ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಬೆಳಗ್ಗೆ 10:50 ನಂತರ ಚತುರ್ಥಿ ತಿಥಿ,
ಶುಕ್ರವಾರ, ಹಸ್ತ ನಕ್ಷತ್ರ
ರಾಹುಕಾಲ: ಬೆಳಗ್ಗೆ 11:09 ರಿಂದ 12:37
ಗುಳಿಕಕಾಲ: ಬೆಳಗ್ಗೆ 8:12 ರಿಂದ 9:40
ಯಮಗಂಡಕಾಲ: ಮಧ್ಯಾಹ್ನ 3:34 ರಿಂದ 5:03
Advertisement
ಮೇಷ: ಸ್ಥಿರಾಸ್ತಿ-ವಾಹನದ ಮೇಲೆ ಸಾಲ, ವಿದ್ಯಾಭ್ಯಾಸದಲ್ಲಿ ಸಹಪಾಠಿಗೆ ಸಹಕಾರ, ಮಾತೃವಿನಿಂದ ಆರ್ಥಿಕ ಸಹಾಯ, ಶೀತ-ಕಫ ಬಾಧೆ, ಗರ್ಭ ದೋಷ.
Advertisement
ವೃಷಭ: ಪ್ರಯಾಣದಲ್ಲಿ ಅನುಕೂಲ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬದಲಾವಣೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ತೀರ್ಥಕ್ಷೇತ್ರಗಳ ದರ್ಶನ, ಮಿತ್ರರ ಭೇಟಿಗಾಗಿ ಪ್ರಯಾಣ, ಮಕ್ಕಳಿಗೆ ಉತ್ತಮ ಅವಕಾಶ.
Advertisement
ಮಿಥುನ: ತಾಯಿ ಕಡೆಯಿಂದ ಧನಾಗಮನ, ಸ್ಥಿರಾಸ್ತಿ-ವಾಹನ ಯೋಗ, ಮನೆ ವಾತಾವರಣದಲ್ಲಿ ಉತ್ತಮ, ಉದ್ಯೋಗದಲ್ಲಿ ಪ್ರಗತಿ, ಶುಭ ಕಾರ್ಯಗಳಿಗೆ ಸುಸಮಯ.
Advertisement
ಕಟಕ: ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ಹತ್ತಿರದ ಪ್ರಯಾಣ, ಶರೀರದಲ್ಲಿ ನೋವು, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಬದಲಾವಣೆ, ಪತ್ರ ವ್ಯವಹಾರಗಳಲ್ಲಿ ಉತ್ತಮ.
ಸಿಂಹ: ಸಂತಾನ ದೋಷ ನಿವಾರಣೆ, ಮಕ್ಕಳಿಂದ ಕುಟುಂಬದಲ್ಲಿ ಉತ್ತಮ, ದೂರದಲ್ಲಿರುವ ಸಂಬಂಧಿಗಳ ಆಗಮನ, ಮನೆಗಾಗಿ ಅಧಿಕ ಖರ್ಚು.
ಕನ್ಯಾ: ಸನ್ಮಾರ್ಗದಲ್ಲಿ ನಡೆಯುವಿರಿ, ಮಿತ್ರರಿಂದ ಸಹಕಾರ, ಕೆಲಸ ಕಾರ್ಯಗಳಿಗೆ ಸಹಾಯ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅತಿಯಾದ ಒಳ್ಳೆಯತನದಿಂದ ಸಂಕಷ್ಟ, ಸ್ಥಿರಾಸ್ತಿ-ವಾಹನ ಖರೀದಿಗೆ ಮನಸ್ಸು.
ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ, ಅಜೀರ್ಣ ಸಮಸ್ಯೆ, ಶರೀರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ಧಾರ್ಮಿಕ ಕಾರ್ಯಕ್ಕಾಗಿ ಪ್ರಯಾಣ.
ವೃಶ್ಚಿಕ: ಅದೃಷ್ಟ ಒಲಿಯುವುದು, ಕರ್ಮಫಲಕ್ಕೆ ಪರಿಹಾರ ಪ್ರಾಪ್ತಿ, ಸನ್ಮಾರ್ಗದಲ್ಲಿ ಜೀವನ ನಡೆಸಲು ಚಿಂತನೆ, ಗುರು ಹಿರಿಯರ ಸಲಹೆಯಂತೆ ನಡೆಯುವಿರಿ, ಮಕ್ಕಳಿಗೆ ಉತ್ತಮ ಅವಕಾಶ.
ಧನಸ್ಸು: ಪ್ರಯಾಣದಲ್ಲಿ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಉದ್ಯೋಗ ನಷ್ಟ, ನಿರಾಸೆಯಿಂದ ದೈವನಿಂದನೆ, ವಿಶ್ರಾಂತಿ ವೇತನ ಪ್ರಾಪ್ತಿ, ಆಕಸ್ಮಿಕ ಧನಾಗಮನ, ಅನಿರೀಕ್ಷಿತ ಸಮಸ್ಯೆ ಎದುರಾಗುವುದು.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ, ಅವಕಾಶಗಳು ಹೆಚ್ಚಾಗುವುದು, ಮಕ್ಕಳಿಂದ ಆರ್ಥಿಕ ನೆರವು, ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಬಂಧುಗಳ ಆಗಮನ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕುಂಭ: ನೀರು-ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸಾಲಗಾರರಿಂದ ಸಮಸ್ಯೆ, ಕೂಲಿ ಕಾರ್ಮಿಕರಿಂದ ಕಿರಿಕಿರಿ, ಆಕಸ್ಮಿಕ ಧನ ನಷ್ಟ, ಅಮೂಲ್ಯ ವಸ್ತುಗಳು ಕಳವು.
ಮೀನ: ಸ್ಫರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಇಷ್ಟಾರ್ಥಗಳು ಸಿದ್ಧಿಸುವುದು, ಮಕ್ಕಳ ಜೀವನದಲ್ಲಿ ಸುಧಾರಣೆ, ದೇವತಾ ಕಾರ್ಯಗಳಿಂದ ನೆಮ್ಮದಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv