ಬೆಂಗಳೂರು: ಗುತ್ತಿಗೆದಾರರು (Contractors) ಸರ್ಕಾರ ಹಣ ಬಿಡುಗಡೆ ಮಾಡೋದು ತಡ ಆದರೆ ಸಹಿಸಿಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಗುತ್ತಿಗೆದಾರರಿಗೆ ಬಾಕಿ ಬಿಡುಗಡೆ ಮಾಡುವ ವಿಚಾರವಾಗಿ ಶಾಸಕರು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗುತ್ತಿಗೆದಾರರಿಗೆ ನಾನು ಮನವಿ ಮಾಡುತ್ತಿದ್ದೇನೆ. ಹಿಂದಿನ ಸರ್ಕಾರದಲ್ಲಿ ಯಾವ ರೀತಿ ಕಂಟ್ರಾಕ್ಟರ್‌ಗಳಿಗೆ ಬಂದಿದೆ ಗೊತ್ತಿದೆ. ನಮ್ಮ ಸರ್ಕಾರ ಎಷ್ಟೇ ಕಷ್ಟ ಆದರೂ ಕಳೆದ ಸರ್ಕಾರ ಕೊಟ್ಟ ಕೆಲಸಕ್ಕೆ ಪೇಮೆಂಟ್ ಮಾಡುತ್ತಿದ್ದೇವೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಎಷ್ಟು ರಿಲೀಸ್ ಮಾಡಿದ್ದೇವೆ ಕೇಳಿ. ಹಿಂದಿನ ಸರ್ಕಾರ ಮಾಡಿದ ತಪ್ಪು ತಿದ್ದಿ ನಾವು ಕಾಮಗಾರಿ ಕೊಡುತ್ತಿದ್ದೇವೆ. ಅಭಿವೃದ್ಧಿ ನಿಲ್ಲಬಾರದು. ನಿಮ್ಮ ಜೀವನೋಪಾಯ ನಿಲ್ಲಬಾರದು ಅಂತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಸ್ನೇಹಿತನ ಜೊತೆ ಲಾಡ್ಜ್‌ಗೆ ತೆರಳಿದ್ದ ಮಹಿಳೆಯ ರೇಪ್‌ಗೆ ಸುಪಾರಿ ಕೊಟ್ಟ ಪತ್ನಿ!
ಸಿಎಂ ನಿಮಗೆ ಪರಿಚಯ ಇರೋರೆ ಇದ್ದಾರೆ. ಪದೇಪದೇ ಹಣ ಕೊಟ್ಟಿಲ್ಲ ಅನ್ನೋದು ಸರಿಯಲ್ಲ. ಹಿಂದಿನ ಸರ್ಕಾರಕ್ಕೆ ಹೋಲಿಕೆ ಮಾಡಿ ನೀವು. ದೊಡ್ಡ ಪ್ರಮಾಣದಲ್ಲಿ ಅವರು ಏನು ಮಾಡಿದ್ರು. ಯಾವ ಶಾಸಕರು ಕಮಿಷನ್ ಕೇಳೋದು ಇದ್ದರೆ ಮಾಹಿತಿ ಕೊಡಿ. ಕಲಬುರಗಿ, ಮೈಸೂರು ನಡೆದಿದೆಯಾ? ಎಲ್ಲಿ ನಡೆದಿದೆ ಮಾಹಿತಿ ಕೊಡಿ. ಈ ವ್ಯವಸ್ಥೆ ಮಾಡಿದ್ದು ಯಾರು? ಹಿಂದೆ ಖಾಸಗಿ ಗುತ್ತಿಗೆದಾರರ ಲೆಟರ್ ಮೇಲೆ ಕೆಲಸ ಆಗುತ್ತಿತ್ತು. ಈಗ ನಮ್ಮ ಶಾಸಕರ ಲೆಟರ್ ಮೇಲೆ ಕೆಲಸ ಆಗುತ್ತಿದೆ. ನೀವು ಸಹಕಾರ ಕೊಡಬೇಕು. ಇಲ್ಲ ಅಂದರೆ ಕಷ್ಟ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: KSRTC ಬಸ್, ಲಾರಿ ಮಧ್ಯೆ ಭೀಕರ ಅಪಘಾತ – ಬಸ್ ಚಾಲಕ ದುರ್ಮರಣ, ಹಲವರಿಗೆ ಗಾಯ
ಬೇರೆಯವರಿಗೆ ಕಾಮಗಾರಿ ಕೊಟ್ಟರೆ ನೀವೇ ಯಾಕೆ ಅಂತ ಕೇಳ್ತೀರಾ. ನಾವು ಜನರಿಗಾಗಿ ಒಟ್ಟಾಗಿ ಕೆಲಸ ಮಾಡೋಣ. ಸ್ವಲ್ಪ ತಡ ಆದರೆ ಸಹಿಸಿಕೊಳ್ಳಬೇಕಾಗುತ್ತದೆ. ಎಲ್ಲವನ್ನು ನೋಡಬೇಕು. ಜನರಿಗಾಗಿ ಒಟ್ಟಾಗಿ ನಾವು – ನೀವು ಕೆಲಸ ಮಾಡೋಣ ಎಂದು ಕರೆಕೊಟ್ಟರು. ಇದನ್ನೂ ಓದಿ: ಚಾಕು ಅಲ್ಲ ಒಮಾನ್ ಪೈಲಟ್ ಮಚ್ಚರ್‌ಗೆ ಹೊಡೆದಿದ್ದು ಕೊಡಲಿಯಿಂದ!

