ಬೆಂಗಳೂರು: ಅಯೋಧ್ಯೆ ರಾಮ ಮಂದಿರದಲ್ಲಿ (Ram mandir) ಹುಂಡಿ ಹಣ ಕಳವು ಪ್ರಕರಣ ರಾಜ್ಯದ ಮೇಲೂ ಪರಿಣಾಮ ಬೀರಿದ್ದು, ಶೀಘ್ರದಲ್ಲೇ ಮುಜರಾಯಿ ದೇವಸ್ಥಾನಗಳ ಹುಂಡಿ ಹಣ ಎಣಿಕೆ ಸಂಬಂಧ ಮಾರ್ಗಸೂಚಿ ಹೊರಡಿಸಲು ಸರ್ಕಾರ ಮುಂದಾಗಿದೆ.
ಈ ಕುರಿತು ಸಿಎಂ ಡಿಕೆ ಶಿವಕುಮಾರ್ (DK Shivakumar) ಮಾತನಾಡಿ, ರಾಮಮಂದಿರ ಹುಂಡಿ ಕಳವು ಪ್ರಕರಣದಿಂದಾಗಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಸೂಚನೆ ಕೊಡಲಾಗಿದೆ. ಮುಜರಾಯಿ (Muzrai) ದೇವಸ್ಥಾನಗಳಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಲು ಸೂಚನೆ ಕೊಡಲಾಗಿದೆ. ಹುಂಡಿಗಳಿಂದ ಹಣ ತೆಗೆಯೋದರಿಂದ ಹಿಡಿದು ಬ್ಯಾಂಕ್‌ಗೆ ಹಾಕುವವರೆಗೆ ವಿಡಿಯೋ ರೆಕಾರ್ಡಿಂಗ್ ಮಾಡಲು ಹೇಳಿದ್ದೇವೆ. ದೇವಸ್ಥಾನಗಳ ಹುಂಡಿ ಹಣ ಎಣಿಕೆ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸ್ತೇವೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಕೆ: ಸಿಎಂ ಘೋಷಣೆ
ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮಾತಾಡಿ, ಈಗಾಗಲೇ ದೇಗುಲಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಿರ್ತಾರೆ, ಅದರ ವಿಡಿಯೋ ಠಾಣೆಗಳಿಗೆ ಕೊಟ್ರೆ ಅನುಕೂಲ ಆಗುತ್ತೆ. ಇದರಲ್ಲಿ ಯಾವುದೇ ರೀತಿ ಅನುಮಾನ ಪಡೋದೇನೂ ಇಲ್ಲ. ಸಾರ್ವಜನಿಕರ ಹಣ, ಸಾರ್ವಜನಿರಕರಿಗೆ ಸಂಶಯ ಬರಬಾರದು ಅಂತ ಇದನ್ನು ಮಾಡಿದ್ದಾರೆ. ಮುಜರಾಯಿ ಇಲಾಖೆ ಕೂಡ ದೇವಸ್ಥಾನಗಳಿಗೆ ಗೈಡ್‌ಲೈನ್ಸ್ ಬಿಡುಗಡೆ ಮಾಡಲು ಮುಂದಾಗಿದೆ ಎಂದು ಹೇಳಿದ್ದಾರೆ.
ಮಾರ್ಗಸೂಚಿಗಳೇನು?
ಇಡೀ ದೇವಸ್ಥಾನಕ್ಕೆ ಒಂದೇ ಕಡೆ ಕಾಣಿಕೆ ಹುಂಡಿ ಇಡಬೇಕು
ದೇವಸ್ಥಾನದ ವಿವಿಧ ಭಾಗಗಳಲ್ಲಿ ಕಾಣಿಕೆ ಹುಂಡಿ ಇಡುವಂತಿಲ್ಲ
ಹುಂಡಿ ಎಣಿಕೆ ವೇಳೆ ತಾಲೂಕು ಮಟ್ಟದ ಅಧಿಕಾರಿಗಳ ಪರಿಶೀಲನೆ
ಭಕ್ತರು ಹುಂಡಿಗೆ ಹಣ ಹಾಕುವ ಜಾಗದಲ್ಲಿ ಸಿಸಿಟಿವಿ ಕಡ್ಡಾಯ
ಹುಂಡಿ ಹಣ ಎಣಿಕೆ ಸಿಸಿಟಿವಿಗಳ ಕಣ್ಗಾವಲಿನಲ್ಲಿಯೇ ನಡೆಯಬೇಕು
ದೇವಸ್ಥಾನಗಳಲ್ಲಿ ಆನ್‌ಲೈನ್ ಪೇಮೆಂಟ್ ಉತ್ತೇಜನ ಮಾಡುವುದು
ಪೊಲೀಸರು, ಡಿಸಿಯಿಂದ ದೇವಸ್ಥಾನದ ಸಿಸಿಟಿವಿಗಳ ಮಾನಿಟರ್
ಇನ್ನು ಬೀದರ್ (Bidar) ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರ (Khanapura) ಗ್ರಾಮದ ಸುಪ್ರಸಿದ್ಧ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಜಿಲ್ಲೆಯಲ್ಲೇ ಹೆಚ್ಚು ಆದಾಯ ಈ ಹುಂಡಿಯಲ್ಲಿ ಜಮೆ ಆಗುತ್ತದೆ. ಪ್ರತಿ ಮೂರು ತಿಂಗಳಿಗೆ ಒಂದು ಸಾರಿ ಹುಂಡಿ ಎಣಿಕೆ ಮಾಡಲಾಗುತ್ತದೆ. ಪ್ರತಿ ವರ್ಷ ಒಂದೂವರೆ ಕೋಟಿ ರೂ. ಹಣ ಸಂಗ್ರಹವಾಗುತ್ತದೆ. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಹೀಗಾಗಿ ದೇವಸ್ಥಾನದ ಒಟ್ಟು 13 ಹುಂಡಿಗಳಿಗೆ ಒಟ್ಟು 16 ಸಿಸಿಟಿವಿ ಅಳವಡಿಸಲಾಗಿದೆ. ಸಿಎಂ ಡಿಕೆಶಿ ಆದೇಶದ ಬೆನ್ನಲ್ಲೇ ಗರ್ಭಗುಡಿಯ ಪ್ರಮುಖ ಹುಂಡಿಗಳ ಬಳಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ.ಇದನ್ನೂ ಓದಿ: SIR ಪ್ರಕ್ರಿಯೆಯಲ್ಲಿ ಭಾಗವಹಿಸಲು ಜನರಿಗೆ ಅನುಕೂಲವಾಗಲು ಖಾಯಂ ನಿವಾಸ ಪ್ರಮಾಣಪತ್ರ ನೀಡುತ್ತೇವೆ: ಡಿಸಿಎಂ ಪರಮೇಶ್ವರ್
