ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಸರ್ಕಾರಿ, ಮ್ಯಾನೇಜ್ಮೆಂಟ್, ಎನ್‌ಆರ್‌ಐ ಸೇರಿದಂತೆ ಎಲ್ಲ ರೀತಿಯ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) ಮೂಲಕವೇ ಹಂಚಿಕೆ ಮಾಡಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H.Prasanna) ಅವರು ತಿಳಿಸಿದ್ದಾರೆ.
ಕೆಲವರು ಸರ್ಕಾರಿ ಕೋಟಾದ ಸೀಟು ಹೊರತುಪಡಿಸಿ ಇತರ ಸೀಟುಗಳನ್ನು ಕೊಡಿಸುವುದಾಗಿ ನಂಬಿಸುವ ಪ್ರಯತ್ನಗಳ ಬಗ್ಗೆ ದೂರುಗಳು ಬರುತ್ತಿದ್ದು ಈ ಬಗ್ಗೆ ಎಚ್ಚರ ವಹಿಸಿ. ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಗೆ ಮ್ಯಾನೇಜ್ಮೆಂಟ್ ಮತ್ತು ಎನ್‌ಆರ್‌ಐ (NRI) ಸೀಟುಗಳ ಶುಲ್ಕ ನಿಗದಿಪಡಿಸುವ ಅಧಿಕಾರ ಇದೆ. ಆದರೆ ಸೀಟು ಹಂಚಿಕೆಗೆ ಅದಕ್ಕೆ ಅವಕಾಶ ಇಲ್ಲ. ಅದೇನಿದ್ದರೂ ಕೆಇಎ ಮೂಲಕವೇ ಆಗಲಿದೆ. ಇದರ ನಡುವೆಯೂ ಸೀಟು ಕೊಡಿಸುತ್ತೇವೆ ಎಂದು ಯಾರಾದರೂ ಹೇಳಿದರೆ ಅದರ ಹಿಂದೆ ಮೋಸದ ಉದ್ದೇಶ ಇರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಚಿವ ಸಂಪುಟ ವಿಸ್ತರಣೆ ಸನ್ನಿಹಿತ – ನಾಳೆಯೇ ಸಚಿವರ ಪಟ್ಟಿ ಫೈನಲ್..?
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು ಸೀಟುಗಳನ್ನು ಮಾತ್ರ ಎನ್‌ಎಂಸಿ ಮೂಲಕ ಹಂಚಿಕೆ ಮಾಡಲಾಗುತ್ತದೆ. ಉಳಿದ ಶೇ.85ರಷ್ಟು ಸೀಟುಗಳನ್ನು ಕೆಇಎ ಮೂಲಕ ಹಂಚಿಕೆ ಮಾಡಲಾಗುತ್ತದೆ. ಹಾಗೆಯೇ ಖಾಸಗಿ ವೈದ್ಯಕೀಯ ಕಾಲೇಜುಗಳ/ಖಾಸಗಿ ವಿಶ್ವವಿದ್ಯಾಲಯಗಳ ಶೇ.100ರಷ್ಟು ಸೀಟುಗಳನ್ನು ಕೆಇಎ ಮೂಲಕವೇ ಹಂಚಿಕೆ ಮಾಡಲಾಗುತ್ತದೆ. ಕೆಲವು ಡೀಮ್ಡ್ ವಿಶ್ವವಿದ್ಯಾಲಯಗಳ ಅಲ್ಪ ಪ್ರಮಾಣದ ಸೀಟು ಬಿಟ್ಟು ಉಳಿದ ಎಲ್ಲವನ್ನೂ ಎನ್‌ಎಂಸಿ ಮೂಲಕವೇ ಹಂಚಿಕೆಯಾಗುತ್ತದೆ ಎಂದು ವಿವರಿಸಿದ್ದಾರೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ನೀಟ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ರ‍್ಯಾಂಕ್ ಆಧಾರದ ಮೇಲೆ ಕೆಇಎ ಮೂಲಕವೇ ಸೀಟು ಹಂಚಿಕೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ. ಸದ್ಯ ನೀಟ್ ಫಲಿತಾಂಶ ಪ್ರಕಟವಾಗಿದ್ಧು, ಅದರ ಮಾಹಿತಿ ಕೆಇಎಗೆ ಲಭ್ಯವಾದ ನಂತರ ನೀಟ್ ರೋಲ್ ನಂಬರ್ ಅನ್ನು ಸಿಇಟಿ ಅರ್ಜಿ ಜೊತೆ ಜೋಡಿಸಲು ಲಿಂಕ್ ಬಿಡುಗಡೆ ಮಾಡಲಾಗುವುದು. ಆ ಬಳಿಕ ಅಭ್ಯರ್ಥಿಗಳ ನೀಟ್ ರಾಂಕ್ ಜೋಡಣೆ ಆಗಲಿದೆ. ಅದರ ನಂತರ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಕಳ್ಳತನ ರಾಜಕೀಯಗೊಳಿಸಬೇಡಿ: ಸುಪ್ರೀಂ ಕೋರ್ಟ್
ಎನ್‌ಎಂಸಿ ಸೀಟು ಹಂಚಿಕೆಯ ವೇಳಾಪಟ್ಟಿ ಪ್ರಕಟಿಸಿದ ನಂತರವೇ ರಾಜ್ಯದ ವೈದ್ಯಕೀಯ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ. ಎನ್‌ಎಂಸಿಯೇ ಯಾವ ದಿನಾಂಕಗಳಂದು ರಾಜ್ಯಗಳು ಕೌನ್ಸೆಲಿಂಗ್ ಮಾಡಬೇಕು ಎನ್ನುವ ವೇಳಾಪಟ್ಟಿ ನೀಡಲಿದೆ. ಅಲ್ಲಿಯವರೆಗೂ ಪೋಷಕರು/ವಿದ್ಯಾರ್ಥಿಗಳು ತಮ್ಮ ರ‍್ಯಾಂಕ್‌ಗೆ ಹಿಂದಿನ ವರ್ಷಗಳಲ್ಲಿ ಎಲ್ಲೆಲ್ಲಿ ಸೀಟು ಹಂಚಿಕೆಯಾಗಿದೆ ಎಂಬುದರ ಮಾಹಿತಿಯನ್ನು ಕೆಇಎ ಬೋಟ್ ಮೂಲವೂ ಪಡೆಯಬಹುದು ಎಂದು ಹೇಳಿದ್ದಾರೆ.
ನೀಟ್ ಫಲಿತಾಂಶದ ವಿವರ ಬಂದ ನಂತರ ರಾಜ್ಯದ ವಿಳಾಸ ಇರುವ ಅಭ್ಯರ್ಥಿಗಳ ರ‍್ಯಾಂಕ್ ಪಟ್ಟಿಯನ್ನು ಆರೋಹಣ ಕ್ರಮದಲ್ಲಿ ಪ್ರಕಟಿಸಲಾಗುತ್ತದೆ. ಇದುವರೆಗೂ ವೈದ್ಯಕೀಯ ಕೋರ್ಸ್ ಸಲುವಾಗಿ ಅರ್ಜಿಯನ್ನೇ ಸಲ್ಲಿಸದವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನಂತರ ಅಂತಹವರ ದಾಖಲೆ ಪರಿಶೀಲನೆ ಕೂಡ ನಡೆಯಲಿದ್ದು, ಸದ್ಯದಲ್ಲೇ ವೇಳಾಪಟ್ಟಿ ಪ್ರಕಟಿಸಲಾಗುವುದು. ಫಾರ್ಮಸಿ ಕೋರ್ಸ್ಗಳಿಗೆ ಸಂಬAಧಿಸಿದAತೆ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಬಂದಿಲ್ಲ. ಬಂದ ನಂತರ ಎರಡನೇ ಸುತ್ತಿನ ಸೀಟು ಹಂಚಿಕೆಗೂ ಮುನ್ನ ಈ ಕೋರ್ಸ್ಗಳಿಗೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ.
ವೈದ್ಯಕೀಯ ಹಾಗೂ ಫಾರ್ಮಸಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವವರು ಮೊದಲ ಸುತ್ತಿನಲ್ಲಿ ಯಾವುದೇ ಕೋರ್ಸ್ನ ಸೀಟು ಹಂಚಿಕೆಯಾಗಿದ್ದರೂ ಚಾಯ್ಸ್-2 ಹಾಕಿ ನಂತರ ಸುತ್ತಿನಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದ್ದಾರೆ.ಇದನ್ನೂ ಓದಿ: ರೇಪ್ ಕೇಸ್ – ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಕ್ರಿಕೆಟಿಗನ ಬಂಧನಕ್ಕೆ ಕೋಲ್ಕತ್ತಾ ಹೈಕೋರ್ಟ್ ಆದೇಶ
