– ಫ್ರಾನ್ಸ್ ಗಡಿಗಳನ್ನು ಮುಚ್ಚುವಂತೆ ಮೊದಲೇ ಎಚ್ಚರಿಸಿದ್ದೆ ಎಂದ ಅಮೆರಿಕ ಅಧ್ಯಕ್ಷ
ವಾಷಿಂಗ್ಟನ್: ಪ್ಯಾರಿಸ್ (Paris) ಶೀಘ್ರದಲ್ಲೇ ಒಂದು ಮುಸ್ಲಿಂ ನಗರವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಫ್ರಾನ್ಸ್ನ ಗಡಿಗಳನ್ನು ಮೊದಲೇ ಮುಚ್ಚುವಲ್ಲಿ ವಿಫಲರಾದರು. ಈಗ ದೇಶದಲ್ಲಿ ಉಂಟಾಗಿರುವ ವ್ಯಾಪಕ ಅಶಾಂತಿಗೆ ವಲಸೆಯೇ ಕಾರಣ ಎಂದು ಟ್ರಂಪ್ ಆರೋಪಿಸಿದ್ದಾರೆ. ಇದನ್ನೂ ಓದಿ: ಅಲ್ಬೇನಿಯಾದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ – ಸುಪ್ರೀಂ ಕೋರ್ಟ್, ಸರ್ಕಾರಿ ಕಚೇರಿಗೆ ಬೆಂಕಿ
ಅಕ್ಟೋಬರ್ 19 ರಂದು ‘ಮರೀನ್ ಒನ್’ (Marine One) ಮೂಲಕ ಪ್ರಯಾಣ ಬೆಳೆಸುವ ಮುನ್ನ, ವೈಟ್ ಹೌಸ್ನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಮ್ಯಾಕ್ರನ್ ಅವರ ವಲಸೆ ನೀತಿಗಳನ್ನು ಟೀಕಿಸಿದ್ದಾರೆ. ಈ ಸಂವಾದದ ತುಣುಕೊಂದನ್ನು ‘ಫಾಕ್ಸ್ ನ್ಯೂಸ್’ (Fox News) ಸಂಸ್ಥೆಯು ‘ಎಕ್ಸ್’ (X) ವೇದಿಕೆಯಲ್ಲಿ ಹಂಚಿಕೊಂಡಿದೆ.
ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ. ಫ್ರಾನ್ಸ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ದೇಶಕ್ಕೆ ಪ್ರವೇಶಿಸುತ್ತಿರುವ ವಲಸಿಗರಿಗೆ ಸಂಬಂಧಿಸಿವೆ. ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ನನ್ನ ಸ್ನೇಹಿತ. ನಾನು ಅವರಿಗೆ ವರ್ಷಗಳ ಹಿಂದೆಯೇ ಎಚ್ಚರಿಕೆ ನೀಡಿದ್ದೆ. ಪ್ರಪಂಚದಾದ್ಯಂತ ಜನರನ್ನು ದೇಶದೊಳಗೆ ಬರಲು ಬಿಡುವ ಮೂಲಕ ಫ್ರಾನ್ಸ್ ತಪ್ಪು ಮಾಡುತ್ತಿದೆ ಎಂದು ನಾವು ಆಗಲೇ ಮ್ಯಾಕ್ರನ್ ಅವರಿಗೆ ಎಚ್ಚರಿಸಿದ್ದೆ. ಮೊದಲ ಬಾರಿಗೆ ಅವರನ್ನು ಭೇಟಿಯಾದಾಗ, ಗಡಿಗಳನ್ನು ಮುಚ್ಚುವಂತೆ ಸಲಹೆ ನೀಡಿದ್ದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದನ್ನೂ ಓದಿ: ದಂಗೆಯಿಂದ ಫ್ರಾನ್ಸ್ ಧಗಧಗ – ಹಿಂಸಾಚಾರದ ಹಿಂದೆ ಜಾಗತಿಕ ಎಡಪಂಥೀಯ ಜಾಲದ ಆರೋಪ!
ನಾವು ನಮ್ಮ ಗಡಿಗಳನ್ನು ಮುಚ್ಚಿದೆವು. ಆದರೆ ಅವರು ಹಾಗೆ ಮಾಡಲಿಲ್ಲ. ಫ್ರಾನ್ಸ್ ಇಂಧನ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದೆ. ಗಡಿ ನಿಯಂತ್ರಣದ ವಿಷಯದಲ್ಲಿ ಮ್ಯಾಕ್ರನ್ ಇನ್ನೂ ಮೊದಲೇ ಕ್ರಮ ಕೈಗೊಳ್ಳಬೇಕಿತ್ತು ಎಂದು ಅಮೆರಿಕ ಅಧ್ಯಕ್ಷ ಪುನರುಚ್ಚರಿಸಿದ್ದಾರೆ.
