– ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಮುಖ್ಯ ಕಚೇರಿಗೆ ಪ್ರತಿಭಟನೆ
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಸೋಮವಾರ (ಆ.24) ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಜು.25ರಂದು ಯುವಕರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಸೆ.5ರಂದು ದೇಶವ್ಯಾಪಿ `ಶಾಂತಿಯುತ’ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ತಿಳಿಸಿದೆ.
ಸೋಮವಾರ ಮಧ್ಯಾಹ್ನ ಸಭೆ ನಡೆಸಿ ನಿರ್ಧಾರ ಕೈಗೊಂಡ ಸಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು, ಯುವಕರ ಪ್ರತಿಭಟನೆಯನ್ನು ಹಿಂದೆ ಪಡೆದ ನಂತರವೂ ಕೇಂದ್ರ ಸರ್ಕಾರವು ತನ್ನ ಮಾತುಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹೀಗಾಗಿ ಸೆ.5ರಂದು ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಮುಖ್ಯ ಕಚೇರಿಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದೆ. ಇದನ್ನೂ ಓದಿ: ಹನೂರು ಶೂಟೌಟ್ ಕೇಸ್ | ಹತ್ತಿರದಿಂದಲೇ ಗುಂಡು – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
ಈ ಸಂಬಂಧ ಸಿಜೆಪಿಯು ಹೇಳಿಕೆ ಬಿಡುಗಡೆ ಮಾಡಿದೆ. ಸೆ.5ರಂದು ಇಂಡಿಯಾ ಗೇಟ್‌ನಿಂದ ಪ್ರಾರಂಭವಾಗಿ ಹೊಸದಿಲ್ಲಿಯ ಪೊಲೀಸ್ ಪ್ರಧಾನ ಕಚೇರಿಯವರೆಗೆ ಶಾಂತಿಯುತ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದೆ. ಮೃತ ನೀಟ್ ಸಂತ್ರಸ್ತರ ಕುಟುಂಬಗಳು ಹಾಗೂ ಜು.20ರಂದು ನಡೆದ `ಸಂಸತ್ ಚಲಾವೋ’ ಮೆರವಣಿಗೆಯಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ನೇತೃತ್ವದಲ್ಲಿ ಈ ಮೆರವಣಿಗೆ ನಡೆಯಲಿದೆ.
ದೇಶದಾದ್ಯಂತದ ವಿದ್ಯಾರ್ಥಿಗಳು, ಯುವ ಸಂಘಟನೆಗಳು ಮತ್ತು ಯುವ ನಾಗರಿಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಸರ್ಕಾರದ `ವಿಶ್ವಾಸಘಾತ’ ಧೋರಣೆಯಿಂದಾಗಿ ತಾವು ಮತ್ತೆ ಬೀದಿಗಿಳಿಯುವಂತೆ ಒತ್ತಾಯಕ್ಕೊಳಗಾಗಿದ್ದೇವೆ ಎಂದು ಸಿಜೆಪಿ ಹೇಳಿದೆ.
The Cockroach Janta Party calls for a peaceful protest march at India Gate, New Delhi on September 5.
The National Working Committee expressed serious doubts over whether the Government of India intends to honour its commitments made to the young generation… pic.twitter.com/XXNIognlmO
— Saurav Das (@SauravDassss) August 24, 2026
ಸರ್ಕಾರ ನಾಟಕವಾಡುತ್ತಿದೆ: ಸಿಜೆಪಿ ಆರೋಪ
ಸರ್ಕಾರವು ಭರವಸೆಗಳನ್ನು ಈಡೇರಿಸುವ ಬದಲು ನಾಟಕವಾಡುತ್ತಿದೆ, ತಾಂತ್ರಿಕ ಅಂಶಗಳ ಹಿಂದೆ ಅಡಗಿಕೊಳ್ಳುತ್ತಿದೆ ಮತ್ತು ಸ್ಪಷ್ಟ ಭರವಸೆಗಳನ್ನು ನೀಡುವುದನ್ನು ತಪ್ಪಿಸುತ್ತಿದೆ ಎಂದು ಸಿಜೆಪಿ ಆರೋಪಿಸಿದೆ. ಸರ್ಕಾರದ ಉದ್ದೇಶದ ಬಗ್ಗೆ ಸಮಿತಿ ಸದಸ್ಯರು ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳಿನಿಂದ ಸರ್ಕಾರವು ವಿಳಂಬ ನೀತಿ ಅನುಸರಿಸುತ್ತಿದೆ ಮತ್ತು ಭಾರತದ ಸುಪ್ರೀಂಕೋರ್ಟ್‌ನಲ್ಲೂ ಸ್ಪಷ್ಟ ನಿಲುವು ತಾಳುವುದನ್ನು ತಪ್ಪಿಸುತ್ತಿದೆ ಎಂದು ಟೀಕಿಸಿದೆ.ಇದನ್ನೂ ಓದಿ: ನಿಮ್ಮ ಹೆಸರಲ್ಲೇ ಇದೆಯಾ ನೀವು ಬಳಸುವ ಸಿಮ್? SIM Swap ವಂಚನೆ ಬಗ್ಗೆ ಇರಲಿ ಎಚ್ಚರ
