BelgaumDistrictsKarnatakaLatestMain Post

ಬೆಳಗಾವಿಯಲ್ಲಿ ಉಕ್ಕಿಹರಿದ ಹಾಲಾತ್ರಿ ಹಳ್ಳ – ಹೆಗಲ ಮೇಲೆ ಮಕ್ಕಳ ದಾಟಿಸಿದ ತಂದೆ

Advertisements

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಂತುರ್ಗಾ ಗ್ರಾಮದ ಬಳಿ ಹಾಲಾತ್ರಿ ಹಳ್ಳ ಉಕ್ಕಿ ಹರಿಯುತ್ತಿದೆ.

ಹಾಲಾತ್ರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಖಾನಾಪುರ ಪಟ್ಟಣದಿಂದ 30 ಹಳ್ಳಿಗಳ ಸಂಪರ್ಕ ಕಟ್ ಆಗಿದೆ. ಹೀಗಾಗಿ ಜೀವಭಯದಲ್ಲೇ ಬೈಕ್ ಸವಾರರು ಹರಸಾಹಸ ಪಡುತ್ತಿದ್ದಾರೆ. ಸಿಂಧನೂರು – ಹೆಮ್ಮಡಗಾ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದ ಪರಿಣಾಮ ವ್ಯಕ್ತಿಯೊಬ್ಬರು ತಮ್ಮ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ದಾಟಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ 55ನೇ ವಾರ್ಡ್ ಗೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಇವರೇ ಕಾರಣ

ಖಾನಾಪೂರ ಪೋಲಿಸ್ ತರಬೇತಿ ಕೇಂದ್ರಕ್ಕೂ ಪ್ರವಾಹದ ಭೀತಿ ಎದುರಾಗಿದೆ. ಪೊಲೀಸ್ ತರಬೇತಿ ಕೇಂದ್ರದ ಪಕ್ಕದಲ್ಲಿರುವ ಕುಂಬಾರಹಳ್ಳಕ್ಕೆ ನೀರು ನುಗ್ಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ತರಬೇತಿ ಕೇಂದ್ರದಿಂದ ತಾಲೂಕು ಆಡಳಿತಕ್ಕೆ ಪತ್ರ ಬರೆಯಲಾಗಿದೆ. ಖಾನಾಪುರ ತಹಶಿಲ್ದಾರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಪತ್ರ ರವಾನಿಸಲಾಗಿದೆ. ಸ್ಥಳಾಂತರಗೊಳ್ಳುವ ಪರಿಸ್ಥಿತಿ ಬಂದರೆ ಸ್ಥಳಾಂತರಕ್ಕೆ ಕಲ್ಯಾಣ ಮಂಟಪ ಸೇರಿ ಕೆಲ ಕಟ್ಟಡ ಕಾಯ್ದಿರಿಸಲು ಮನವಿ ಮಾಡಲಾಗಿದೆ.

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮಲಪ್ರಭಾ ಪ್ರವಾಹಕ್ಕೆ ತರಬೇತಿ ಶಾಲೆ ತುತ್ತಾಗಿತ್ತು. ಸದ್ಯಕ್ಕೆ ಪೊಲೀಸ್ ತರಬೇತಿ ಶಾಲೆಗೆ ನೀರು ನುಗ್ಗುವ ಆತಂಕ ಇಲ್ಲ. ಇದೇ ರೀತಿ 15 ದಿನ ಮಳೆ ಬಂದ್ರೆ ಪೊಲೀಸ್ ತರಬೇತಿ ಶಾಲೆಗೆ ನೀರು ನುಗ್ಗಬಹುದು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತಕ್ಕೆ ಪತ್ರ ಬರೆದು ಮನವಿ ಮಡಿಕೊಳ್ಳಲಾಗಿದೆ ಎಂದು ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ಆಮಸಿದ್ಧ ಗೋಂಧಳೆ ಹೇಳಿದ್ದಾರೆ.

Live Tv

Leave a Reply

Your email address will not be published.

Back to top button