LatestMain PostNational

ಭಯೋತ್ಪಾದನೆ ಕುರಿತಾದ ಚರ್ಚೆಗೆ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾನನ್ನು ನಾನು ಆಹ್ವಾನಿಸಿಲ್ಲ: ಹಮೀದ್ ಅನ್ಸಾರಿ

Advertisements

ನವದೆಹಲಿ: ಇರಾನ್ ರಾಯಭಾರಿ ಆಗಿದ್ದಾಗ ತಾನು ಭಾರತಕ್ಕೆ ಬಂದು ಗೂಢಾಚಾರಿಕೆ ನಡೆಸಿದ್ದೆ ಎಂದು ಹೇಳಿರುವ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾನನ್ನು ನಾನು ಭೇಟಿಯಾಗಿಲ್ಲ. ಭಯೋತ್ಪಾದನೆ ಕುರಿತಾದ ಚರ್ಚೆಗೆ ಭಾರತಕ್ಕೆ ಆಹ್ವಾನಿಸಿಲ್ಲ ಎಂಬುದಾಗಿ ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಈ ಬಗ್ಗೆ ಅನ್ಸಾರಿ ಮೇಲೆ ಆರೋಪಗಳು ಕೇಳಿ ಬಂದ ಬಳಿಕ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಮಾಧ್ಯಮಗಳು ಮತ್ತು ಬಿಜೆಪಿ ವಕ್ತಾರರು ತಮ್ಮ ಮೇಲೆ ಮಾಡಿರುವ ಆರೋಪಗಳು ಸುಳ್ಳಿನ ಕಂತೆ. ಭಾರತ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನನ್ನ ಭೇಟಿ ಹಾಗೂ ಸಭೆಗಳ ಬಗ್ಗೆ ತಿಳಿದಿರುತ್ತದೆ. ಹಾಗಾಗಿ ನುಸ್ರತ್ ಮಿರ್ಜಾನನ್ನು ಭೇಟಿಯಾಗಿರುವ ಬಗ್ಗೆ ಕೇಳಿ ಬಂದಿರುವ ಆರೋಪಗಳೆಲ್ಲವೂ ಸುಳ್ಳು ಎಂಬುದು ಗೊತ್ತಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಭಾರತ ಹಿಂದೂರಾಷ್ಟ್ರ; ಇಲ್ಲಿರುವ ದೇವರು ಒಂದೇ – ಮೋಹನ್‌ ಭಾಗವತ್‌

ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಭಾರತಕ್ಕೆ ಬಂದಿದ್ದಾಗ ಗೂಢಾಚಾರಿಕೆ ಮಾಡಿದ್ದರು. ಆಗ ಉಪರಾಷ್ಟ್ರಪತಿಯಾಗಿದ್ದ ಹಮೀದ್ ಅನ್ಸಾರಿಯವರು ಮಿರ್ಜಾನನ್ನು ಭಾರತಕ್ಕೆ ಆಹ್ವಾನಿಸಿದ್ದರು. ಆಗ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳ ಹಂಚಿಕೆಯಾಗಿತ್ತು. ಯುಪಿಎ ಸರ್ಕಾರ ಇದ್ದಾಗ ಮಿರ್ಜಾ ಐದು ಬಾರಿ ಭಾರತಕ್ಕೆ ಬಂದಿದ್ದರು. ಭಾರತದಿಂದ ರಹಸ್ಯ ಮಾಹಿತಿಯನ್ನು ಕಲೆಹಾಕಿ ಪಾಕಿಸ್ತಾನದ ಐಎಸ್‍ಐಗೆ ನೀಡಿದ್ದರು ಈ ಬಗ್ಗೆ ಅನ್ಸಾರಿ ಸ್ಪಷ್ಟಪಡಿಸಬೇಕೆಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಒತ್ತಾಯಿಸಿದ್ದರು. ಇದನ್ನೂ ಓದಿ: 5 ವರ್ಷದ ವಿದ್ಯಾರ್ಥಿನಿಯನ್ನು ಥಳಿಸಿದ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

Live Tv

Leave a Reply

Your email address will not be published.

Back to top button