Connect with us

ದೀಪಿಕಾ ಪಡುಕೋಣೆ ತನ್ನ ಮದ್ವೆಗೆ ಖ್ಯಾತ ಬಾಲಿವುಡ್ ನಟಿಯನ್ನು ಆಹ್ವಾನಿಸಲ್ಲ!

ದೀಪಿಕಾ ಪಡುಕೋಣೆ ತನ್ನ ಮದ್ವೆಗೆ ಖ್ಯಾತ ಬಾಲಿವುಡ್ ನಟಿಯನ್ನು ಆಹ್ವಾನಿಸಲ್ಲ!

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಮದುವೆಗೆ ಖ್ಯಾತ ನಟಿಯನ್ನು ಆಹ್ವಾನಿಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ದೀಪಿಕಾರವರು ತಮ್ಮ ತಂಗಿ ಅನಿಷಾರೊಂದಿಗೆ ಖಾಸಗಿ ಕಾರ್ಯಕ್ರಮದ ಚಾಟ್ ಶೋನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಕಿಯಾದ ನಟಿ ನೇಹಾ ದೂಪಿಯಾ ಅವರು ನಿಮ್ಮ ಮದುವೆಗೆ ಯಾರಿಗೆ ಆಹ್ವಾನ ನೀಡುವುದಿಲ್ಲ ಎಂದು ದೀಪಿಕಾ ಅವರಲ್ಲಿ ಪ್ರಶ್ನಿಸಿದರು. ಇದಕ್ಕೆ ಗುಳಿ ಕೆನ್ನೆಯ ಸುಂದರಿ ಕತ್ರಿನಾ ಕೈಫ್ ಗೆ ಆಹ್ವಾನ ನೀಡುವುದಿಲ್ಲ ಖಡಕ್ ಆಗಿ ಉತ್ತರಿಸಿದ್ದಾರೆ.

ಈ ಹಿಂದೆ ದೀಪಿಕಾ ಮತ್ತು ರಣ್ ಬೀರ್ ಕಪೂರ್ ಜೊತೆ ಪ್ರೇಮ ಸಂಬಂಧ ಹೊಂದಿದ್ದರು. ಈ ಪ್ರೇಮ ಸಂಬಂಧ ಬ್ರೇಕಪ್ ಆಗಲು ಕ್ರತೀನಾ ಕಾರಣ ಎನ್ನುವ ಸುದ್ದಿ ಬಾಲಿವುಡ್ ವಲಯದಲ್ಲಿ ಹರಿದಾಡುತಿತ್ತು. ಈ ಕಾರಣಕ್ಕೆ ದೀಪಿಕಾ ಕತ್ರಿನಾಗೆ ಮದುವೆ ಆಹ್ವಾನ ನೀಡುತ್ತಿಲ್ಲ ಎನ್ನುವ ಮಾತು ಈಗ ಕೇಳಿ ಬಂದಿದೆ.

ಈಗ ದೀಪಿಕಾರ ಬದುಕಲ್ಲಿ ಈಗ ರಣವೀರ್ ಸಿಂಗ್‍ರ ಪ್ರವೇಶವಾಗಿದ್ದು, ಇಬ್ಬರು ಕೈ ಕೈ ಹಿಡಿದು ಸುತ್ತುತ್ತಿದ್ದಾರೆ. ಆದರೆ ಮದುವೆಯ ಬಗ್ಗೆ ಕೇಳಿದರೆ ಮೌನವಾಗುವ ದೀಪಿಕಾ ಉತ್ತರಿಸದೆ ಮೆಲ್ಲನೆ ಜಾರಿಕೊಳ್ಳುತ್ತಿದ್ದಾರೆ.

Advertisement
Advertisement