ಕಠ್ಮಂಡು: ನೇಪಾಳದ ಚೀನಾ ಗಡಿಯ ಬಳಿ (Nepal Flood) ಸಂಭವಿಸಿದ ಭೀಕರ ಪ್ರವಾಹದಲ್ಲಿ ಇದುವರೆಗೂ ಕನಿಷ್ಠ 939 ಜನರು ಸಾವನ್ನಪ್ಪಿದ್ದು, ಕಾಣೆಯಾದವರ ಸಂಖ್ಯೆ 3,925 ಕ್ಕೆ ಇಳಿಕೆಯಾಗಿದೆ.
ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರನೇ ದಿನಕ್ಕೆ ಕಾಲಿಟ್ಟಿದೆ. ಟಿಬೆಟ್‌ನಲ್ಲಿ ಇಲ್ಲಿಯವರೆಗೆ 16 ಜನ ಮೃತಪಟ್ಟಿದ್ದು, 546 ಜನರು ಕಣ್ಮರೆಯಾಗಿದ್ದಾರೆ.
ನೇಪಾಳದ ಪ್ರವಾಹದಲ್ಲಿ ಕಾಣೆಯಾದವರ ಪೈಕಿ 592 ವಿದೇಶಿಯರೂ ಸೇರಿದ್ದಾರೆ. ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 639 ಕಾರ್ಮಿಕರಿಗಾಗಿ ಹುಡುಕಾಟ ಮುಂದುವರಿದಿದೆ. ನೇಪಾಳದ ವಿಪತ್ತು ಸಂಸ್ಥೆ 3,333 ನೇಪಾಳಿ ನಾಗರಿಕರು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದೆ. ಹಿಮಾಲಯದ ಮಾರಕ ಪ್ರವಾಹವು ಸಾಮಾನ್ಯ ವಿಪತ್ತಲ್ಲ ಎಂದು ಹೇಳಿರುವ ನೇಪಾಳ ಪ್ರಧಾನಿ ಬಾಲೇಂದ್ರ ಶಾ ಹೆಚ್ಚಿನ ಅಂತರರಾಷ್ಟ್ರೀಯ ಕ್ರಮಕ್ಕೆ ಕರೆ ನೀಡಿದ್ದಾರೆ. ಇದನ್ನೂ ಓದಿ: ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯಲ್ಲಿ ಬಿರುಕು – ಜನರಲ್ಲಿ ಹೆಚ್ಚಿದ ಅತಂಕ
ಜಾಗತಿಕ ತಾಪಮಾನ ಹೆಚ್ಚಾದಂತೆ ಹಿಮಾಲಯ ಪ್ರದೇಶಗಳಲ್ಲಿಯೂ ತಾಪಮಾನದಲ್ಲಿ ಬದಲಾವಣೆಯಾಗುತ್ತಿದೆ. ಆದ್ದರಿಂದ ಈ ರೀತಿಯ ಅನಿರೀಕ್ಷಿತ ಪ್ರವಾಹ ಮತ್ತು ನೈಸರ್ಗಿಕ ವಿಪತ್ತು ಸಂಭವಿಸುತ್ತಿದೆ. ಹಿಮನದಿಗಳು ಕರಗಿ ಪ್ರವಾಹದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.ಇದನ್ನೂ ಓದಿ: ಬೆಂಗ್ಳೂರು ಏರ್‌ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತ – ತಪ್ಪಿದ ಭಾರೀ ಅನಾಹುತ
