ಚಿಕ್ಕಮಗಳೂರು: ಹಿಂದೂಗಳ ಮೇಲಿನ ದಾಳಿ ಕೇಸ್ ವಾಪಸ್ ಪಡೆದು ರಾಜ್ಯ ಸರ್ಕಾರ ಯಾವ ಸಂದೇಶ ಕೊಡುತ್ತಿದೆ ಎಂದು ಎಂಎಲ್‌ಸಿ ಸಿ.ಟಿ ರವಿ (C.T Ravi) ಪ್ರಶ್ನಿಸಿದರು.
ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಮಾಧ್ಯಮಗಳ ಜೊತೆ ಮಾತಾಡಿದರು. ಈ ವೇಳೆ. ಲಾಡ್ಲೆ ಮಶಾಕ್ ದರ್ಗಾ (Ladle Mashak Dargah) ಕೇಸ್ ವಾಪಸ್ ವಿಚಾರವವಾಗಿ ಮಾತಾಡಿ, ರಾಘವ ಚೈತನ್ಯ ಬೃಂದಾವನದ ಪೂಜೆಗೆ ಹೋದಾಗ ದಾಳಿ ಮಾಡಿದ್ದರು. ಬಂದೋಬಸ್ತ್‌ಗೆ ಇದ್ದ ಪೊಲೀಸರು, ಎಸ್ಪಿ, ಸಂಸದ ಖೂಬಾ ಅವರ ಕಾರಿನ ಮೇಲೆ ದಾಳಿ ಮಾಡಿದವರ ಕೇಸ್ ವಾಪಸ್ ಪಡೆಯಲಾಗಿದೆ. ಈ ಮೂಲಕ ಸರ್ಕಾರ ಏನು ಸಂದೇಶ ಕೊಡ್ತಿದೆ? ಈ ಮೂಲಕ ನಿಮ್ಮ ಜೊತೆ ನಾವಿದ್ದೇವೆ ಎಂಬ ನೀತಿಯನ್ನ ಕಾಂಗ್ರೆಸ್ ಅನುಸರಿಸುತ್ತಿದೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕ್ರೆಡಿಟ್ ವಾರ್: ಕೈ-ಕಮಲ ಕಾರ್ಯಕರ್ತರ ಮಧ್ಯೆ ಮಾರಾಮಾರಿ, ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ!
ಕಮ್ಯುನಲ್-ಕ್ರಿಮಿನಲ್ ಗಳಿಗೆ ರಕ್ಷಣೆ ಕೊಡುವ ಕಾಂಗ್ರೆಸ್ ನೀತಿ ಸಮಾಜಘಾತುಕ, ಅಪಾಯಕಾರಿಯಾಗಿದೆ. ರೈತರು, ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ಹಿಂಪಡೆದಿದ್ದರೆ ಪ್ರಶ್ನೆ ಮಾಡ್ತಿರಲಿಲ್ಲ. ಚಳುವಳಿ ಕೇಸ್ ವಾಪಸ್ ಪಡೆಯೋದು ಬೇರೆ, ಬೆಂಕಿ ಹಾಕಿ, ದೊಣ್ಣೆ ಹಿಡಿದ ಕೇಸ್ ವಾಪಸ್ ಪಡೆಯೋದು ಬೇರೆ. ಸರ್ಕಾರ ತಕ್ಷಣ ಈ ನಿರ್ಣಯ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿಗೆ ಸಾಲು ಸಾಲು ಸವಾಲು? – ಎಕ್ಸ್ ಖಾತೆ ಬೆನ್ನಲ್ಲೇ ಇನ್ಸ್ಟಾ ಖಾತೆ ಹ್ಯಾಕ್
