– ನಾವು ಕೊಟ್ಟ ಮಾತಿನಂತೆ ಒಳಮೀಸಲಾತಿ ಜಾರಿ ಎಂದ ಡಿಸಿಎಂ
ಬೆಂಗಳೂರು: ನಾಯಕತ್ವದ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನು, ಸಿಎಂ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೆಹಲಿಗೆ ಹೋದ ವಿಚಾರವಿರಲಿ ನಾನು ಇನ್ನು ಮುಂದೆ ರಾಜಕೀಯ ವಿಚಾರಗಳನ್ನ ಮಾಧ್ಯಮದ ಮುಂದೆ ಮಾತನಾಡುವುದಿಲ್ಲ. ಸಮಯ ಬಂದಾಗ ಅದಾಗಿ ಅದೇ ಗೊತ್ತಾಗುತ್ತೆ. ನಮ್ಮಲ್ಲಿ ಯಾವುದೇ ಸಮಸ್ಯೆಯೂ ಇಲ್ಲ. ಯಾವ ರಾಜಕೀಯ ಇಲ್ಲ. ಏನೇನು ಯಾವಾಗ ಯಾವಾಗ ಆಗಬೇಕು ಆವಾಗ ಆಗುತ್ತೆ. ಏನೇನು ತೀರ್ಮಾನಗಳು ಆಗಿದ್ದಾವೋ ಅದು ಚಾಲ್ತಿಗೆ ಬರುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಮೀಸಲಾತಿ ಅನ್ವಯವಾಗದ ಹುದ್ದೆಗಳನ್ನು ಜನರಲ್ ಎಸ್‌ಸಿ ಎಂದು ಕರೆದರೆ ಅದು ಒಳಮೀಸಲಾತಿ ಹೇಗೆ ಆಗುತ್ತೆ: ಛಲವಾದಿ ಕಿಡಿ
ಪಕ್ಷದಲ್ಲಿ ಗೊಂದಲಗಳು ಇವೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಪಾರ್ಟಿಯಲ್ಲಿ ಯಾವ ಸಮಯದಲ್ಲಿ ಏನು ಮಾಡಬೇಕು ಆವಾಗ ಮಾಡುತ್ತಾರೆ. ನಮಗೆ ನಮ್ಮ ಪಕ್ಷದ ಮೇಲೆ ವಿಶ್ವಾಸ ಇದೆ. ಏನು ಮಾಡಬೇಕು ಅವರಿಗೆ ಗೊತ್ತಿದೆ. ನಾಯಕತ್ವ ಬದಲಾವಣೆ ವಿಚಾರ ನಿಮಗೇನಾದರೂ ಇರಬಹುದು. ನಾನು ಯಾವತ್ತು ಚರ್ಚೆ ಮಾಡಲು ಹೋಗಿಲ್ಲ. ಹೈಕಮಾಂಡ್ ಯಾವಾಗ ಹೇಳುತ್ತಾರೆ ಆವಾಗ ಅದರಂತೆ ನಡೆದುಕೊಳ್ಳುತ್ತೇವೆ ಎಂದರು.
ನಾವು ಕೊಟ್ಟ ಮಾತಿನಂತೆ ಒಳಮೀಸಲಾತಿ ಜಾರಿ ಮಾಡಿದ್ದೇವೆ. ಒಳಮೀಸಲಾತಿಯನ್ನು ಬಿಜೆಪಿ ಟೀಕೆ ಮಾಡುತ್ತಿದೆ. ಬಿಜೆಪಿಯವರ ಕೈಯಲ್ಲಿ ಏನು ಮಾಡಲು ಆಗಿಲ್ಲ. ನಾವೇನು ಮಾತು ಕೊಟ್ಟಿದೆವೋ ಆ ಮಾತಿನ ಪ್ರಕಾರ ನಡೆದಿದ್ದೇವೆ. ಹಿಂದೆ 17% ಇದ್ದಾಗಲೂ ನಾವು ಸರಿಯಾಗಿಯೇ ಮಾಡಿದ್ದೆವು. ಈಗಲೂ ಕೂಡ ಬಹಳ ಸರಳತೆಯಿಂದ ಮಾಡಿದ್ದೇವೆ. ಒಂದೇ ಸಮಸ್ಯೆ ಏನಿತ್ತು ಅಂದರೆ ಬಲಪಂಥ ಎಡಪಂಥ ಮೊದಲು ಯಾರಿಗೆ ನಂತರ ಯಾರಿಗೆ ಅನ್ನುವುದಿತ್ತು. ಅದಕ್ಕೆ ಅವಶ್ಯವಿರುವಂತಹ ದಾರಿಯನ್ನ ಕಂಡು ಹಿಡಿದಿಯಲಾಗಿದೆ ಬಲವಿರಲಿ ಎಡವಿರಲಿ ಲಂಬಾಣಿ ಇರಲಿ ಬೋವಿ ಇರಲಿ, ಎಬಿಸಿ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನು ನಮ್ಮ ಸರಕಾರ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೆಹಲಿ ಅಂಗಳದಲ್ಲಿ ಡಿಕೆ ಬ್ರದರ್ಸ್ ಪವರ್ ಗೇಮ್ – ಹೈಕಮಾಂಡ್ ಮುಂದೆ 2 ದಿನ, 2 ಭೇಟಿ, 2 ಖಡಕ್ ಷರತ್ತು!
30,40 ವರ್ಷದಿಂದ ಇದ್ದಂತಹ ಸಮಸ್ಯೆಯನ್ನು ನಾವು ಮಾತುಕೊಟ್ಟಂತೆ ಈಡೇರಿಸಿದ್ದೇವೆ. ಎಲ್ಲರಿಗೂ ನ್ಯಾಯ ಕೊಡುತ್ತಿದ್ದೇವೆ. ಎಲ್ಲರೂ ಒಟ್ಟಾಗಿ ಹೋಗಬೇಕು ಅಷ್ಟೇ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವ ವಿಚಾರದ ಬಗ್ಗೆಯೂ ಮಾತನಾಡಿದ ಅವರು, ಮಾಡಿಕೊಳ್ಳಲಿ ಬಿಡಿ ಹೋರಾಟ ಮಾಡಿದ್ದಾರೆ. ರಾಜಕೀಯ ವಿದಾಯ ಹೇಳಬೇಕಲ್ವ? ಅವರ ಪಕ್ಷಕ್ಕೆ ಸ್ಟ್ರೆಂಥ್ ಬೇಕಲ್ವಾ. ಅವರ ಪಕ್ಷಕ್ಕೆ ಏನೋ ಗುಡುಗು ಎಲ್ಲಾ ಕೊಡಬೇಕಲ್ವಾ ಎಂದು ಹೇಳಿದರು.

