ಹಾವೇರಿ: ಇತ್ತೀಚೆಗೆ ಮಕ್ಕಳನ್ನು ಕಿಡ್ನ್ಯಾಪ್ (Kidnap) ಮಾಡುವ ಪ್ರಕರಣಗಳು ಹೆಚ್ಚಾಗಿವೆ. ಅದರೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ (Byadagi) ಪಟ್ಟಣದ ವೈಭವಲಕ್ಷ್ಮಿ ಬಡಾವಣೆ ಹಾಗೂ ಛತ್ರ ರಸ್ತೆ ಸಮೀಪ ಅಪರಿಚಿತರು ಮಕ್ಕಳಿಗೆ ಚಾಕ್ಲೆಟ್ ಮತ್ತು ಚಿಪ್ಸ್ ನೀಡುವ ಆಮಿಷ ಒಡ್ಡಿದ ಘಟನೆ ಆತಂಕಕ್ಕೆ ಕಾರಣವಾಗಿದೆ.
ಇಬ್ಬರು ಅಪರಿಚಿತರು ಮಕ್ಕಳನ್ನು ಮಾತಿಗೆಳೆದು ಚಾಕ್ಲೆಟ್ ಹಾಗೂ ಚಿಪ್ಸ್ ನೀಡಲು ಯತ್ನಿಸಿದ್ದಾರೆ. ಇದರಿಂದ ಹೆದರಿದ ಮಕ್ಕಳು ತಕ್ಷಣ ಮನೆಗಳಿಗೆ ಓಡಿ ಹೋಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೋ ವೈರಲ್ ಆಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಮಕ್ಕಳ ಸುರಕ್ಷತೆ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆಗೆ ಡಿಸಿಪಿ ಆದೇಶ – ಪೊಲೀಸ್ ಠಾಣೆಯ ಡೈರಿಯಲ್ಲಿ ದಾಖಲು
ಪೋಷಕರು ತಮ್ಮ ಮಕ್ಕಳಿಗೆ ಅಪರಿಚಿತರೊಂದಿಗೆ ಮಾತನಾಡದಂತೆ ಹಾಗೂ ಯಾವುದೇ ಆಹಾರ, ಚಾಕ್ಲೆಟ್ ಅಥವಾ ಉಡುಗೊರೆಗಳನ್ನು ಸ್ವೀಕರಿಸದಂತೆ ಎಚ್ಚರಿಕೆ ನೀಡಬೇಕೆಂದು ಮನವಿ ಮಾಡಲಾಗಿದೆ. ಘಟನೆಯ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜಪಾನ್‌ನಲ್ಲಿ ಮತ್ತೆ ಭೂಕಂಪ; ಸುನಾಮಿ ಎಚ್ಚರಿಕೆ, ಹಲವರಿಗೆ ಗಾಯ
