ಮಂಗಳೂರು: ಧರ್ಮಸ್ಥಳದ (Dharmasthala) ಸೌಜನ್ಯ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಎಸ್ಐಟಿಯ ನೂತನ ಮುಖ್ಯಸ್ಥರು ಸೌಜನ್ಯ ಪೋಷಕರಿಗೆ ವಿಚಾರಣೆಗೆ ಬುಲಾವ್ ನೀಡಿದ್ದಾರೆ.
ಧರ್ಮಸ್ಥಳದ ಸೌಜನ್ಯ ಪ್ರಕರಣ (Sowjanya Case) ತನಿಖೆಗೆ ಎಸ್ಐಟಿಯ ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಠೋಡ್ ನೇಮಕಗೊಂಡಿದ್ದು, ಇಂದಿನಿಂದ (ನ.2) ಸಾರಥ್ಯ ವಹಿಸಲಿದ್ದಾರೆ. ಇದರ ಬೆನ್ನಲ್ಲೇ ಸೌಜನ್ಯ ಪೋಷಕರಿಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಕಾಡಿಗೆ SIT ಎಂಟ್ರಿ – ಸೌಜನ್ಯ ಮೃತದೇಹ ಸಿಕ್ಕ ಜಾಗಕ್ಕೆ ಭೇಟಿ
ಚೇತನ್ ಸಿಂಗ್ ರಾಠೋಡ್ ಅವರು ಇಂದು ಬೆಳಿಗ್ಗೆ ಮಂಗಳೂರು ಎಸ್ಐಟಿ ಕಚೇರಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಇಂದು ಮಧ್ಯಾಹ್ನ ವಿಚಾರಣೆಗೆ ಹಾಜರಾಗುವಂತೆ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಮಾವ ವಿಠಲ ಗೌಡ ಅವರಿಗೆ ತಿಳಿಸಿದ್ದಾರೆ.
