– ಬಗೆದಷ್ಟು ತೆರೆದುಕೊಳ್ತಿದೆ `ಹನಿ’ ಕಹಾನಿ
ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆಯುತ್ತಿದ್ದು, ಸಿಸಿಬಿ ಪೊಲೀಸರಿಗೆ ಮತ್ತೊಂದು ಮಜಲಿನ ಸ್ಫೋಟಕ ಮಾಹಿತಿ ಸಿಕ್ಕಿದೆ. ಆರೋಪಿ ರಾಘವೇಂದ್ರ ಅಕ್ರಮ ದಂಧೆಯಲ್ಲಿ ಅವರ ತಾಯಿ ಪಾತ್ರ ಇರುವ ಬಗ್ಗೆ ಸಿಸಿಬಿಗೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿದೆ ಎನ್ನಲಾಗಿದೆ.
ಸಿಸಿಬಿ ಪೊಲೀಸರು ರಾಘವೇಂದ್ರ ತಾಯಿ ಜ್ಯೋತಿ ಮೇಲೆ ಕೂಡ ಒಂದು ಕಣ್ಣಿರಿಸಿದ್ದಾರೆ. ಪಬ್ಲಿಕ್ ಟಿವಿ ಕ್ಯಾಮೆರಾದ ಮುಂದೆ ನಾನು ಮತ್ತು ನನ್ನ ಮಗ ರಾಘವೇಂದ್ರ ಅಮಾಯಕರು. ವಿನಾಕಾರಣ ನಮ್ಮನ್ನ ಬೆದರಿಸುತ್ತಿದ್ದಾರೆಂದು ಹನಿಟ್ರ್ಯಾಪ್ ಕಿಂಗ್‍ಪಿನ್ ರಾಘವೇಂದ್ರನ ತಾಯಿ ಜ್ಯೋತಿ ಕಣ್ಣಿರಿಟ್ಟಿದ್ದರು. ಆದರೆ ಇದೀಗ ಸಿಸಿಬಿ ಪೊಲೀಸರಿಗೆ ಸಿಕ್ಕ ಮಹಿತಿ ಆಕೆಯ ಅಸಲಿಯತ್ತಿನ ಬಗ್ಗೆ ಸಂಶಯ ಮೂಡಿಸಿದೆ. ರಾಘವೇಂದ್ರನ ಅಕ್ರಮ ದಂಧೆಯ ವಿಡಿಯೋ ಸೇರಿದಂತೆ ಹಲವು ದಾಖಲೆಗಳನ್ನ ಲಾಕರ್ ನಲ್ಲಿ ಇಟ್ಟಿದ್ದ ಬಗ್ಗೆ ಮಾಹಿತಿ ಸಿಕ್ಕಿವೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಎದೆ ಮೇಲೆ ಹಚ್ಚೆ, ಶಾಸಕನನ್ನ ಯಾಮಾರಿಸಿದ್ಳು ಚಿಟ್ಟೆ- ಬಗೆದಷ್ಟು ಬಯಲಾಗ್ತಿದೆ ‘ಹನಿ’ಕಹಾನಿ
Advertisement
Advertisement
ಈ ರಾಘವೇಂದ್ರ ಮತ್ತು ಟೀಂ ಸಾಮಾನ್ಯದವರಲ್ಲ. ಬ್ಲಾಕ್ ಮೇಲ್ ಮಾಡಿ ಹಣ ಪಿಕೋದ್ರಲ್ಲಿ ನಿಸ್ಸೀಮರು. ಅರೆಬರೆ ವಿಡಿಯೋ ತೋರಿಸಿ ಇಬ್ಬರು ಶಾಸಕರ ಬಳಿ ಹಣ ಪಿಕುತ್ತಿದ್ದರು. ಆ ಇಬ್ಬರು ಶಾಸಕರ ಹನಿಟ್ರ್ಯಾಪ್ ವಿಡಿಯೋ ಕ್ಲಿಯಾರಿಟಿ ಇಲ್ಲದೇ ಇದ್ದರೂ ಬ್ಲಾಕ್‍ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಗೆದಷ್ಟು ಈ ಹನಿ ಕಹಾನಿ ತೆರೆದುಕೊಳ್ಳುತ್ತಿದೆ. ಇನ್ನೂ ಯಾರೆಲ್ಲಾ ಈ ಕೇಸ್‍ನಲ್ಲಿದ್ದಾರೋ? ಯಾರ‍್ಯಾರ ಬಂಡವಾಳ ಬಯಲಾಗುತ್ತೋ ಕಾದು ನೋಡಬೇಕು. ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ- ಹಾಲಿ ಶಾಸಕರಿಂದ ಪೀಕಿದ್ರು ಬರೋಬ್ಬರಿ 1 ಕೋಟಿ
Advertisement
ರಾಘವೇಂದ್ರ ತಾಯಿ ಜ್ಯೋತಿ ಹೇಳಿದ್ದೇನು?
