– ಗುಜರಾತ್‍ಗೆ ಅವಕಾಶ ಕೊಟ್ಟು, ಕರ್ನಾಟಕಕ್ಕೆ ಅನ್ಯಾಯ
ಬೆಂಗಳೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆಗುತ್ತಿರುವ ಅಪಮಾನ ಕನ್ನಡಿಗರು ಸಹಿಸುವುದಿಲ್ಲ. ಎಲ್ಲ ಸಂಸತ್ ಸದಸ್ಯರು ಪ್ರಧಾನಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಒತ್ತಡ ಹೇರಿ ಇಲ್ಲದೇ ಹೋದರೆ ಕೇಂದ್ರ ಸಚಿವರಿಗೆ ಘೇರಾವ್ ಹಾಕಬೇಕಾಗುತ್ತದೆ ಎಂದು ಸಂಸದ ಡಿ.ಕೆ ಸುರೇಶ್ (DK Suresh) ಎಚ್ಚರಿಕೆ ನೀಡಿದರು.
ಗಣರಾಜ್ಯೋತ್ಸವದ (Republic Day) ಪರೇಡ್ ವೇಳೆ ರಾಜ್ಯದ ಸ್ತಬ್ಧ ಚಿತ್ರ (Tableau) ನಿರಾಕರಣೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ತನ್ನದೇ ಆದ ಇತಿಹಾಸ ಛಾಪು ಇಟ್ಟುಕೊಂಡ ಪ್ರಗತಿಪರ ರಾಜ್ಯ ಕರ್ನಾಟಕವಾಗಿದೆ (Karnataka). ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರತಿವರ್ಷ ರಾಜ್ಯಕ್ಕೆ ತನ್ನದೇ ಆದ ಸ್ಥಾನಮಾನ ಭಾರತ ಕೊಟ್ಟುಕೊಂಡು ಬರುತ್ತಿತ್ತು. ಆದರೆ ಈ ಬಾರಿ ರಾಜ್ಯದ ಪರಂಪರೆ ಶಕ್ತಿ ತೋರಿಸಲು 26ರ ಗಣರಾಜ್ಯೋತ್ಸವದ ಟ್ಯಾಬ್ಲೋಗೂ ಅವಕಾಶ ಮಾಡಿಕೊಟ್ಟಿಲ್ಲ. ಕೇಂದ್ರ ಸರ್ಕಾರ ಯಾವ ಮಟ್ಟಿಗಿನ ಅನ್ಯಾಯ ಮಾಡುತ್ತಿದೆ ಎನ್ನೋದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು.
Advertisement
Advertisement
ಗುಜರಾತ್ ಅನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಗುಜರಾತಿಗೆ ಕೊಡುವ ಆದ್ಯತೆಯನ್ನು ಉಳಿದ ರಾಜ್ಯಗಳಿಗೆ ಕೊಡುತ್ತಿಲ್ಲ. ಏರ್ ಶೋ ವಿಚಾರದಲ್ಲೂ ಗೊಂದಲ ಸೃಷ್ಟಿ ಮಾಡಿದ್ದರು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆಗುತ್ತಿರುವ ಅಪಮಾನ ಕನ್ನಡಿಗರು ಸಹಿಸುವುದಿಲ್ಲ. ಈ ಕುರಿತು ಎಲ್ಲ ಸಂಸತ್ ಸದಸ್ಯರು ಪ್ರಧಾನಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಒತ್ತಡ ಹೇರಬೇಕು, ಇಲ್ಲದೇ ಹೋದರೆ ಕೇಂದ್ರ ಸಚಿವರಿಗೆ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಶಂಕರ್ ಮಿಶ್ರಾ ಬೆಂಗಳೂರಲ್ಲಿ ಬಂಧನ
Advertisement
Advertisement
ಚುನಾವಣೆ ಸಂದರ್ಭದಲ್ಲಿ ಕೇವಲ ಭಾವನಾತ್ಮಕ ವಿಷಯ ಮುಂದಿಟ್ಟುಕೊಂಡು ಹೋಗುತ್ತಾರೆ. ನಮ್ಮ ಯೋಜನೆಗಳು ಐದೈದು ವರ್ಷ ಆದರೂ ಕೇಂದ್ರದಿಂದ ಅಪ್ರೂವ್ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಳೇ ಕೇಸ್ ರೀ ಓಪನ್ ಮಾಡ್ಬಿಡಿ- ಪಕ್ಷದ ಹಿರಿಯ ನಾಯಕರ ಚಾಟಿಗೆ ಬೊಮ್ಮಾಯಿ ಏನ್ಮಾಡ್ತಾರೆ..!?
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k