ರಾಮನಗರ: ಮೇ 15ಕ್ಕೆ ಡಿಕೆಶಿ (DK Shivakumar) ಸಿಎಂ ಆಗೋದು ಫಿಕ್ಸ್, ಇದೇ ನನ್ನ ಅಂತಿಮ ದಿನಾಂಕ ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೇಳಿದ್ದಾರೆ.
ಡಿಕೆಶಿ ಸಿಎಂ ಆಗಲು ಈ ಹಿಂದೆ ಎರಡ್ಮೂರು ದಿನಾಂಕ ನೀಡಿದ್ದ ಇಕ್ಬಾಲ್ ಹುಸೇನ್, ಇದೀಗ ಮೇ 15ಕ್ಕೆ ಅಂತಿಮ ದಿನ ಎಂದಿದ್ದಾರೆ. ಈ ಅವಧಿಯಲ್ಲೇ ಡಿಕೆಶಿ ಸಿಎಂ ಆಗೇ ಆಗುತ್ತಾರೆ. ಅವರಿಗೆ ಅವಕಾಶ ಸಿಗಬೇಕು ಅನ್ನೋದು ಎಲ್ಲರ ಬಯಕೆ. ಅವರಿಗೆ ಸಿಎಂ ಸ್ಥಾನ ಸಿಗಬೇಕು ಎಂಬುದು ನಮ್ಮೆಲ್ಲರ ಆಸೆ. ಅವರ ಮಾರ್ಗದರ್ಶನದಲ್ಲಿ ನಾವು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಅವರ ನೇತೃತ್ವದಲ್ಲಿ ಈ ರಾಜ್ಯದ ಅಭಿವೃದ್ಧಿ ನೋಡಬೇಕು ಅಂತ ಸಾಕಷ್ಟು ಶಾಸಕರುಗಳ ಆಸೆ ಇದೆ. ಮೇ 15ರ ಒಳಗಡೆ ಅವರಿಗೆ ಅಧಿಕಾರ ಸಿಗುತ್ತೆ ಎನ್ನುವ ಅಭಿಲಾಷೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಜೊತೆ ಫುಟ್‌ಬಾಲ್ – ಗೋಲ್ ಹೊಡೆದು ಸಂಭ್ರಮಿಸಿದ ಮೋದಿ
ಇನ್ನೂ ಸತೀಶ್ ಜಾರಕಿಹೊಳಿ ಹಾಗೂ ಹೆಚ್‌ಸಿ.ಮಹಾದೇವಪ್ಪ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿರುವ ಬಗ್ಗೆ ಮಾತನಾಡಿ, ಅವರು ನಮ್ಮ ಹಿರಿಯ ನಾಯಕರುಗಳು. ಪಕ್ಷದ ವರಿಷ್ಠರನ್ನ ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ತಮ್ಮ ಕಷ್ಟ- ಸುಖ ಮಾತಾಡಲು ಹೋಗಿರುತ್ತಾರೆ. ರಾಜ್ಯದ ಬಗ್ಗೆ ಕಾಳಜಿ ಇಟ್ಟು, ಚರ್ಚೆ ಮಾಡಲು ಹೋಗಿರುತ್ತಾರೆ ಎಂದರು. ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ನಿರ್ಮಲಾ ಸೀತಾರಾಮನ್

