ಬೆಂಗಳೂರು: ಈದ್ ಮಿಲಾದ್ (Eid-e-Milad) ಹಬ್ಬದ ಮೆರವಣಿಗೆ ವೇಳೆ ಬಸವನಗುಡಿಯಲ್ಲಿ (Basavanagudi) ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಪ್ರಕರಣ ಸಂಬಂಧ ಎಂಟು ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದ್ದು, ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಬುಧವಾರ ಈದ್ ಮಿಲಾದ್ ಹಬ್ಬವಿದ್ದು, ಬೆಂಗಳೂರಿನ ನಾನಾ ಭಾಗಗಳಿಂದ ಮುಸ್ಲಿಮರು ಮೆರವಣಿಗೆಗಳಲ್ಲಿ ಬಂದು ಖುದ್ದೂಸ್ ಸಾಬ್ ಈದ್ಗಾ ಮೈದಾನಕ್ಕೆ ಸೇರುತ್ತಿದ್ದರು. ಬಸವನಗುಡಿಯ ಕೆ.ಆರ್ ರಸ್ತೆಯಲ್ಲಿ ಬನಶಂಕರಿ ಕಡೆಯಿಂದ ಮೆರವಣಿಗೆ ಮಾಡುತ್ತ ಬರುತ್ತಿದ್ದ ಗುಂಪು ಪುನೀತ್ ಕೆರೆಹಳ್ಳಿ (Puneeth Kerehalli) ಆಫೀಸ್ ಬಳಿ ಬಂದಾಗ ಜೋರಾಗಿ ಘೋಷಣೆ ಕೂಗೋಕೆ ಶುರು ಮಾಡಿದೆ. ಈ ವೇಳೆ ಪುನೀತ್ ಕೆರೆಹಳ್ಳಿ & ಟೀಂ ಜೈ ಶ್ರೀರಾಮ್, ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಆಗ ಎರಡು ಗುಂಪುಗಳ ನಡುವೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಿರಿಕ್ ಆಗಿದೆ. ಇದನ್ನೂ ಓದಿ: 1 Kg ಮಟನ್‌ಗೆ 1,250 ರೂ., ಚಿಕನ್‌ಗೆ 700 ರೂ.; ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ರಾಜಾತಿಥ್ಯಕ್ಕೆ ‘ರೇಟ್ ಫಿಕ್ಸ್’ ಆರೋಪ!
ಹಿಂದೂ-ಮುಸ್ಲಿಮರ ಗಲಾಟೆಯಲ್ಲಿ ಹಿಂದೂ ಕರ‍್ಯರ‍್ತ ಪುನೀತ್ ಗೌಡ ತಲೆಗೆ ಗಂಭೀರ ಹಲ್ಲೆ ನಡೆಸಲಾಗಿದೆ. ತಕ್ಷಣ ಸ್ಥಳದಲ್ಲಿದ್ದ ಪೋಲಿಸರು ಲಾಠಿ ಬೀಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪುನೀತ್ ಕೆರೆಹಳ್ಳಿ ಗ್ಯಾಂಗ್ ಹಲ್ಲೆ ಮಾಡಿದವರನ್ನ ಬಂಧಿಸಬೇಕು ಎಂದು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಪೋಲಿಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು. ಇದನ್ನೂ ಓದಿ: Nepal Flood Horror | 288 ಭಾರತೀಯರು ನಾಪತ್ತೆ, 21 ತಮಿಳಿಗರ ರಕ್ಷಣೆ – ರಾಜ್ಯವಾರು ಮಾಹಿತಿ ಹಂಚಿಕೊಂಡ ಎಂಇಎ
ಗಲಭೆಯಲ್ಲಿ ಭಾಗಿಯಾಗಿದ್ದ ಎರಡು ಗುಂಪುಗಳ ವಿರುದ್ಧ ಮೂರು ಎಫ್‌ಐಆರ್ ದಾಖಲಿಸಿ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ | ರಕ್ಷಾಬಂಧನಕ್ಕೆ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ರಜೆ ಘೋಷಣೆ
ಇನ್ನೂ ಮುಂಜಾಗ್ರತಾ ಕ್ರಮವಾಗಿ ಘಟನೆ ನಡೆದ ಸ್ಥಳದಲ್ಲಿ ಗಿರಿನಗರ, ಜೆಜೆ ನಗರ ಶಂಕರಪುರ, ಹನುಮಂತ ನಗರ ಹಾಗೂ ಬಸವನಗುಡಿ ಠಾಣಾ ಇನ್ಸ್ಪೆಕ್ಟರ್‌ಗಳು ಸೇರಿದಂತೆ ಮೂರು ಕೆಎಸ್‌ಆರ್‌ಪಿ ತುಕಡಿ ಹಾಗೂ ನೂರಕ್ಕೂ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ದಯಾಮರಣ ಕೋರಿದ್ದ ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆ