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ರಾಘವೇಂದ್ರ ತಾಯಿ, ನನ್ನ ಮಗ ಅಂಥವನಲ್ಲ. ಮೊದಲಿಗೆ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಅಲ್ಲಿ ಕೆಲಸದಿಂದ ಹೊರಬಂದು ಬೇರೆ ಕಡೆ ಉದ್ಯೋಗ ಹುಡುಕುತ್ತಿದ್ದಾನೆ. ರಾತ್ರಿ ಮನೆಗೆ ಬಂದ ಪೊಲೀಸರು, ಮನೆ ಪರಿಶೀಲನೆ ನಡೆಸಿದರು. ರಾತ್ರಿಯೆಲ್ಲ ಮನೆಯಲ್ಲಿಯೇ ಕುಳಿತಿದ್ದರೂ, ನಮಗೆ ಏನೂ ಹೇಳಲಿಲ್ಲ. ಮೊಬೈಲ್ ಕಿತ್ತುಕೊಂಡು ಮಗನಿಗೆ ಬರುವಂತೆ ಹೇಳುವಂತೆ ಹೇಳಿದ್ದರು.
Advertisement
ಮತ್ತೆ ಬಂದು ಮನೆಯಲ್ಲಿದ್ದ ಮೆಮೊರಿ ಕಾರ್ಡ್, ಪೆನ್‍ಡ್ರೈವ್ ರೀತಿಯಲ್ಲಿರುವ ಒಂದು ವಸ್ತು, ಚಿಕಿತ್ಸೆಗಾಗಿ ತೆಗೆದಿಟ್ಟಿದ್ದ 50 ಸಾವಿರ ರೂ. ಮತ್ತು ದೇವರ ಮನೆಯಲ್ಲಿಟ್ಟಿದ್ದ ಕಿವಿಯೋಲೆಯನ್ನು ಮಹಿಳಾ ಪೇದೆ ತೆಗೆದುಕೊಂಡು ಹೋಗಿದ್ದಾರೆ. ಪಬ್ಲಿಕ್ ಟಿವಿ ಮೂಲಕ ಮಗನ ಬಂಧನದ ಸುದ್ದಿ ತಿಳಿಯಿತು. ಮನೆಯಲ್ಲಿ ವಯಸ್ಸಾದ ತಾಯಿಯೊಂದಿಗೆ ಇದ್ದೇನೆ. ನಾವಿಬ್ಬರೂ ಹೆಣ್ಣು ಮಕ್ಕಳೇ ಮನೆಯಲ್ಲಿದ್ದೇವೆ. ನಾವು ಅಮಾಯಕ. ಬೇರೆಯವರ ಸಂಚಿಗೆ ಮಗ ಬಲಿಯಾಗಿರಬೇಕು ಎಂದು ರಾಘವೇಂದ್ರ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಹನಿ ಮನಿ ಕಾಮಿನಿ ಸುಳಿಯಲ್ಲಿ ಶಾಸಕರು – ಹಾರ್ಡ್ ಡಿಸ್ಕ್ ನಲ್ಲಿತ್ತು 10 ಜನರ ವಿಡಿಯೋ
ಆತ ಯಾರೊಂದಿಗೆ ಹೆಚ್ಚು ಸೇರಲ್ಲ. ನಮಗೆ ಇಲ್ಲಿ ಯಾರೂ ಸಂಬಂಧಿಕರಿಲ್ಲ. ಎಲ್ಲಿ ಹೋಗಬೇಕು ಮತ್ತು ಯಾರನ್ನ ಸಂಪರ್ಕಿಸಬೇಕು ಎಂಬುವುದು ನಮಗೆ ಗೊತ್ತಿಲ್ಲ. ಇರೋ ಒಬ್ಬ ಮಗ ಯಾರ ತಂಟೆಗೂ ಹೋಗದವನು. ಆತ ತಪ್ಪು ಮಾಡಿಲ್ಲ ಎಂಬುವುದು ನನ್ನ ನಂಬಿಕೆ. ಒಂದು ವೇಳೆ ಪೊಲೀಸ್ ತನಿಖೆ ವೇಳೆ ತಪ್ಪಿತಸ್ಥ ಎಂದು ಸಾಬೀತಾದ್ರೆ ಮಗನೊಂದಿಗಿನ ಸಂಬಂಧವನ್ನು ಕಳೆದುಕೊಂಡು, ಅನಾಥಳಂತೆ ಮುಂದಿನ ಜೀವನ ನಡೆಸುತ್ತೇನೆ ಎಂದಿದ್ದರು.