Thursday, 25th April 2019

2 years ago

ಬರಗಾಲ ದೂರ ಮಾಡಿದ ಭಗೀರಥ – ಊರ ಜನರ ಕಷ್ಟಕ್ಕೆ ಹೆಗಲು ಕೊಟ್ಟ ಚಿಕ್ಕೋಡಿಯ ಸಣ್ಣಪ್ಪ

ಚಿಕ್ಕೋಡಿ: ಎಲ್ಲಿ ನೋಡಿದರೂ ಹಚ್ಚ ಹಸಿರು. ಬಾಯಾರಿಕೆ ನೀಗಿಸಿಕೊಳ್ಳುತ್ತಿರುವ ಜಾನುವಾರುಗಳು. ಇದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ದೃಶ್ಯ. ಹೀಗೆ ಹಸಿರ ಹೊದಿಕೆ ನಿರ್ಮಾಣವಾಗಲು ಮತ್ತು ಮೂಕ ಪ್ರಾಣಿಗಳಿಗೆ ನೀರು ಸಿಗುವಂತೆ ಮಾಡಿರುವವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸಣ್ಣಪ್ಪ ಕಮತೆ. ಹುಕ್ಕೇರಿ ತಾಲೂಕಿನ ಹೀರಾ ಶುಗರ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿರೋ ಸಣ್ಣಪ್ಪ ಅವರಿಗೆ ಕೃಷಿ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ತಮ್ಮ ಕಾರ್ಯಸ್ಥಾನದ ಸಮೀಪದಲ್ಲೇ ಇರೋ ಹುಟ್ಟೂರಿನಲ್ಲಿದ್ದ ತಮ್ಮ ಪೂರ್ವಿಕರ 13 ಎಕರೆ ಬಂಜರು […]

2 years ago

ಲಿಂಗಾಯತ ಕೋಟಾದಡಿ ಟಿಕೆಟ್ ತಗೆದುಕೊಳ್ಳುವಾಗ ಪ್ರತ್ಯೇಕ ಧರ್ಮ ಯಾಕಾಗಬಾರದು: ಮಾತೆ ಮಹಾದೇವಿ

ಬೆಳಗಾವಿ: ಜಗವ ಬದುಕಲು ನಮ್ಮ ಆದಿ ಬಸವಾದಿ ಶರಣರು ವಚನ ಸಾಹಿತ್ಯ ನೀಡಿದರು. ಆದ್ರೆ ಜಾತಿ ವಾದಿಗಳಿಂದ ಅದಕ್ಕೆ ಆಪತ್ತು ಬಂದು ಎರಗಿತು ಎಂದು ಬಸವಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಮಹಾದೇವಿ ಹೇಳಿದ್ದಾರೆ. ಲಿಂಗಾಯತ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ವೀರಶೈವರು ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಉಪಚಾರ ಮಾಡಿಕೊಂಡಿದ್ದಾರೆ. ನೀವು ಟಿಕೆಟ್ ಪಡೆದುಕೊಳ್ಳುವಾಗ ಲಿಂಗಾಯತ...

ಔಷಧಿ ಸೇವಿಸಲು ಬಿಸಿ ನೀರಿಗಾಗಿ 2 ಗಂಟೆ ಪರದಾಡಿದ ಮಾಜಿ ಪ್ರಧಾನಿ!

2 years ago

ಬೆಳಗಾವಿ: ದೇಶದ ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಕುಡಿಯಲು ಒಂದು ಗ್ಲಾಸ್ ಬಿಸಿನೀರು ಸಿಗದೆ ಪರದಾಡಿದ ಘಟನೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ನಡೆದಿದೆ. ಪಕ್ಷ ಸಂಘಟನೆಗಾಗಿ ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ...

ಶತಾಯುಷಿ, ರಂಗಭೂಮಿ ಭೀಷ್ಮ ಏಣಗಿ ಬಾಳಪ್ಪ ಇನ್ನಿಲ್ಲ

2 years ago

ಬೆಳಗಾವಿ: ನಾಟ್ಯ ಭೂಷಣ, ನಾಡೋಜ, ಶತಾಯುಷಿ, ರಂಗಭೂಮಿ ಭೀಷ್ಮ ಬಾಳಪ್ಪ (104) ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಾಳಪ್ಪ ಅವರಿಗೆ ಕಳೆದ ಮೂರು ವರ್ಷಗಳಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಶತಾಯುಷಿ ಬಾಳಪ್ಪ ಅವರು ಏಣಗಿ ಗ್ರಾಮದಲ್ಲಿ...

