ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 17 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ.
ಬೆಳಗಾವಿಯಲ್ಲಿ ಒಬ್ಬನಿಂದಲೇ ಮೂವರಿಗೆ ಕೊರೊನಾ ತಗುಲಿದ್ದು, ಇಂದು ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆಯ ರಾಯಭಾಗದ ಮೂವರಿಗೆ ಮತ್ತು ಹೀರೇಬಾಗೆವಾಡಿಯ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಜಯಪುರದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದ್ದು ಮಾತ್ರವಲ್ಲದೇ 5 ಮಂದಿಗೆ ಬಂದಿದ್ದು ಗುಮ್ಮಟ ನಗರಿಯ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಕಲಬುರಗಿಯ ವೃದ್ಧನಿಂದ ಇಬ್ಬರಿಗೆ, ಮೈಸೂರಿನಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.
Advertisement
ಕರ್ನಾಟಕದಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದು, 54 ಮಂದಿ ಬಿಡುಗಡೆಯಾಗಿದ್ದಾರೆ. ರೋಗಿ 43, ರೋಗಿ 101, ರೋಗಿ 108-ಕೆ, ರೋಗಿ 195 ಐಸಿಯುನಲ್ಲಿದ್ದಾರೆ.
Advertisement
Advertisement
1. ರೋಗಿ 216: 32 ವರ್ಷದ ಪುರುಷನಾಗಿದ್ದು, ಮೈಸೂರು ನಿವಾಸಿ. ರೋಗಿ ನಂವರ್ 88ರ ಸಂಪರ್ಕದಲ್ಲಿದ್ದರು. ಅಲ್ಲದೇ ಫಾರ್ಮ ಕಂಪನಿಯ ಸಿಬ್ಬಂದಿಯಾಗಿದ್ದಾರೆ. ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
2. ರೋಗಿ 217: 75 ವರ್ಷದ ವೃದ್ಧೆಯಾಗಿದ್ದು, ಬೆಂಗಳೂರು ನಿವಾಸಿ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ ಸೋಂಕು. ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
3. ರೋಗಿ 218: 58 ವರ್ಷದ ವ್ಯಕ್ತಿಯಾಗಿದ್ದು, ಬೆಂಗಳೂರು ನಿವಾಸಿ. ಇವರು ಮಾರ್ಚ್ 21 ರಂದು ಇಂಡೋನೇಷಿಯಾದಿಂದ ಭಾರತಕ್ಕೆ ವಾಸಪ್ ಬಂದಿದ್ದರು. ಹೀಗಾಗಿ ಸೋಂಕು ತಗುಲಿದೆ ಎನ್ನಲಾಗಿದೆ. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
4. ರೋಗಿ 219: 76 ವರ್ಷದ ವೃದ್ಧನಾಗಿದ್ದು, ಬೆಂಗಳೂರು ನಿವಾಸಿ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರಿಗೆ ಸೋಂಕು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.
