ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ದುರಾಡಳಿತದಿಂದ ಬರಿದಾಗಿಸಿದ ಬೊಕ್ಕಸ ಭರ್ತಿಗೆ ಇಡೀ ಕೆಎಂಎಫ್ (KMF) ಅನ್ನೇ ಗುತ್ತಿಗೆ ಪಡೆದುಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.
ಶುಕ್ರವಾರವಷ್ಟೇ ರೈತರ ಹೆಸರೇಳಿ ನಂದಿನಿ ಹಾಲಿನ ದರ ಏರಿಕೆ ಮಾಡಿದ್ದ ಸರ್ಕಾರ ಇದೀಗ ನಂದಿನಿ ಮೊಸರಿನ ಬೆಲೆಯನ್ನೂ ಗಗನಕ್ಕೇರಿಸಿದೆ. ಹಾಲು, ಮೊಸರು, ತುಪ್ಪ ಹೀಗೆ ಇಡೀ ಕೆಎಂಎಫ್ ಉತ್ಪನ್ನಗಳ ಬೆಲೆಯನ್ನು ದುಪ್ಪಟ್ಟು ಅಧಿಕಗೊಳಿಸಿ ಶ್ರೀಸಾಮಾನ್ಯರ ಜೇಬನ್ನು ಖಾಲಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವೆಜ್ ಬಿರಿಯಾನಿ ಕೇಳಿದ ಕುಟುಂಬಕ್ಕೆ ಚಿಕನ್ ಬಿರಿಯಾನಿ – ಕೆಂಪೇಗೌಡ ಏರ್ಪೋರ್ಟ್ನಲ್ಲಿ ಆಹಾರ ಪೂರೈಕೆ ವಿವಾದ
ಬೆಲೆ ಏರಿಕೆಯಲ್ಲಿ ಇತಿಹಾಸ ಸೃಷ್ಟಿ:
ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಕರ್ನಾಟಕದ ಇತಿಹಾಸದಲ್ಲೇ ಮೊದಲೆನ್ನುವಂತೆ ಭಾರೀ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಮ್ಮಂಥ ಮಿಡಲ್ಕ್ಲಾಸ್ ಜನ ಜೀವನ ಮಾಡೋಕಾಗಲ್ಲ: ಹಾಲು, ಮೊಸರು ದರ ಏರಿಕೆಗೆ ಜನರ ಆಕ್ರೋಶ
ಸಿಎಂ ಡಿಕೆಶಿ ನೇತೃತ್ವದ ಸರ್ಕಾರ, ತನ್ನ ಆರ್ಥಿಕ ದುರಾಡಳಿತ ಹಾಗೂ ಖಾಲಿ ಬೊಕ್ಕಸವನ್ನು ಮುಚ್ಚಿಕೊಳ್ಳಲು ಕೆಎಂಎಫ್ ಮೂಲಕ ಮೊಸರಿನ ದರವನ್ನು ಅತಿರೇಕ ಎನ್ನುವಂತೆ ಏರಿಸಿದೆ. ಈ ಸರ್ಕಾರಕ್ಕೆ ನಿಜಕ್ಕೂ ಶ್ರೀಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲವಾಗಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ವರುಣ ನಾಲೆಯಲ್ಲಿ ಈಜಲು ತೆರಳಿದ್ದ ಬಿ.ಇ ವಿದ್ಯಾರ್ಥಿ ಸಾವು – ಮತ್ತೋರ್ವನಿಗಾಗಿ ಶೋಧ
ಪ್ರಸ್ತುತ ಅರ್ಧ ಲೀಟರ್ ಮೊಸರಿನ ಬೆಲೆಯನ್ನು 28 ರೂ.ನಿಂದ 34 ರೂ.ಗೆ ಏರಿಸಿದ್ದು, ಶೇ.21.43ರಷ್ಟು ಅಂದರೆ 6 ರೂ. ಹೆಚ್ಚಿಸಿದೆ. ಒಂದು ಲೀಟರ್ ಮೊಸರು ಅನ್ನು 54 ರೂ.ನಿಂದ 68 ರೂ.ಗೆ ಅಂದರೆ ಶೇ.25.93ರಷ್ಟು ಲೀಟರ್ಗೆ ಬರೋಬ್ಬರಿ 14 ರೂ. ಭಾರೀ ಏರಿಕೆ ಮಾಡಿದ್ದು, ಜನರಿಗೆ ಮೊಸರು ಕೊಟ್ಟು ತಾನು ಬೆಣ್ಣೆ ತಿನ್ನುತ್ತಿದೆ ಕಾಂಗ್ರೆಸ್ ಸರ್ಕಾರ ಎಂದು ಹರಿಹಾಯ್ಡಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಕಬ್ಬು ಬೆಳೆಗಾರರ ಪ್ರತಿಭಟನೆ; ಹಾವೇರಿಯಲ್ಲಿ ಹೆದ್ದಾರಿ, ಚಿಕ್ಕೋಡಿಯಲ್ಲಿ ಬಸ್ ಸಂಚಾರ ಬಂದ್
ಶುಕ್ರವಾರವಷ್ಟೇ ಹಾಲಿನ ದರವನ್ನು ಲೀಟರ್ಗೆ 8 ರೂ. ಹೆಚ್ಚಿಸಿದ್ದ ಸರ್ಕಾರ, ಈಗ ಒಂದೇ ಬಾರಿಗೆ ಶೇ.21ರಿಂದ 26%ರಷ್ಟು ಮೊಸರಿನ ಬೆಲೆಯನ್ನೂ ಏರಿಸಿ ಬಡ ಹಾಗೂ ಮಧ್ಯಮ ವರ್ಗದವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದೆ ಎಂದು ತೀವ್ರವಾಗಿ ಖಂಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಹೋಟೆಲ್ ಸ್ವಿಮ್ಮಿಂಗ್ ಪೂಲ್ನಲ್ಲಿ ಇಬ್ಬರು ವಿದೇಶಿಗರು ವಿದ್ಯುತ್ ಶಾಕ್ಗೆ ಬಲಿ – ಮತ್ತಿಬ್ಬರಿಗೆ ಗಾಯ
ರಾಜ್ಯದಲ್ಲಿ ಅಭಿವೃದ್ಧಿಯನ್ನು ಮರೀಚಿಕೆಯಾಗಿಸಿದ ಕಾಂಗ್ರೆಸ್ ಸರ್ಕಾರ, ತನ್ನ ತಪ್ಪು ನಡೆ-ನಿರ್ಣಯ, ಯೋಜನೆಗಳಿಂದಾಗಿ ಈಗ ಕೆಎಂಎಫ್ ಉತ್ಪನ್ನಗಳ ಬೆಲೆ ಏರಿಕೆ ಮೂಲಕ ರಾಜ್ಯದ ಕಡುಬಡವರಿಂದ ಸುಂಕ ವಸೂಲಿ ಮಾಡುತ್ತಿದ್ದು, ಇದು ಸರ್ಕಾರದ ಸಂಪೂರ್ಣ ಜನವಿರೋಧಿ ಹಾಗೂ ದುಬಾರಿ ನೀತಿಗೆ ಹಿಡಿದ ಕೈಗನ್ನಡಿ ಎಂದು ಕೆಂಡಕಾರಿದರು. ಇದನ್ನೂ ಓದಿ: ಇವತ್ತು ಮದುವೆಗೆ ಬರ್ತೀನಿ ಎಂದಿದ್ರು – ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸುಧೀರ್ ನೆನೆದ ಸಂಬಂಧಿಕರು
