ಬೆಂಗಳೂರು: ಎನ್‌ಪಿಎಸ್‌ನಿಂದ (NPS) ಓಪಿಎಸ್ (OPS) ಜಾರಿ ಮಾಡೋ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡೋದಾಗಿ ಸಿಎಂ ಡಿಕೆ ಶಿವಕುಮಾರ್ (DK Shivakumar) ಸರ್ಕಾರಿ ನೌಕರರಿಗೆ ಭರವಸೆ ನೀಡಿದ್ದಾರೆ.
ಸರ್ಕಾರಿ ನೌಕರರ ಸಂಘದಿಂದ ಅರಮನೆ ಮೈದಾನದಲ್ಲಿ (Palace Ground) ಸಿಎಂ ಡಿಕೆ ಶಿವಕುಮಾರ್ ಮತ್ತು ಡಿಸಿಎಂ ಪರಮೇಶ್ವರ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಸಿಎಂ ಡಿಕೆ ಶಿವಕುಮಾರ್ ಅವರ ಮುಂದೆ ಬೇಡಿಕೆ ಇಟ್ಟರು. 2.5 ಲಕ್ಷ ನೌಕರರು ಎನ್‌ಪಿಎಸ್‌ನಲ್ಲಿದ್ದಾರೆ. ಇವರಿಗೆ ಓಪಿಎಸ್ ಮಾಡಿಕೊಡಬೇಕು. ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯದ ನೌಕರರಿಗೆ ವೇತನ ಘೋಷಣೆ ಮಾಡಬೇಕು. ಸರ್ಕಾರಿ ನೌಕರರಿಗೆ ಸರ್ಕಾರ ಕೊಡ್ತಿರೋ 5 ಗ್ಯಾರಂಟಿಗಳನ್ನ ಬೇಕಾದ್ರೆ ವಾಪಸ್ ಪಡೆಯಿರಿ. ಆದ್ರೆ ಒಪಿಎಸ್ ಮತ್ತು ಕೇಂದ್ರ ಮಾದರಿಯ ವೇತನ ವ್ಯವಸ್ಥೆ ಗ್ಯಾರಂಟಿ ಕೊಡಿ ಅಂತ ಮನವಿ ಮಾಡಿದರು. ಇದನ್ನೂ ಓದಿ: ನಾಡಹಬ್ಬ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡಿದ್ರೆ ತಪ್ಪೇನು?: ದೇವಿಪ್ರಸಾದ್ ಶೆಟ್ಟಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಅರಮನೆ ಮೈದಾನದಲ್ಲಿ ಇಂದು ನಡೆದ ‘ನಮ್ಮಭಿಮಾನದ ಅಭಿನಂದನಾ ಸಮಾರಂಭ’ದಲ್ಲಿ ಭಾಗವಹಿಸಿದೆ.
ರಾಜ್ಯದ ಅಭಿವೃದ್ಧಿ ಮತ್ತು ಜನಸೇವೆಯಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ನಿಷ್ಠೆ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವ ಶ್ಲಾಘನೀಯ. ಉತ್ತಮ ಆಡಳಿತಕ್ಕಾಗಿ ಸರ್ಕಾರ ಸದಾ… pic.twitter.com/l2sh1jr2GH
— DK Shivakumar (@DKShivakumar) July 11, 2026
ಅಭಿನಂದನೆ ಸ್ವೀಕಾರ ಮಾಡಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ದೊಡ್ಡ ಬೇಡಿಕೆ ಇಟ್ಟಿದ್ದೀರಾ. ನಿಮ್ಮ ಬೇಡಿಕೆ ಸಮಿತಿ ವರದಿ ಬಂದ ಕೂಡಲೇ ಕ್ಯಾಬಿನೆಟ್‌ಗೆ ತರುತ್ತೇನೆ. ನಿಮ್ಮನ್ನು ಕರೆಸಿ ಮಾತಾಡ್ತೀನಿ. ನಾವು ಬಸವಣ್ಣನ ನಾಡಲ್ಲಿ ಹುಟ್ಟಿದ್ದೇವೆ. ಕೊಟ್ಟ ಮಾತು ಉಳಿಸಿಕೊಳ್ತೀನಿ. ನುಡಿದಂತೆ ನಡೆದಿರೋದು ಕಾಂಗ್ರೆಸ್. ನಂಬಿಕೆ ಮುಖ್ಯ. ನಂಬಿಕೆ ಇಲ್ಲದೇ ಸಂಬಂಧ ಉಳಿಯಲ್ಲ. ತಾಳ್ಮೆಯಿಂದ ಇರಿ. ನಮಗೆ ಸಿಕ್ಕ ಅವಕಾಶದಲ್ಲಿ ನಿಮ್ಮ ಹೃದಯ ಗೆಲ್ಲೋ ಕೆಲಸ ಮಾಡ್ತೀವಿ. ನಾವು ನಿಮ್ಮ ಜೊತೆ ಇರ್ತೀವಿ ಎಂದು ಭರವಸೆ ಕೊಟ್ಟರು. ಕಾರ್ಯಕ್ರಮದಲ್ಲಿ ಡಿಸಿಎಂ ಪರಮೇಶ್ವರ್, ಆದಿಚುಂಚನಗಿರಿ ಶ್ರೀ, ಸಿದ್ದಗಂಗಾ ಶ್ರೀಗಳು ಸೇರಿ ಹಲವರು ಭಾಗಿಯಾಗಿದ್ದರು.