5. ರೋಗಿ 220: 24 ವರ್ಷದ ಮಹಿಳೆಯಾಗಿದ್ದು, ಕಲಬುರಗಿ ನಿವಾಸಿ. ರೋಗಿ ನಂವರ್ 177ರ ಸಂಪರ್ಕದಲ್ಲಿದ್ದರು. ಅಲ್ಲದೇ 177ರ ಸೊಸೆಯಾಗಿದ್ದಾರೆ. ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
6. ರೋಗಿ 221: 60 ವರ್ಷದ ವೃದ್ಧೆಯಾಗಿದ್ದು, ವಿಜಯಪುರ ನಿವಾಸಿ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯಲ್ಲಿ ಸೋಂಕು ಕಂಡುಬಂದಿದೆ. ವಿಜಯಪುರದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
7. ರೋಗಿ 222: 38 ವರ್ಷದ ಮಹಿಳೆಯಾಗಿದ್ದು, ಕಲಬುರಗಿ ನಿವಾಸಿ. ರೋಗಿ ನಂವರ್ 177ರ ಸಂಪರ್ಕದಲ್ಲಿದ್ದರು. ಕಲಬುರಗಿಯ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ
8. ರೋಗಿ 223: 19 ವರ್ಷದ ಯುವಕನಾಗಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ ನಿವಾಸಿ. ಈತ ರೋಗಿ ನಂಬರ್ 150ರ ಸಂಪರ್ಕದಲ್ಲಿದ್ದನು. ಬೆಳಗಾವಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
9. ರೋಗಿ 224: 38 ವರ್ಷದ ಪುರುಷನಾಗಿದ್ದು, ಬೆಳಗಾವಿ ಜಿಲ್ಲೆಯ ಹೀರೇಬಾಗೇವಾಡಿ ನಿವಾಸಿ. ಈತ ರೋಗಿ ನಂಬರ್ 128ರ ಸಂಪರ್ಕದಲ್ಲಿದ್ದನು. ಬೆಳಗಾವಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
10. ರೋಗಿ 225: 55 ವರ್ಷದ ಪುರುಷನಾಗಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ ನಿವಾಸಿ. ಈತ ರೋಗಿ ನಂಬರ್ 150ರ ಸಂಪರ್ಕದಲ್ಲಿದ್ದನು. ಬೆಳಗಾವಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
11. ರೋಗಿ 226: 25 ವರ್ಷದ ಪುರುಷನಾಗಿದ್ದು, , ಬೆಳಗಾವಿ ಜಿಲ್ಲೆಯ ರಾಯಬಾಗ ನಿವಾಸಿ. ಈತ ರೋಗಿ ನಂಬರ್ 150ರ ಸಂಪರ್ಕದಲ್ಲಿದ್ದನು. ಬೆಳಗಾವಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
A 2 year old has been identified as Corona +ve in Chittapur.
Had a video conference with taluk officials & we are taking precautionary & preventive measures to ensure the infection doesn’t spread by sealing off the area & will be checking for more people who might be infected 1/n pic.twitter.com/fw3527hY7h
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 12, 2020
12: ರೋಗಿ 227: 2 ವರ್ಷದ ಹೆಣ್ಣು ಮಗು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಮೂಲ ತಿಳಿದು ಬಂದಿಲ್ಲ. ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
I also request all citizens to follow the rules that have been laid down to ensure your safety & the safety of all.
The family has no travel history past 2 months, hence the all primary & secondary contacts will be tested. 3/3#StayHomeStaySafe
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 12, 2020
13. ರೋಗಿ 228: 13 ವರ್ಷದ ಗಂಡು ಮಗುವಿಗೆ ಬಂದಿದ್ದು ಮೂಲ ಪತ್ತೆಯಾಗಿಲ್ಲ, ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
14. ರೋಗಿ 229: 12 ವರ್ಷದ ಹೆಣ್ಣು ಮಗುವಿಗೆ ಸೋಂಕು ಬಂದಿದೆ. ಮೂಲ ಪತ್ತೆಯಾಗಿಲ್ಲ, ವಿಜಯಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
15. ರೋಗಿ 230: 10 ವರ್ಷದ ಗಂಡು ಮಗುವಿಗೆ ಸೋಂಕು ಬಂದಿದ್ದು, ಮೂಲ ಸಿಕ್ಕಿಲ್ಲ. ವಿಜಯಪುರದಲ್ಲಿ ಚಕಿತ್ಸೆ ನೀಡಲಾಗುತ್ತಿದೆ.
16. ರೋಗಿ 231: 49 ವರ್ಷದ ವ್ಯಕ್ತಿಗೆ ಸೋಂಕು ಬಂದಿದ್ದು, ಸಂಪರ್ಕ ಪತ್ತೆಹಚ್ಚುವಿಕೆ ಪ್ರಗತಿಯಲ್ಲಿದೆ. ವಿಜಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
17. ರೋಗಿ 232: 20 ವರ್ಷದ ಯುವತಿಗೆ ಸೋಂಕು ಬಂದಿದ್ದು, ಮೂಲ ತಿಳಿದು ಬಂದಿಲ್ಲ. ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.