– ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಆಣೆ ಮಾಡಿದ ಬಿಜೆಪಿ ಶಾಸಕ
ಹಾಸನ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ (Cross Voting) ಆರೋಪದ ಹಿನ್ನೆಲೆಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ.ಸುರೇಶ್ (H.K.Suresh) ಅವರು ಆಣೆ-ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಧರ್ಮಸ್ಥಳದ (Dharmasthala) ಶ್ರೀ ಮಂಜುನಾಥಸ್ವಾಮಿ ಮೇಲೆ ಆಣೆ-ಪ್ರಮಾಣ ಮಾಡಲು ನೂರಾರು ಬೆಂಬಲಿಗರು, ಕಾರ್ಯಕರ್ತರ ಜೊತೆ ಶಾಸಕ ಸುರೇಶ್ ಹೊರಟಿಸಿದ್ದಾರೆ. ಇದಕ್ಕೂ ಮುನ್ನ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಆವರಣದಲ್ಲಿರುವ ಬಲಿ ಕಲ್ಲಿನ ಮೇಲೆ ಆಣೆ ಮಾಡಿದರು. ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ – ಸಿ.ಟಿ ರವಿ ನೇತೃತ್ವದ ಸಮಿತಿಯಿಂದ ಬಿವೈವಿಗೆ ವರದಿ ಸಲ್ಲಿಕೆ
ನಾನು ಅಡ್ಡ ಮತದಾನ ಮಾಡಿಲ್ಲ ಎಂದು ಶಾಸಕ ಹೆಚ್.ಕೆ.ಸುರೇಶ್ ಆಣೆ ಮಾಡಿದರು. ನಂತರ ಕರ್ಪೂರ ಹಚ್ಚಿ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದರು.
ಆರೋಪ ಬಂದ ಕೂಡಲೇ ಧರ್ಮಸ್ಥಳದ ಮಂಜುನಾಥಸ್ವಾಮಿ ಮೇಲೆ ಆಣೆ ಮಾಡುತ್ತೇನೆ ಎಂದು ಶಾಸಕ ಸುರೇಶ್ ಹೇಳಿದ್ದರು. ಮಾತಿನಂತೆ ಇಂದು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ, ಅಶೋಕ್ ಇಬ್ಬರೂ ಅಡ್ಡ ಮತದಾನ ಮಾಡಿಸಿರಬೇಕು: ಎಸ್.ಟಿ. ಸೋಮಶೇಖರ್
