ಅಮರಾವತಿ: ಕ್ಲಿನಿಕ್ (Clinic) ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ ವೈದ್ಯ (Doctor) ಹಾಗೂ ಆತನ ಇಬ್ಬರು ಮಕ್ಕಳು (Children)ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ (Andhra Pradesh) ತಿರುಪತಿ ಜಿಲ್ಲೆ ರೇಣಿಗುಂಟಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ವೈದ್ಯನ ಮನೆಯ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ರೇಣಿಗುಂಟಾ ಪೊಲೀಸರು (Renigunta Police) ತಿಳಿಸಿದ್ದಾರೆ.
Advertisement
Advertisement
ವರದಿಗಳ ಪ್ರಕಾರ ವೈದ್ಯನ ಮನೆಯ ನೆಲದ ಮಹಡಿಯನ್ನು ಕ್ಲಿನಿಕ್ ಆಗಿ ಮಾಡಿಕೊಳ್ಳಲಾಗಿತ್ತು. ಕಟ್ಟಡದ ಮೊದಲ ಹಾಗೂ 2ನೇ ಮಹಡಿಯಲ್ಲಿ ವೈದ್ಯನ ಕುಟುಂಬ ವಾಸವಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆಯಿಂದ ಕ್ರಮ: ಸುಧಾಕರ್
Advertisement
ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ರಕ್ಷಣಾ ಕಾರ್ಯದಲ್ಲಿ ವೈದ್ಯನ ಪತ್ನಿ ಹಾಗೂ ತಾಯಿಯನ್ನು ರಕ್ಷಿಸಲಾಗಿದೆ. ಗಂಭೀರ ಸುಟ್ಟ ಗಾಯಗಳಿಂದ ಡಾ. ರವಿ ಶಂಕರ್, ಅವರ 12 ವರ್ಷದ ಮಗ ಹಾಗೂ 7 ವರ್ಷದ ಮಗಳು ಸಾವನ್ನಪ್ಪಿದ್ದಾರೆ.
Advertisement
ಘಟನೆಯ ಬಗ್ಗೆ ರೇಣಿಗುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: PFI ಶಂಕಿತರ ಮೊಬೈಲ್‌ನಲ್ಲಿತ್ತು ಸಾಕ್ಷಿಗಳನ್ನೇ ನಾಶ ಮಾಡುವ ಆಪ್