ಬೆಂಗಳೂರು: ರೈತರಿಗೆ (Farmers) 25 ಸಾವಿರ ರೂ. ಪರಿಹಾರ ಕೊಟ್ಟರೆ ಮಾತ್ರ ಸರ್ವಪಕ್ಷ ನಿಯೋಗದಲ್ಲಿ ನಾವು ಹೋಗ್ತೀವಿ ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತಾಡಿದ ಅವರು, ಸರ್ಕಾರ ಶ್ವೇತ ಪತ್ರ ಬಿಡುಗಡೆ ಮಾಡಲು ತಯಾರಿಲ್ಲ.ಸರ್ಕಾರ ಸಮಯ ಕಳೆಯುವ ಕೆಲಸ ಮಾಡುತ್ತಿದೆ ಅಷ್ಟೇ. ಸಿಎಂ ರೈತರಿಗೆ 25 ಸಾವಿರ ರೂ. ಬರ ಪರಿಹಾರ ಕೊಡುತ್ತೇವೆ ಎಂದು ಘೋಷಣೆ ಮಾಡಿ. ಅಂದರೆ ಮಾತ್ರ ನಾವು ನಿಯೋಗದಲ್ಲಿ ಬರುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರ ಹಣ ಬಿಡುಗಡೆ ಮಾಡೋದು ತಡ ಆದ್ರೆ ಸಹಿಸಿಕೊಳ್ಳಬೇಕು: ಪ್ರಿಯಾಂಕ್ ಖರ್ಗೆ
ಕಸ್ತೂರಿ ರಂಗನ್ ವರದಿ (Kasturirangan Report) ವಿಚಾರದಲ್ಲಿ ಸರ್ವಾನುಮತದಿಂದ ತೀರ್ಮಾನ ಆಗಿದೆ. ಹಾಗಾಗಿ ನಾವು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮಾತ್ರ ನಿಯೋಗದಲ್ಲಿ ಬರುತ್ತೇವೆ. ರೈತರಿಗೆ 25000 ರೂ. ಬರ ಪರಿಹಾರ ಕೊಟ್ಟರೆ ಮಾತ್ರ ನಾವು ಬರುತ್ತೇವೆ. ಇಲ್ಲದಿದ್ದರೆ ಸರ್ಕಾರ ಅವರ ತೀರ್ಮಾನ ಮಾಡಬಹುದು ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ 1 ಕೋಟಿ ಮತದಾರರ ಹೆಸರು SIR ನೆಪದಲ್ಲಿ ಡಿಲೀಟ್ ಆಗಿದೆ: ಡಿಕೆಶಿ


