ಮಂಗಳೂರು: ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ (Soujanya Case) ಪ್ರಕರಣದ ಮರುತನಿಖೆ ಆರಂಭವಾಗಿದೆ. ಧರ್ಮಸ್ಥಳದ ಕಾಡಿಗೆ ಎಸ್ಐಟಿ (SIT) ಎಂಟ್ರಿ ಕೊಟ್ಟಿದ್ದು, ಸೌಜನ್ಯ ಮೃತದೇಹ ಸಿಕ್ಕ ಜಾಗಕ್ಕೆ ಭೇಟಿ ನೀಡಿದೆ.
14 ವರ್ಷದ ಹಿಂದಿನ ಪ್ರಕರಣದಲ್ಲಿ ಸೌಜನ್ಯ ಮೃತದೇಹ ಸಿಕ್ಕ ಜಾಗದಲ್ಲಿ ಮರುಸೃಷ್ಠಿ ಮಾಡಲಾಗಿದೆ. ಧರ್ಮಸ್ಥಳದ ಮಣ್ಣಸಂಕದ ಕಾಡಿನಲ್ಲಿ ಸೌಜನ್ಯ ಮೃತದೇಹ ಸಿಕ್ಕಿತ್ತು. ಇದನ್ನೂ ಓದಿ: ಸೌಜನ್ಯ ಕೇಸ್; SIT ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ನೇಮಕ – ಶಶಿಕುಮಾರ್ ಬಿಡುಗಡೆ
ಎಸ್ಐಟಿ ತನಿಖಾಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದಲ್ಲಿ ಮರುಸೃಷ್ಠಿ ಮಾಡಲಾಗಿದೆ. ಎಸ್ಐಟಿ ತಂಡದ ಜೊತೆ ಎಫ್ಎಸ್ಎಲ್ ಸಿಬ್ಬಂದಿ ಕೂಡ ಆಗಮಿಸಿದ್ದಾರೆ. ಸೌಜನ್ಯ ಮೃತದೇಹ ಸಿಕ್ಕ ಜಾಗವನ್ನು ಕುಟುಂಬಸ್ಥರು ತೋರಿಸಿದ್ದಾರೆ.
ಸೌಜನ್ಯ ಮಾವ ಪುರಂದರಗೌಡ ಹಾಗೂ ಸಂಬಂಧಿ ತುಕಾರಾಂ ಅವರಿಂದ ಮಾಹಿತಿ ಸಂಗ್ರಹಿಸಲಾಗಿದೆ. SOCO ತಂಡ, ಬೆಂಗಳೂರು FSL ತಂಡ, ಗ್ರಾಮ ಆಡಳಿತ ಅಧಿಕಾರಿ, ಪಂಚರು, ವೈದ್ಯರು, ಫೋಟೊ-ವೀಡಿಯೋ ತಂಡ ಕೂಡ ಸ್ಥಳಕ್ಕೆ ಆಗಮಿಸಿದೆ. ಇದನ್ನೂ ಓದಿ: ಸೌಜನ್ಯ ಅತ್ಯಾಚಾರ & ಕೊಲೆ ಕೇಸ್; ತನಿಖೆ ನಡೆಸಿದ್ದ ಕೆಳಸ್ತರದ ಪೊಲೀಸರು, ಸಿಬ್ಬಂದಿಗೆ SIT ನೋಟಿಸ್
