ಬೆಂಗಳೂರು: ರಾಜ್ಯದ ಜನತೆಗೆ ಕೆಎಂಎಫ್ ಭಾರಿ ಶಾಕ್ ಕೊಟ್ಟಿದೆ. ಹಾಲು ಮತ್ತು ಮೊಸರು ದರ ಏರಿಕೆಗೆ ಜನರು ಹೈರಾಣಾಗಿದ್ದಾರೆ. ನಮ್ಮಂಥಹ ಮಧ್ಯಮ ವರ್ಗದ ಜನರು ಜೀವನ ಮಾಡುವುದಕ್ಕೆ ಆಗುವುದಿಲ್ಲ ಅಂತ ಬೇಸರ ಹೊರಹಾಕಿದ್ದಾರೆ.
ಲೀಟರ್ ಹಾಲಿಗೆ 8 ರೂ. ಹೆಚ್ಚಳ ಮಾಡಲಾಗಿದೆ. ಅರ್ಧ ಲೀಟರ್ ಮೊಸರಿಗೆ 6 ರೂ. ಏರಿಕೆ ಮಾಡಲಾಗಿದೆ. ನವೆಂಬರ್ 1 ರಿಂದ ಹೊಸ ದರಗಳು ಅಧಿಕೃತವಾಗಿ ಜಾರಿಗೆ ಬರಲಿವೆ. ಇದನ್ನೂ ಓದಿ: ರಾಜ್ಯದ ಜನತೆಗೆ KMF ಬಿಗ್ ಶಾಕ್ – ಮೊಸರಿನ ದರ ಪ್ರತಿ ಲೀಟರ್ಗೆ 14 ರೂ. ಹೆಚ್ಚಳ!
ಹಾಲಿನ ದರ ಏರಿಕೆ ಒಕೆ, ಅದರೆ ಮೊಸರಿನ ದರ ಇಷ್ಟೊಂದು ಯಾಕೆ ಎಂದು ಗ್ರಾಹಕರು ಅಸಮಾಧಾನ ಹೊರಹಾಕಿದ್ದಾರೆ. ನಾಳೆಯಿಂದ ಹೊಸ ದರ ಅಂತ ಇಂದೇ ಹೆಚ್ಚಿನ ಹಾಲು ಖರೀದಿಗೆ ಗ್ರಾಹಕರು ಮುಂದಾಗಿದ್ದಾರೆ. ಮೊಸರಿನ ದರ ಹೆಚ್ಚಳದ ಬಗ್ಗೆ ಇನ್ನೂ ಮಾರಾಟಗಾರರಿಗೆ ಮಾಹಿತಿಯೇ ಇಲ್ಲ. ಹಾಲಿನ ದರ ಏರಿಕೆಯ ಲಿಸ್ಟ್ ಮಾತ್ರ ಕೆಎಂಎಫ್ ಕಳುಹಿಸಿದೆ. ಮೊಸರು 14 ರೂಪಾಯಿ ಹೆಚ್ಚಳಕ್ಕೆ ಗ್ರಾಹಕರು ಶಾಕ್ ಆಗಿದ್ದಾರೆ.
ಮೊಸರು 14 ರೂ. ಹೆಚ್ಚಳದ ನ್ಯೂಸ್ ನೋಡಿ ಶಾಕ್ ಆಯ್ತು. 10 ನಿಮಿಷ ಸುಮ್ಮನೇ ಕೂತೆ. ಮಧ್ಯಮವರ್ಗದ ಜನಕ್ಕೆ ದೊಡ್ಡ ಶಾಕ್ ಆಗಿದೆ. 14 ರೂ. ಏಕಾಏಕಿ ಹೆಚ್ಚಳ ಮಾಡಿದ್ರೆ ಹೇಗೆ? ಹಾಲು 8 ರೂ., ಮೊಸರು 14 ರೂ. ಅದ್ಯಾವ ಲೆಕ್ಕಾಚಾರದಲ್ಲಿ ಮಾಡಿದ್ದಾರೋ ಗೊತ್ತಿಲ್ಲ. ಸರ್ಕಾರ ಗ್ರಾಹಕರ ಬಗ್ಗೆ ಯೋಚಿಸಿಲ್ಲ ಎಂದು ಗೃಹಿಣಿಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹಾಲಿನ ದರ ಏರಿಕೆ ಬಿಸಿ; ಟೀ, ಕಾಫಿ ಸೇರಿ ತಿಂಡಿ-ತಿನಿಸುಗಳ ಬೆಲೆಯೂ ದುಬಾರಿ
