚಾರಕ್ಕೆ, ಈಗಾಗಲೇ ನಾನು ಸಿಎಂ ಅವರು ಸದನದಲ್ಲಿ ಇದನ್ನ ಹೇಳಿದ್ದೇವೆ. ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗೋಕೆ ಸಿದ್ದತೆ ಮಾಡ್ತಾ ಇದ್ದೀವೆ ಅಂತ. ಪ್ರಧಾನಿಗಳು, ಗೃಹ ಸಚಿವರು, ಕೃಷಿ ಸಚಿವರನ್ನ ಭೇಟಿ ಮಾಡ್ತೀವಿ. ವಿಪಕ್ಷಗಳು ಬರೋದಕ್ಕೆ ತಯಾರು ಅಂದರೆ ನಾವು ಅವರನ್ನು ಕರೆದುಕೊಂಡು ಹೋಗ್ತೀವಿ. ಸರ್ವಪಕ್ಷ ನಿಯೋಗ ದೆಹಲಿಗೆ ಕರೆದುಕೊಂಡು ಹೋಗಲು ದಿನಾಂಕ ನಿಗದಿಯಾಗಿಲ್ಲ ಅಂತ ತಿಳಿಸಿದರು.ಇದನ್ನೂ ಓದಿ: 650 ವರ್ಷಗಳ ಹಿಂದಿನ ಶಿವಲಿಂಗ ಪತ್ತೆ; ಕಾಡುಪಾಲಾಗಿದ್ದ ಮಹದೇವ ದೇಗುಲ ಪುನರುಜ್ಜೀವನಕ್ಕೆ ಗ್ರಾಮಸ್ಥರ ಸಂಕಲ್ಪ

