ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ಇರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯು ತನ್ನ ಫ್ಯಾಕ್ಟರಿ ಆವರಣ ಸುತ್ತಮುತ್ತ ಶ್ವಾನಗಳನ್ನು ಹಿಂಸಾತ್ಮಕವಾಗಿ ಸೆರೆಹಿಡಿದು ದಟ್ಟ ಅರಣ್ಯದಲ್ಲಿ ಬಿಟ್ಟು ಬರಲಾಗುತ್ತಿದೆ ಎಂದು ದೂರು ನೀಡಿದೆ.
ಪ್ರಾಣಿ ಹಕ್ಕುಗಳ ಹೋರಾಟಗಾರರು ಶ್ವಾನಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ವೇಳೆ ದಾಳಿ ನಡೆಸಿದ್ದು, ಈ ಕುರಿತು ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾರ್ಖಾನೆಯ ಸುತ್ತಮುತ್ತ 30 ರಿಂದ 40 ಶ್ವಾನಗಳನ್ನು ಬಲೆ ಹಾಗೂ ದೊಣ್ಣೆಗಳನ್ನು ಬಳಸಿ ಹಿಂಸಾತ್ಮಕ ರೀತಿಯಲ್ಲಿ ಹಿಡಿಯಲಾಗಿತ್ತು. ಅವುಗಳನ್ನ ಕಾಡಿನಲ್ಲಿ ಬಿಡುತ್ತಿರುವ ಬಗ್ಗೆ ಅಕ್ಷೇಪ ವ್ಯಕ್ತವಾಗಿದೆ. ಶ್ವಾನಗಳನ್ನ ಅನುಮತಿ ಪಡೆಯದೇ , ಕಾನೂನುಬಾಹಿರವಾಗಿ ಹಿಡಿದು ಹಿಂಸಿಸಿ ಅವುಗಳನ್ನ ಕಾಡಿಗೆ ಬಿಡಲಾಗುತ್ತಿದೆ. ಕಾಡುಪ್ರಾಣಿಗಳಿಗೆ ಶ್ವಾನಗಳು ಅಹಾರ ಆಗುವಂತೆ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ.
ಕಾರ್ಖಾನೆಯ ಮಾಲೀಕರು, ಆಡಳಿತ ಮಂಡಳಿ ಹಾಗೂ ಶ್ವಾನ ಹಿಡಿಯಲು ಬಂದ ತಂಡದ ವಿರುದ್ಧ ಹಳಿಯಾಳ ಠಾಣೆಯಲ್ಲಿ ದೂರು ದಾಖಲಾಗಿದೆ.