ತುತ್ತು ಅನ್ನಕ್ಕಾಗಿ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅಲೆದಾಟ-ಯಾವುದು ಸತ್ಯ? ಯಾವುದು ಸುಳ್ಳು?

2 years ago

ಕಾರವಾರ/ಹುಬ್ಬಳ್ಳಿ/ಬೆಳಗಾವಿ: ತೆರೆಯ ಮೇಲೆ ಜನರನ್ನು ರಂಜಿಸಿ ಅದೆಷ್ಟೋ ಪಾತ್ರಕ್ಕೆ ಜೀವ ತುಂಬಿದ ಮೇರು ಕಲಾವಿದ ಸದಾಶಿವ ಬ್ರಹ್ಮಾವರ್ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬೀದಿ ಬೀದಿ ಅಲೆದಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಕುಮಟಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸದಾಶಿವ ಅವರು ನಾನು ಮನೆಯಲ್ಲಿ...

ಬೆಳಗಾವಿ: ಧ್ವಜಾರೋಹಣ ವೇಳೆ ಸಂಸದ ಪ್ರಕಾಶ್ ಹುಕ್ಕೇರಿ, ಎಂಎಲ್‍ಸಿ ಮಧ್ಯೆ ಮಾತಿನ ಚಕಮಕಿ

2 years ago

ಬೆಳಗಾವಿ: ಇಂದು ದೇಶದ್ಯಾಂತ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಜಿಲ್ಲೆಯ ಚಿಕ್ಕೋಡಿಯಲ್ಲಿ ಸಾರ್ವಜನಿಕ ಧ್ವಜಾರೋಹಣದ ವೇಳೆ ಸಂಸದ ಪ್ರಕಾಶ್ ಹುಕ್ಕೇರಿ ಮತ್ತು ಎಂಎಲ್‍ಸಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಚಿಕ್ಕೋಡಿ ಪಟ್ಟಣದ ಆರ್‍ಡಿ ಕಾಲೆಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ...

ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್‍ಗೆ ಆರ್ಥಿಕ ಸಂಕಷ್ಟ

2 years ago

ಬೆಳಗಾವಿ: ಖ್ಯಾತ ನಿರ್ಮಾಪಕ ಆನಂದ ಅಪ್ಪುಗೋಳ್ ಅವರು ಅಧ್ಯಕ್ಷರಾಗಿರುವ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. ನೋಟ್ ಬ್ಯಾನ್ ಆದ ನಂತರ ಸುಧಾರಿಸಿಕೊಳ್ಳಲಾಗದೇ ಬ್ಯಾಂಕ್‍ನ ಆರ್ಥಿಕ ಸ್ಥಿತಿ ಬಿಗಡಾಯಿಸಿದೆ. ಸುಮಾರು 300 ಕೋಟಿ ರೂಪಾಯಿ ಠೇವಣಿ,...

ಆರ್ಮರ್ ಟ್ಯಾಂಕ್ ಅಪಘಾತದಲ್ಲಿ ಚಿಕ್ಕೋಡಿ ಯೋಧ ಮೃತ- ಸ್ವಗ್ರಾಮದಲ್ಲಿ ಅಂತಿಮ ದರ್ಶನ

2 years ago

ಚಿಕ್ಕೋಡಿ: ರಾಜಸ್ಥಾನದ ಮಿಲಿಟರಿ ನೆಲೆಯ 422ನೇ ಎಂಜಿನಿಯರ್ ಇಂಡಿಪೆಂಡೆಂಟ್ ಸ್ಕಾಡ್ ನ ಆರ್ಮರ್ ಟ್ಯಾಂಕ್ ಅಪಘಾತದಲ್ಲಿ ಯೋಧರೊಬ್ಬರು ಆಗಸ್ಟ್ 7ರಂದು ಮೃತಪಟ್ಟಿದ್ದರು. ಚಿಕ್ಕೋಡಿ ತಾಲೂಕು ಕರೋಶಿ ಗ್ರಾಮದ ಯೋಧ ಬಸವರಾಜ ಗುರುಸಿದ್ದ ಉಪಾಸೆ ಅವರ ಪಾರ್ಥಿವ ಶರೀರ ಇಂದು ಬೆಳಗಿನ ಜಾವ...